Breaking News
Home / 2021 / ಮೇ / 09

Daily Archives: ಮೇ 9, 2021

ವಿಟ್ಲ: ಎರಡು ಬಟ್ಟೆ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಕೋವಿಡ್‌-19 ಸೋಂಕು ಹರಡದಂತೆ ಸರ್ಕಾರವು ರೂಪಿಸಿರುವ ಸೂಚನೆಗಳನ್ನು ಹಾಗೂ ದ.ಕ.ಜಿಲ್ಲಾ ದಂಡಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೇ ಉಲ್ಲಂಘಿಸಿದ ವಿಟ್ಲ ಕಸಬಾ ಗ್ರಾಮದ, ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಮತ್ತು ಫಿಟ್‌ ಫ್ಯಾಷನ್‌ ಬಟ್ಟೆ ಅಂಗಡಿಗಳ ಮಾಲಕರು ಮೇ 7ರಂದು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆದು ಗ್ರಾಹಕರಿಗೆ ಬಟ್ಟೆಯನ್ನು ಮಾರಾಟ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ. ಕ್ಯೂಬಿ ಬಟ್ಟೆ ಅಂಗಡಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ …

Read More »

ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ

ನವದೆಹಲಿ : ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ದೇಶಾದ್ಯಂತ ಕೋವಿಡ್ ಎರಡನೇ ಅಲೆ ರೌದ್ರ ನರ್ತನ ನಡೆಸುತ್ತಿದ್ದು, ಮಹಾಮಾರಿ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಒಗ್ಗಟ್ಟಿನ ಹೋರಾಟ ನಡೆಸಿದೆ. ದೇಶದ ಎಲ್ಲ ರಾಜ್ಯಗಳ ಜೊತೆ ಸಮನ್ವಯತೆ ಮಾಡಿಕೊಂಡು ಕೋವಿಡ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಲಸಿಕಾ ಅಭಿಯಾನದ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ ಪ್ರಧಾನಿ ಮೋದಿ. …

Read More »

ಹೊಳೆನರಸೀಪುರದ ಛತ್ರಕ್ಕೆ ಬಂದ ಶಿರಸ್ತೇದಾರ್‌- ಮದುಮಕ್ಕಳಿಗೆ ಗಿಫ್ಟ್‌ ಬದಲು ಕೊಟ್ಟರು ದಂಡದ ಬಿಲ್‌!

ಹಾಸನ: ಕರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ವಿವಾಹ ಸೇರಿದಂತೆ ಎಲ್ಲ ಸಭೆ – ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸಿ ತಿಂಗಳೇ ಕಳೆದಿದೆ. ಮದುವೆ ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚಿನ ಮಂದಿ ಇರಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ ಜೀವನದಲ್ಲಿ ಒಮ್ಮೆ ಆಗುವ ಮದುವೆಗೆ ಜನರನ್ನು ಕರೆಯದಿದ್ದರೆ ಹೇಗೆ ಎಂದುಕೊಂಡು ತಮಗೇನೂ ಆಗುವುದಿಲ್ಲ ಎಂದುಕೊಂಡು ಅಲ್ಲಲ್ಲಿ ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮದುವೆಗೆ ಭರ್ಜರಿ ತಯಾರಾಗಿ ಬಂದವರು ಮಾಸ್ಕ್‌ ಧರಿಸದಿದ್ದರೆ, ಮದುವೆ ಮನೆಯಲ್ಲಿ …

Read More »

ಡಿಸಿ ನಿವಾಸದಲ್ಲಿ ಸ್ವಿಮ್ಮಿಂಗ್​ ಪೂಲ್​, ಜಿಮ್​! ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್​ ಮುಖಂಡನ ಗಂಭೀರ ಆರೋಪ

ಮೈಸೂರು: ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವಿಮ್ಮಿಂಗ್​ ಪೂಲ್​ ಮತ್ತು ಜಿಮ್ ನಿರ್ಮಾಣ ಮಾಡಲಾಗಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್​ ಮುಖಂಡ ಕೆ.ವಿ. ಮಲ್ಲೇಶ್​ ಗಂಭೀರ ಆರೋಪ ಮಾಡಿದ್ದಾರೆ. ​ ಡಿಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ …

Read More »

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕಲಬುರಗಿ: ರಾಜ್ಯಸಬೆಯ ಮಾಜಿ ಸದಸ್ಯ, ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ ಶಾಣಪ್ಪ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಸೋಂಕು ದೃಢವಾಗಿದ್ದ ಅವರನ್ನು ಮೂರು ದಿನಗಳ ಹಿಂದೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡ ಶಾಣಪ್ಪ ಅವರು ಎರಡು ಸಲ ಶಹಾಬಾದ ಮೀಸಲು ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು. ಅದರಲ್ಲೂ ಒಂದು …

Read More »

ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

ಕೊಡಗು : ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಇನ್ನಷ್ಟು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ 2020 ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್​ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲಾ. ಇದರಿಂದ ಕೊಡಗು ಜಿಲ್ಲೆ ಏನು ಹೊರತ್ತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ದುಡಿದು ದಿನ್ನೋದಕ್ಕೂ ಅವಕಾಶ ಇಲ್ಲದಿದ್ದರಿಂದ …

Read More »

‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ

ಮುಂಬೈ : ‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಮುಂಬೈ ನಗರದಲ್ಲಿ ಆಂಬುಲೆನ್ಸ್ ಬಳಸಿಕೊಂಡು ಶಿವಾಜಿ ಪಾರ್ಕ್​ ತಲುಪಿ, ಪ್ರತಿಭಟನೆ ಕೈಗೊಂಡ ಫಾಟಕ್​​ರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ವಿವಾದಾತ್ಮಕ ವಿಡಿಯೋಗಳಿಗೆ ಹೆಸರಾಗಿರುವ ಗಾಯಕ ಫಾಟಕ್​, 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ನಗರದಲ್ಲಿ ಓಡಾಟದ ಮೇಲೆ ನಿರ್ಬಂಧ ಇರುವ …

Read More »

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿದ ಮಸ್ಕಿ ಶಾಸಕ ತುರವಿಹಾಳ

ಮಸ್ಕಿ (ರಾಯಚೂರು): ಬಿಸಿಲಿನ ತಾಪ ತಾಳದೆ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಆರ್. ಬಸನಗೌಡ ತುರವಿಹಾಳ ಆರೈಕೆ ಮಾಡಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು. ಬೈಕ್ ಸವಾರನ ಹಿಂಬದಿ ಕುಳಿತಿದ್ದ ಮಹಿಳೆ ಬಿಸಿಲಿನ ತಾಪ ತಾಳಲಾರದೆ ಕೆಳಗೆ ಬಿದ್ದರು. ಬೈಕ್ ಹಿಂದಿಯೇ ತನ್ನ ಇನ್ನೊವಾ ಕಾರಿನಲ್ಲಿ ಹೊರಟಿದ್ದ ಶಾಸಕ ಬಸನಗೌಡ ತುರವಿಹಾಳ ಕೂಡಲೇ ತನ್ನ ವಾಹನದಿಂದ ಕೆಳಗೆ ಇಳಿದು ರಸ್ತೆ ಬದಿ ಬಿದ್ದಿದ್ದ ಮಹಿಳೆಗೆ ನೀರು ಕುಡಿಸಿ …

Read More »

ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾನು ಮತ್ತು ನನ್ನ ತಂದೆ ಮೇಲೆ ದರ್ಪ ಮೆರೆದಿದ್ದಾರೆ ಎಂದು ಆರೋಪಿ

ನಂಜನಗೂಡು: ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್‌ ಕರೆದುಕೊಂಡು ಬರುತ್ತಿದ್ದಾಗ, ಕೋವಿಡ್‌ ನಿಯಮದ ಹೆಸರಿನಲ್ಲಿ ವ್ಯಕ್ತಿಯೊಂದಿಗೆ ಪೊಲೀಸರು ಅಟ್ಟಹಾಸ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಚಂದ್ರಶೇಖರಯ್ಯ ಎಂಬವರು ಪೊಲೀಸರಿಂದ ನಿಂದನೆಗೆ ಒಳಗಾದ ವ್ಯಕ್ತಿ. ಬಿಪಿ, ಶುಗರ್‌ ರೋಗಿ ತಂದೆಯನ್ನು ಎಂದಿನಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಲ್ಲಹಳ್ಳಿ ರಸ್ತೆ ಬಳಿ ಆದರ್ಶ ಶಾಲೆ ಬಳಿ ಚಂದ್ರಶೇಖರಯ್ಯ ವಾಪಸ್‌ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಪೊಲೀಸರು ಬೈಕ್‌ ತಡೆದು ತಪಾಸಣೆ ನಡೆಸಿದ್ದಾರೆ. …

Read More »

ಮೂರನೆ ಬಾರಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ, ಒಂದು ವಾರ ಮತ್ತೆ ಬಂದ್ ಆಗಲಿದೆ ದೆಹಲಿ

ನವದೆಹಲಿ : ಮಾರಕ ಕೊರೋನಾ ನಿಯಂತ್ರಿಸುವ ಸಂಬಂಧ ರಾಜಧಾನಿ ದೆಹಲಿಯಲ್ಲಿ ಹೇರಲಾಗಿರುವ ಲಾಕ್ ಡೌನ್ ಮತ್ತೆ ವಿಸ್ತರಿಸಲಾಗಿದೆ . ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಈ ಮಾಹಿತಿ ನೀಡಿದ್ದಾರೆ . ಒಂದು ವಾರ ಲಾಕ್ ಡೌನ್ ವಿಸ್ತರಿಸಲಾಗಿದೆ . ಮೇ 17 ರ ತನಕ ಲಾಕ್ ಡೌನ್ ಮುಂದುವರಿಯಲಿದ್ದು,ಲಾಕ್ ಡೌನ್ ಅವಧಿಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಅರವಿಂದ ಕೇಜ್ರವಾಲ್ ಸ್ಪಷ್ಟಪಡಿಸಿದ್ದಾರೆ . ಇದೀಗ ಮೂರನೆ ಬಾರಿ ದೆಹಲಿಯಲ್ಲಿ ಲಾಕ್ …

Read More »