Breaking News
Home / 2021 / ಮೇ / 09 (page 2)

Daily Archives: ಮೇ 9, 2021

ಅಚ್ಛೇದಿನ್? ನಳೀನ್ ಕುಮಾರ ಕಟೀಲು ಎಲ್ಲಿ ಅಡಗಿಕೊಂಡಿದ್ದಾರೆ?: ಲಕ್ಷ್ಮಿ ಹೆಬ್ಬಾಳಕರ್

ಕೊರೋನಾ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಛೇ ದಿನ್? ನಮಗೆ ಅಚ್ಛೇ ದಿನ್ ಬೇಡ. 2013ರಲ್ಲಿದ್ದಂತಹ ದಿನಗಳೇ ಇದ್ದರೆ ಸಾಕು ಎಂದು ರಾಷ್ಟ್ರದ ಜನರು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ …

Read More »

ನೀವು ‘ಕೊರೋನಾ ಸೋಂಕಿತ’ರಾಗಿದ್ದೀರಾ.? ಹಾಗಿದ್ದರೇ ಭಯಬೇಡ.! ‘ಆನ್ ಲೈನ್’ನಲ್ಲೇ ‘ತಜ್ಞ ವೈದ್ಯ’ರಿಂದ ಸಲಹೆ ಪಡೆಯಿರಿ.!

ರಾಜ್ಯಾಧ್ಯಂತ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ದಿನವೊಂದಕ್ಕೆ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹೊಸದಾಗಿ ಪರೀಕ್ಷೆಯಿಂದ ದೃಢಪಡುತ್ತಿದೆ. ಈ ಸಮಯದಲ್ಲಿ ಬೇಕಿರೋದು ಸೋಂಕಿತರಾದವರಿಗೆ ಧೈರ್ಯ. ಜೊತೆಗೆ ತಜ್ಞ ವೈದ್ಯರ ಸಲಹೆ. ಹಾಗಿದ್ದರೇ ನೀವು ಕೊರೋನಾ ಸೋಂಕಿತರಾಗಿದ್ದೀರಾ.? ಆಸ್ಪತ್ರೆಗೆ ಅನವಶ್ಯಕ ಭೇಟಿ ಕಡಿಮೆ ಮಾಡಿ, ತಜ್ಞ ವೈದ್ಯರಿಂದ ಆನ್ ಲೈನ್ ನಲ್ಲೇ ಹೇಗೆ ಚಿಕಿತ್ಸೆಯ ಸಲಹೆ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ಓದಿ.. ಕೊರೋನಾ ಸೋಂಕಿನ ವೈರಸ್ ಅಬ್ಬದ …

Read More »

ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಅಮ್ಮ ಎಂಬ ಪದ ಮಗು ತನ್ನ ಮೊದಲ ತೊದಲು ನುಡಿಯಲ್ಲೇ ಹೇಳುವ ಪದ. ಏನು ಅರಿಯದ ಸಮಯದಲ್ಲಿ ಒಡಲೊಳಗೆ ಬೆಚ್ಚಗೆ ಇರಿಸಿ ಕಾಪಾಡಿದ ಅಮ್ಮ ಇನ್ನು ಪ್ರಪಂಚಕ್ಕೆ ಲಗ್ಗೆಯಿಟ್ಟ ಮೇಲೆ ಪ್ರತಿ ಹೆಜ್ಜೆಯ ಜೊತೆಯಾದಳು ಅಮ್ಮ. ನಾವು ನಮ್ಮನ್ನು ಅರಿತುಕೊಳ್ಳುವ ಮೊದಲೇ ಅಮ್ಮನನ್ನು ಅವಲಂಬಿಸಿ ಪ್ರತಿ ಅಮ್ಮನ ಭಾವನೆಗಳಿಗೆ ಸ್ಪಂದಿಸಿರುತ್ತೇವೆ. ಜಗತ್ತಲ್ಲಿ ಅಮ್ಮನ ಪ್ರೀತಿ, ತ್ಯಾಗ ಮತ್ತು ವಾತ್ಸಲ್ಯಕ್ಕೆ ಮಿಗಿಲಾದವು ಯಾವುದು ಇಲ್ಲ. ಅವಳ ನಿಷ್ಕಲ್ಮಶದ ಪ್ರೀತಿಗೆ ನಾವು ಪ್ರತಿಯಾಗಿ …

Read More »

ಲಾರಿ ಚಾಲನೆ ವೇಳೆ ನಿದ್ರೆ: ಅಪಘಾತದಲ್ಲಿ ಚಾಲಕ ಚಿರನಿದ್ರೆಗೆ

ಪಾಂಡವಪುರ: ಮರಕ್ಕೆ ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆನ್ನಾಳು ಗ್ರಾಮದ ಗೇಟ್ ಬಳಿ ನಡೆದಿದೆ. ತಮಿಳುನಾಡು ರಾಜ್ಯದ ನಿವಾಸಿ, ಲಾರಿ ಚಾಲಕ ಕರಪಸ್ವಾಮಿ (26) ಮೃತ ವ್ಯಕ್ತಿ. ಕಳೆದ ರಾತ್ರಿ 12 ಗಂಟೆ ಸಮಯದಲ್ಲಿ ನಾಗಮಂಗಲ ಮಾರ್ಗದಿಂದ ತಮಿಳುನಾಡು ರಾಜ್ಯಕ್ಕೆ ಲಾರಿಯಲ್ಲಿ ತೆಂಗಿನ ಚಗರೆಯನ್ನು ತುಂಬಿಕೊಂಡು ತೆರಳುತ್ತಿದ್ದಾಗ ತಾಲ್ಲೂಕಿನ ಕೆನ್ನಾಳು ಗೇಟ್ ಬಳಿ ಚಾಲಕ ಕರಪಸ್ವಾಮಿ ನಿದ್ರೆಗೆ ಜಾರಿದಾಗ ಲಾರಿ ಮರಕ್ಕೆ ಡಿಕ್ಕಿ …

Read More »

ನಾಳೆ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಲಾಕ್ ಡೌನ್ : 10 ಗಂಟೆ ಬಳಿಕ ಹೊರಗೆ ಬಂದ್ರೆ ದಂಡ ಫಿಕ್ಸ್!

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಮೇ.10 ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಮೊದಲು ನೈಟ್ ಕರ್ಪ್ಯೂ, ಆನಂತ್ರದ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಬಳಿಕ, ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಆದ್ರೇ.. ಕೊರೋನಾ ಮಾತ್ರ …

Read More »

ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಸೋಂಕಿತರ ನಾಪತ್ತೆ- ಮತ್ತೆ 6,029 ಮಂದಿ ಎಸ್ಕೇಪ್

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಉದ್ಯಾನ ನಗರಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದ ನಿತ್ಯ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದ್ದು, ಇಂದು ಸಹ 6,029 ಜನ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಜನರಲ್ಲಿ ಮತ್ತೆ ಆತಂಕ ಹೆಚ್ಚಿದೆ. ಕೊರೊನಾ ಕರ್ಫ್ಯೂ ಇದೀಗ ಮತ್ತೆ ಲಾಕ್‍ಡೌನ್ ಮಡಿರುವ ಮಧ್ಯೆ ನಗರದಲ್ಲಿ ಸೋಂಕಿತರು ನಾಪತ್ತೆಯಾಗಿದ್ದಾರೆ. ಈ ಹಿಂದೆ 10,835 ಜನ …

Read More »

18 ರಿಂದ 44 ವರ್ಷ ವಯಸ್ಸಿನವರಿಗೆ ನಾಳೆಯಿಂದ ಲಸಿಕೆ -ಡಾ.ಕೆ ಸುಧಾಕರ್

ಬೆಂಗಳೂರು: ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದ್ದು, ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಹಾಗಾಗಿ ಮೇ 10 ರಿಂದ ರಾಜ್ಯಾದ್ಯಂತ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿರುವ ಸುಧಾಕರ್, ಕೇಂದ್ರ ಸರ್ಕಾರ ಈವರೆಗೂ 99,58,190 …

Read More »

ವಿಜಯಪುರ: ‘ಬಿಎಲ್ ಡಿಇ’ ಆಸ್ಪತ್ರೆಗೆ ರೆಮಿಡಿಸಿವರ್ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ

ವಿಜಯಪುರ: ತನ್ನ ಮಾಲಿಕತ್ವದ 500 ಕೋವಿಡ್ ಬೆಡ್ ಗಳ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಶೇಕಡ 70% ಕಡಿತಗೊಳಿಸಿ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಿ ಮಾನವೀಯತೆ ಮೆರೆದ ಮಾಜಿ ಗೃಹಸಚಿವ ಎಂ.ಬಿ ಪಾಟೀಲ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಮನವಿ ಸಲ್ಲಿಸಿದರೂ ಸರಿಯಾದ ಪ್ರಮಾಣದಲ್ಲಿ ರೆಮಿಡಿಸಿವರ್ ಔಷಧವನ್ನು ನೀಡದೇ, ಬೇಡಿಕೆಗೆ ಸರಿಯಾಗಿ ಸ್ಪಂದಿಸದೇ ಅಸಡ್ಡೆ ತೋರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, …

Read More »

ಕರೊನಾ ಕರಾಳತೆ: ಹೆಣದ ರಾಶಿಯಲ್ಲಿ ವೈದ್ಯರ ಹಣದ ಹುಡುಕಾಟ- 9 ಲಕ್ಷ ರೂ ಕೊಟ್ಟರೂ ಮತ್ತಷ್ಟು ಆಸೆ!

ವಿಜಯಪುರ: ಕರೊನಾ ಎರಡನೆಯ ಅಲೆ ತನ್ನ ರೌದ್ರಾವತಾರ ತೋರುತ್ತಿರುವ ನಡುವೆಯೇ, ಇಂದಿನ ಕೆಲವು ಆಸ್ಪತ್ರೆಗಳ ಸ್ಥಿತಿ ನೋಡಿದರೆ, ಸೋಂಕಿತರು ಅದರ ಒಳ ಹೋದವರು ಹೊರಕ್ಕೆ ಬರುತ್ತಾರೆ ಎಂಬ ಯಾವ ಆಸೆಯನ್ನೂ ಇಟ್ಟುಕೊಳ್ಳದ ಪರಿಸ್ಥಿತಿ ಇದೆ. ಇವುಗಳ ನಡುವೆಯೇ ಕೆಲವರು ಆಸ್ಪತ್ರೆಗಳು ಹಣ ಮಾಡುವ ದಂಧೆಗೆ ಇಳಿದಿವೆ. ದಿನನಿತ್ಯ ಹೆಣದ ರಾಶಿ ನೋಡುತ್ತಿದ್ದರೂ, ಮನುಷ್ಯನ ಜೀವನದ ಅಸಾಯಕತೆ ಕಣ್ಣಮುಂದೆ ಇದ್ದರೂ, ಕೆಲ ವೈದ್ಯರು ಹಣಕ್ಕಾಗಿ ಬಾಯಿ ಬಿಡುವುದು ಮಾತ್ರ ನಿಲ್ಲದ ಸ್ಥಿತಿ …

Read More »

ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಖ್ಯಾತ ಸರ್ಜನ್ ಅನಿಲ್ ಕುಮಾರ್ ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅಬ್ಬರ ಹೆಚ್ಚಾಗುತ್ತಿದ್ದು ಸೋಂಕು ನಿಯಂತ್ರಣಕ್ಕಾಗಿ ಎರಡು ಡೋಸ್ ಲಸಿಕೆ ಪಡೆದಿದ್ದ ಖ್ಯಾತ ಸರ್ಜನ್ ಡಾ. ಅನಿಲ್ ಕುಮಾರ್ ರಾವತ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸರ್ಜನ್ ಅನಿಲ್ ಕುಮಾರ್ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಡಾ. ಅನಿಲ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ …

Read More »