ಮಸ್ಕಿ (ರಾಯಚೂರು): ಬಿಸಿಲಿನ ತಾಪ ತಾಳದೆ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಆರ್. ಬಸನಗೌಡ ತುರವಿಹಾಳ ಆರೈಕೆ ಮಾಡಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು.
ಬೈಕ್ ಸವಾರನ ಹಿಂಬದಿ ಕುಳಿತಿದ್ದ ಮಹಿಳೆ ಬಿಸಿಲಿನ ತಾಪ ತಾಳಲಾರದೆ ಕೆಳಗೆ ಬಿದ್ದರು. ಬೈಕ್ ಹಿಂದಿಯೇ ತನ್ನ ಇನ್ನೊವಾ ಕಾರಿನಲ್ಲಿ ಹೊರಟಿದ್ದ ಶಾಸಕ ಬಸನಗೌಡ ತುರವಿಹಾಳ ಕೂಡಲೇ ತನ್ನ ವಾಹನದಿಂದ ಕೆಳಗೆ ಇಳಿದು ರಸ್ತೆ ಬದಿ ಬಿದ್ದಿದ್ದ ಮಹಿಳೆಗೆ ನೀರು ಕುಡಿಸಿ ಆರೈಕೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.