Breaking News
Home / Uncategorized / ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.

Spread the love

ಅಮ್ಮ ಎಂಬ ಪದ ಮಗು ತನ್ನ ಮೊದಲ ತೊದಲು ನುಡಿಯಲ್ಲೇ ಹೇಳುವ ಪದ. ಏನು ಅರಿಯದ ಸಮಯದಲ್ಲಿ ಒಡಲೊಳಗೆ ಬೆಚ್ಚಗೆ ಇರಿಸಿ ಕಾಪಾಡಿದ ಅಮ್ಮ ಇನ್ನು ಪ್ರಪಂಚಕ್ಕೆ ಲಗ್ಗೆಯಿಟ್ಟ ಮೇಲೆ ಪ್ರತಿ ಹೆಜ್ಜೆಯ ಜೊತೆಯಾದಳು ಅಮ್ಮ. ನಾವು ನಮ್ಮನ್ನು ಅರಿತುಕೊಳ್ಳುವ ಮೊದಲೇ ಅಮ್ಮನನ್ನು ಅವಲಂಬಿಸಿ ಪ್ರತಿ ಅಮ್ಮನ ಭಾವನೆಗಳಿಗೆ ಸ್ಪಂದಿಸಿರುತ್ತೇವೆ. ಜಗತ್ತಲ್ಲಿ ಅಮ್ಮನ ಪ್ರೀತಿ, ತ್ಯಾಗ ಮತ್ತು ವಾತ್ಸಲ್ಯಕ್ಕೆ ಮಿಗಿಲಾದವು ಯಾವುದು ಇಲ್ಲ. ಅವಳ ನಿಷ್ಕಲ್ಮಶದ ಪ್ರೀತಿಗೆ ನಾವು ಪ್ರತಿಯಾಗಿ ಏನನ್ನು ನೀಡಲು ಸಾಧ್ಯವಿಲ್ಲ ಹಾಗಾಗಿ ಅಮ್ಮನ ಮಹತ್ವವನ್ನು ಜಗತ್ತಿಗೆ ತಿಳಿಸಲು ಪ್ರತಿ ವರ್ಷ ಮೇ ತಿಂಗಳು 2ನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಈ ವಿಶ್ವ ತಾಯಂದಿರ ದಿನವು ಮೊದಲು ಜಾರಿಗೆ ಬಂದಿದ್ದು ಅಮೆರಿಕದಲ್ಲಿ. ಅಮೆರಿಕದ ವರ್ಜೀನಿಯಾದಲ್ಲಿರುವ ಆನ್ ರೀವ್ಸ್ ಜಾರ್ವಿಸ್ ಎನ್ನುವ ಮಹಿಳೆ ಮದರ್ ಡೇ ವರ್ಕ್ ಕ್ಲಬ್ ಗಳನ್ನು ಪ್ರಾರಂಭಿಸಿ ತಾಯಿಯಾದ ಹೆಣ್ಣುಮಕ್ಕಳು ಹೇಗೆ ಮಕ್ಕಳು ಹಾಗು ಕುಟುಂಬ ವರ್ಗದವರನ್ನು ಯಾವ ರೀತಿ ನಿರ್ವಹಣೆ, ಸಂರಕ್ಷಣೆ ಮಾಡಬೇಕು ಎಂದು ತರಬೇತಿ ಕಲಿಸುತ್ತಿದ್ದರು.1905 ರಲ್ಲಿ ಇವರು ಮರಣ ಹೊಂದಿದರು. ಇವರ ಸ್ಮರಣಾರ್ಥಕ್ಕಾಗಿ ಇವರ ಮಗಳು ಅಮೆರಿಕದ ಶಾಂತಿ ಕಾರ್ಯಕರ್ತೆಯಾದ ಅನಾ ಜಾರ್ವಿಸ್ ಅವರು ವಿಶ್ವ ತಾಯಂದಿರ ದಿನಾಚರಣೆಯನ್ನು ಜಾರಿಗೆ ತಂದರು.

ಮೇ 9 1914 ರಲ್ಲಿ ಅಮೆರಿಕದ ಅಧ್ಯಕ್ಷರು ಆಗಿದ್ದ ವುಡ್ರೋ ವಿಲ್ಸನ್ ಅವರು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಆಚರಣೆಯನ್ನು ಕಾನೂನು ಪ್ರಕಾರ ಜಾರಿಗೊಳಿಸಿದರು.ಅಮೆರಿಕ, ಭಾರತ ಹಾಗೂ ಇನ್ನು ಹಲವು ದೇಶಗಳಲ್ಲಿ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲಾಗುತ್ತದೆ.

ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ತಾಯಿಯನ್ನು ಮಣ್ಣಿಗೆ, ಜಲಕ್ಕೆ, ಅಗ್ನಿಗೆ, ವಿದ್ಯೆಗೆ, ಧನಕ್ಕೆ ಪ್ರತಿಯೊಂದು ವಿಚಾರದಲ್ಲಿಯೂ ತಾಯಿಯನ್ನು ಸ್ಮರಿಸುತ್ತೇವೆ. ತಾಯಿಯ ಮಹತ್ವವನ್ನು ಜಗತ್ತಿಗೆ ಸಾರಲು ಈ ಜನುಮ ಸಾಲದು, ಪ್ರತಿ ಉಸಿರಿನ ಅಣುವಿನಲ್ಲೂ ಅವಳನ್ನು ಸ್ಮರಿಸಿ ಆಧರಿಸಿ ಸಾಗೋಣ.

ಜಗತ್ತನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಭೂಮಿತಾಯಿಗೆ, ಮಕ್ಕಳನ್ನು ಲಾಲಿಸಿ ಪಾಲನೆ ಮಾಡುವ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.


Spread the love

About Laxminews 24x7

Check Also

2 ಮಂದಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಸೇರ್ಪಡೆ – ಡಿಕೆಶಿ ಹೇಳಿದ್ದು ಹೀಗೆ!

Spread the loveಬೆಂಗಳೂರು : ಜೆಡಿಎಸ್‌ (JDS) ಶಾಸಕರು ಸಾಮೂಹಿಕವಾಗಿ ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಲಿದ್ದಾರೆ ಎಂಬ ವದಂತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ