Breaking News

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

Spread the love

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ.

 

ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಮತ್ತೊಂದು ಕಾರು ರಸ್ತೆಯಿಂದ ಐದು ಮೀಟರ್‌ ದೂರದಲ್ಲಿರುವ ಮನೆಯೊಂದರ ಛಾವಣಿ ಮೇಲೆ ಹೋಗಿ ಕುಳಿತಿತ್ತು.

ಬುಧವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ಧರಂಪುರದಿಂದ ನೆರ್ಚೌಕ್‌ನತ್ತ ಸಾಗುತ್ತಿದ್ದ ಆಲ್ಟೋ ಕಾರೊಂದು ಹೀಗೆ ತಡೆ ಗೋಡೆ ಮೇಲೆ ಹೋಗಿ ಕುಳಿತುಬಿಟ್ಟಿದೆ. ಘಟನೆ ಸಂದರ್ಭದಲ್ಲಿ ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಇದ್ದರು.

ಇಲ್ಲಿನ ಜಬೋತ್‌ ಸೇತುವೆ ಮೇಲೆ ಹೋಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಹಾಗೆ ತಡೆಗೋಡೆ ಮೇಲೆ ಕುಳಿತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ