Breaking News
Home / 2021 / ಮೇ / 09 (page 3)

Daily Archives: ಮೇ 9, 2021

ಮೈಸೂರು: ಆಸ್ಪತ್ರೆ ಶೌಚಾಲಯದಲ್ಲೇ ಕೋವಿಡ್‌ ಸೋಂಕಿತ ನೇಣಿಗೆ ಶರಣು!

ಮೈಸೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌ ಸೋಂಕಿತನೊಬ್ಬ ಆಕ್ಸಿಜನ್‌ ಒದಗಿಸುವ ಪೈಪ್‌ನಿಂದಲೇ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಯಗಿರಿ ನಿವಾಸಿ ದೇವರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಗರದ ಟ್ರಾಮಾ ಕೇರ್‌ ಸೆಂಟರ್‌ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Read More »

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಆಟೋದಲ್ಲಿ ಪ್ರಾಣಬಿಟ್ಟ ಪೇಂಟರ್!

ಮೈಸೂರು: ಏಣಿಯಿಂದ ಬಿದ್ದು ಗಾಯಗೊಂಡಿದ್ದ ಪೇಂಟರ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಆಟೋದಲ್ಲಿ ಮೃತಪಟ್ಟ ದಾರುಣ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಕೆ.ಆರ್. ನಗರ ತಾಲೂಕಿನ ಮಿರ್ಲೆ ಗ್ರಾಮದ ನಿವಾಸಿ ಶ್ರೀಕಾಂತ್ (34) ಮೃತ ದುರ್ದೈವಿ ಮನೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಬೆಳಗೊಳದ ಬಳಿ ಮನೆಗೆ ಬಣ್ಣ ಹೊಡೆಯುವಾಗ ಏಣಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೈ ಸೇರಿ ದೇಹದ ಹಲವು ಕಡೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಮೈಸೂರಿನ ಆಸ್ಪತ್ರೆಗೆ …

Read More »

ಚಾಮರಾಜನಗರ ; ಒಂದೇ ದಿನ ೧೪ ಸೋಂಕಿತರು ಸಾವು

ಚಾಮರಾಜನಗರ: ಕಳೆದ ಸೋಮವಾರ ಒಂದೇ ದಿನ ಆಕ್ಸಿಜನ್‌ ಕೊರತೆಯಿಂದ ೨೪ ಜನ ಸೋಂಕಿತರು ಮೃತಪಟ್ಟು ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜನಗರ ಜಿಲ್ಲಸ್ಪತ್ರೆಯಿಂದ ಇಂದು ಮತ್ತೊಂದು ಕಳವಳದ ಸುದ್ದಿ ಹೊರ ಬಿದ್ದಿದೆ. ಈ ಆಸ್ಪತ್ರೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 4,186 ಮಂದಿ ಕೊರೊನಾ ಸೋಂಕಿತರು ಇದ್ದಾರೆ. ಇವರಲ್ಲಿ 50 …

Read More »

ತಾಯಿಗಾಗಿ ದೇವಸ್ಥಾನ ನಿರ್ಮಿಸಿದ ಶಾಸಕ ರಾಜೂಗೌಡ

ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು ಕೂಡ ಸರಿಸಮಾನರಲ್ಲ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು ಅವರ ತಂದೆ-ತಾಯಿಯರನ್ನು ವಯಸ್ಸಾದ ಬಳಿಕ ಕೈಬಿಟ್ಟ ಪ್ರಕರಣ ನಮ್ಮ ಕಣ್ಣ ಮುಂದಿವೆ. ಇವುಗಳ  ಮಧ್ಯೆ ಯಾದಗಿರಿ ಸುರಪುರದ ಶಾಸಕ ರಾಜೂಗೌಡ ಮಾತ್ರ ವಿಭಿನ್ನವಾಗಿದ್ದಾರೆ. ಅವರ …

Read More »

ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ

ದಾವಣಗೆರೆ: ರಂಜಾನ್ ಹಬ್ಬಕ್ಕೆ ದಾವಣಗೆರೆ ಪೊಲೀಸರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಲಾಕ್‍ಡೌನ್ ನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಒಂದೊತ್ತಿನ ಊಟಕ್ಕೂ ಸಹ ಕಷ್ಟವಾಗುತ್ತದೆ. ರಂಜಾನ್ ಹಬ್ಬ ಬಂದಿದ್ದು, ಕೂಲಿ ಮಾಡುವ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಇವರ ಕಷ್ಟವನ್ನು ನೋಡಿದ ದಾವಣಗೆರೆಯ ಅಜಾದ್ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶೈಲಜಾ ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ …

Read More »

ಬಿಜೆಪಿಯೇ ಬೆಡ್‌ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್: ದಿನೇಶ್ ಗುಂಡೂರಾವ್

ಬೆಂಗಳೂರು, ಮೇ 08: ಬೆಡ್ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್ ಹಾಗೂ ಸೂತ್ರದಾರ ಎರಡೂ ಬಿಜೆಪಿಯೇ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ ನಾಟಕ ಮಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ಹಾಗೂ ಬಿಜೆಪಿಯ ಕಾರ್ಯಕರ್ತರು ಪುಡಿರೌಡಿಗಳಂತೆ ವರ್ತನೆ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಸಂಸದ ಹಾಗೂ ಶಾಸಕರು ವಾರ್ ರೂಂ ಮೇಲೆ ದಾಳಿ ಮಾಡಿ …

Read More »

ಮುಧೋಳ, ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮತಿ, ಮೇ 17 ರಿಂದ ಕಾರ್ಯಾರಂಭ

ಕಲಬುರಗಿ: ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ‌ ಅನುಮತಿ ಸಿಕ್ಕಿದ್ದು, ಶೀಘ್ರವೇ ಉತ್ಪಾದನೆ ಆರಂಭಿಸಲಿವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಮತ್ತು ಬೆಳಗಾವಿಯಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ‌ ಅನುಮತಿ ದೊರೆತಿದೆ. ದೇಶದಲ್ಲಿ ಈ ಹಿಂದೆ ರೆಮ್ ಡೆಸಿವರ್ ಉತ್ಪಾದನೆಗೆ ಕೇವಲ ಎರಡು ಕಡೆ ಅನುಮತಿ ನೀಡಲಾಗಿತ್ತು. ಇತ್ತೀಚಿಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ …

Read More »

ಬೆಳಗಾವಿ: ಜನರಿಗೆ ಸ್ಪಂದಿಸಲು ಸಂಸದೆ ಮಂಗಲಾ ಅಂಗಡಿ ತಾಕೀತು

ಬೆಳಗಾವಿ: ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಜಿಲ್ಲಾ ಕೋವಿಡ್ 19 ವಾರ್ ರೂಂ’ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು. ‘ಇಲ್ಲಿ ನೀಡಲಾಗಿರುವ ಹಲವು ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರು ಮಾಹಿತಿ ಹಾಗೂ ಸಹಾಯಕ್ಕಾಗಿ ಪರದಾಡುವಂತಾಗಿದೆ. ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸೂಚಿಸಿದರು. ‘ಕೋವಿಡ್ ಸಹಾಯವಾಣಿ ಸಂಖ್ಯೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಕ್ಷಣ ಹಾಗೂ …

Read More »

ಬೆಳ್ಳಂಬೆಳ್ಳಿಗ್ಗೆ ಗಂಗಾವತಿ ನಗರಕ್ಕೆ ಕರಡಿ ಪ್ರವೇಶ: ಮೂರು ಜನರ ಮೇಲೆ ಮಾರಣಾಂತಿಕ ದಾಳಿ

ಗಂಗಾವತಿ: ಗಂಗಾವತಿ ನಗರದ ಬಳಿಗೇರ್ ಓಣಿ ಬಸ್ ನಿಲ್ದಾಣದ ಹಿಂದಿನ ಓಣಿಗೆ ಕರಡಿಯೊಂದು ನುಗ್ಗಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೋರ್ವನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಘಟನೆ ಗಂಗಾವತಿಯಲ್ಲಿ ರವಿವಾರ ಬೆಳ್ಳಂಬೆಳ್ಳಿಗ್ಗೆ ಜರುಗಿದೆ. ಗಂಗಾವತಿ ಬಸ್ ಡಿಪೋ ಕಡೆಯಿಂದ ಆಗಮಿಸಿದ ಕರಡಿ ಬೆಳ್ಳಿಗ್ಗೆ ಮನೆಯ ಮುಂದೆ‌ ಕೆಲಸ ಮಾಡುತ್ತಿದ್ದ ನಂದಾಬಾಯಿ (59 ವ), ಈಶ್ವರಮ್ಮ (60 ವ) ಹಾಗೂ ನೆಹರು ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಶೇರ್ …

Read More »

ಆಮ್ಲಜನಕ ಟ್ಯಾಂಕರ್ ಗಳಿಗೆ2 ತಿಂಗಳು ಟೋಲ್ ಶುಲ್ಕ ವಿನಾಯಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ ಮಾಡುವ ಟ್ಯಾಂಕರ್ ಗಳಿಗೆ ಹೆದ್ದಾರಿಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ ಕೊರೊನಾ ಸೋಂಕಿತರಿಗಾಗಿ ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ ಇರುವ ಕಾರಣ ತುರ್ತು ಸೇವೆ ಎಂದು ಪರಿಗಣಿಸಲಾಗಿದ್ದು, ಎರಡು …

Read More »