Breaking News
Home / ರಾಜಕೀಯ / ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

Spread the love

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ಪ್ರಕಾಶ್​ ರಾಜ್​ (ಪ್ರಕಾಶ್​ ರೈ) ಅವರು ಬಹುಭಾಷೆಯಲ್ಲಿ ಫೇಮಸ್​. ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತಮಿಳು, ತೆಲುಗಿನಲ್ಲಿಯೂ ಅವರು ನಟಿಸಿ ಗೆದ್ದಿದ್ದಾರೆ. ಅನೇಕ ವರ್ಷಗಳಿಂದ ಅವರು ಟಾಲಿವುಡ್​ ಮಂದಿಗೆ ಚಿರಪರಿಚಿತರು. ಆದರೆ ಈಗ ಏಕಾಏಕಿ ತೆಲುಗು ಚಿತ್ರರಂಗದ ಕೆಲವರು ‘ಪ್ರಕಾಶ್​ ರಾಜ್​ ನಮ್ಮವನಲ್ಲ’ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ಎಲೆಕ್ಷನ್​!

ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ (MAA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಕಾಶ್​ ರಾಜ್​ ತೀರ್ಮಾನಿಸಿದ್ದಾರೆ. ಆದರೆ ಅವರು ಈ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಪ್ರಕಾಶ್​ ರಾಜ್​ ಮೂಲತಃ ಕನ್ನಡದವರು. ಅವರ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಎಂಎಎ ಎಲೆಕ್ಷನ್​ನಲ್ಲಿ ಸ್ಪರ್ಧಿಸುವುದು ಸರಿಯಲ್ಲ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ಪ್ರಕಾಶ್​ ರಾಜ್​ ಖಡಕ್​ ತಿರುಗೇಟು ನೀಡಿದ್ದಾರೆ.

‘ನಾನು ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡಾಗ ಯಾರೂ ಕೂಡ ನಾನು ಸ್ಥಳೀಯನಲ್ಲ ಎಂದು ಹೇಳಲಿಲ್ಲ. ನನ್ನ ಸಹಾಯಕರಿಗಾಗಿ ನಾನು ಹೈದರಾಬಾದ್​ನಲ್ಲಿ ಮನೆ ಖರೀದಿಸಿದೆ. ನನ್ನ ಮಗ ಹೈದರಾಬಾದ್​ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್​ ವಿಳಾಸ ಕೂಡ ಹೈದರಾಬಾದ್​ನದ್ದು. ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ? ನಾನು ಸ್ಥಳೀಯನಲ್ಲ ಎಂದು ಕೇಳುವವರ ಸಂಕುಚಿತ ಮನೋಭಾವವನ್ನು ಇದು ತೋರಿಸುತ್ತದೆ’ ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ.

ಎಲೆಕ್ಷನ್​ನಲ್ಲಿ ಸ್ಪರ್ಧಿಸಬೇಕು ಎಂದು ಪ್ರಕಾಶ್​ ರಾಜ್​ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದಲ್ಲ. ಒಂದು ವರ್ಷದಿಂದ ಈ ಬಗ್ಗೆ ಆಲೋಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ‘ಮೂರು ದಶಕಗಳಿಂದ ನಾನು ಈ ಚಿತ್ರರಂಗದಲ್ಲಿ ಇದ್ದೇನೆ. ಸದ್ಯದ ಬೆಳವಣಿಗೆಗಳ ಬಗ್ಗೆ ನನಗೆ ಸಮಾಧಾನವಿಲ್ಲ. ದೂಷಣೆ ಮಾಡುವುದು ಸುಲಭ. ಆದರೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಅಧ್ಯಕ್ಷನಾಗಲು ನಾನು ಸೂಕ್ತ ಎಂದು ನನ್ನ ಸಹ-ಕಲಾವಿದರು ಹೇಳಿದರು. ಕಳೆದ ವರ್ಷದ ಘಟನೆಗಳನ್ನು ನೋಡಿದ ಬಳಿಕ ನಾನು ಈ ತೀರ್ಮಾನಕ್ಕೆ ಬಂದೆ’ ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ