Breaking News
Home / 2021 / ಏಪ್ರಿಲ್ (page 95)

Monthly Archives: ಏಪ್ರಿಲ್ 2021

ಮಸ್ಕಿ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪ್ರಚಾರ ಇಲ್ಲ: ಬಿಜೆಪಿ ಅಭ್ಯರ್ಥಿ ಸ್ಪಷ್ಟನೆ

ರಾಯಚೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬರಲು ಕಾರಣವಾದ ಮುಂಬೈ ಫ್ರೆಂಡ್ಸ್ ಎಂದು ಖ್ಯಾತರಾದ 17 ಜನ ಶಾಸಕರ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿ ಪ್ರಕರಣದಲ್ಲಿ ಸಿಕ್ಕು ಒತ್ತಾಡುತ್ತಿದ್ದಾರೆ. ಈ ಗೊಂದಲ ಮಧ್ಯೆ ಬೆಳಗಾವಿ ಸಾಹುಕಾರ್ ಮಸ್ಕಿ ಬೈ ಎಲೆಕ್ಷನ್ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಅವರು ಮಸ್ಕಿ ಉಪಚುನಾವಣೆಯಿಂದ ದೂರ ಉಳಿಯುತ್ತಾರೆ ಎಂದು ಸ್ವತಃ …

Read More »

ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್‌ಐಟಿ ಮಹಜರು

ಬೆಂಗಳೂರು, ಏಪ್ರಿಲ್ 01: ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ತಂಗಿದ್ದ ಆರ್‌.ಟಿ. ಪಿಜಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಮಹಜರು ನಡೆಸಿದ್ದಾರೆ. ಸಿಡಿ ಸಂತ್ರಸ್ತ ಲೇಡಿ ತಂಗಿದ್ದ ಪಿಜಿ ಮೇಲೆ ಈ ಹಿಂದೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. 9 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದರು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಅರೋಪ ಹೊರಿಸಿರುವ ಸಿಡಿಲೇಡಿ ಸಮ್ಮುಖದಲ್ಲಿ ಇದೀಗ ಆಕೆ ತಂಗಿದ್ದ ಪಿಜಿಯಲ್ಲಿ ಮಹಜರು ನಡೆಸಿದರು. ಜತೆಗೆ …

Read More »

ಈಶ್ವರಪ್ಪ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿ : ಎಚ್‌ಡಿಕೆ

ಬೆಂಗಳೂರು,ಏ.1- ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ದ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಅವರು ನೀಡಿರುವ ದೂರನ್ನು ರಾಜ್ಯದ ಆಡಳಿತದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸಚಿವರು ನೀಡಿದ ದೂರಿನಿಂದಾಗಿ ಅನುದಾನ ಎಲ್ಲ …

Read More »

ಪೋಷಕರನ್ನು ಮಾತನಾಡಿಸಬೇಕು ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ ಯುವತಿ,

ಬೆಂಗಳೂರು: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಸ್​ಐಟಿ ವಿಚಾರಣೆ ವೇಳೆ ಸಿಡಿ ಸಂತ್ರಸ್ತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ ಎಂದು ತಿಳಿದುಬಂದಿದೆ. ಎಸ್​ಐಟಿ ಅಧಿಕಾರಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಪೋಷಕರನ್ನು ಮಾತನಾಡಿಸಬೇಕು ಎಂದು ಪಟ್ಟು ಹಿಡಿದಿರುವ ಯುವತಿ, ಪೋಷಕರ ಭೇಟಿಗೆ ಅನುಮತಿ ನೀಡುವಂತೆ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಆದರೆ, ಈ ವೇಳೆ ಸಂತ್ರಸ್ತೆಯನ್ನು ಸಮಾಧಾನ ಮಾಡಿರುವ ಎಸ್​ಐಟಿ ಅಧಿಕಾರಿಗಳು ಅನುಮತಿ ನೀಡಲಾಗುವುದಿಲ್ಲ ಎಂದು ಮನವೊಲಿಸುವ ಯತ್ನ ಮಾಡಿದ್ದಾರೆ. ನಾವು …

Read More »

CD ಕೇಸ್: ನನ್ನ ಸೋದರಿ ಮೇಲೆ ಡಿ.ಕೆ. ಶಿವಕುಮಾರ್ ಒತ್ತಡ ಇದೆ, ನಮ್ಮ ಬಳಿ 9 ಸಾಕ್ಷಿಗಳಿವೆ- ಸಂತ್ರಸ್ತೆಯ ಸಹೋದರ

ವಿಜಯಪುರ: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಸಹೋದರ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ನನ್ನ ಸಹೋದರಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಒತ್ತಡ ಇದೆ ಎಂದು ಅವರು ಆರೋಪಿಸಿದ್ದಾರೆ. ಇಂದು ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಪ್ರೂಫ್ ಸಮೇತ ಹೇಳ್ತಿದ್ದೇನೆ.. ಪ್ರಕರಣದ ತನಿಖೆಯಾಗಲಿ, ಎಲ್ಲವೂ ಹೊರ ಬರುತ್ತೆ. ಸತ್ಯ ಮುಚ್ಚಲು ಆಗಲ್ಲ. ಇಂದಿಲ್ಲ ನಾಳೆ ಡಿ.ಕೆ. ಶಿವಕುಮಾರ್ ಹೆಸರು ಹೊರಗೆ ಬಂದೇ ಬರುತ್ತೆ. ನಾವು ಎಲ್ಲ ಸಾಕ್ಷಿಗಳನ್ನ …

Read More »

ಲಿವಿಂಗ್ ಟುಗೆದರ್ ಇದ್ದಾಗ ಹುಟ್ಟಿರೋ ಸರ್ಕಾರವಿದು- ಎಸ್​.ಆರ್. ಪಾಟೀಲ್ ವಾಗ್ದಾಳಿ

ಬಾಗಲಕೋಟೆ: ರಾಜ್ಯದಲ್ಲಿ ಇರುವುದು ಲಿವಿಂಗ್ ಟುಗೆದರ್​ನಿಂದ ಹುಟ್ಟಿದ ಅನೈತಿಕ ಶಿಶುವಿನಿಂದ ಕೂಡಿದ ಸರ್ಕಾರ.. ಹೀಗಾಗಿ ಈ ಸರ್ಕಾರದಲ್ಲಿ ಮುಂದೆ ನಡೆಯುತ್ತಿರುವುದೆಲ್ಲವೂ ಅನೈತಿಕವೇ ಎಂದು ಬಾಗಲಕೋಟೆಯಲ್ಲಿ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವ್ಯಂಗ್ಯವಾಡಿದ್ದಾರೆ. ಸಿಡಿ ವಿಚಾರದಲ್ಲಿ ಬಹಳಷ್ಟು ಕೆಸರೆರಚಾಟ ನಡೆದಿದೆ. ಈ ಸರ್ಕಾರದಲ್ಲಿ 6 ಜನ ಮಂತ್ರಿಗಳು ಸ್ಟೇ ತಂದ್ರು. ಒಬ್ಬರ ಮೇಲೆ ಈಗಾಗಲೇ ಕಂಪ್ಲೇಂಟ್, ಎಫ್ ಆರ್ ಐ ಫೈಲ್ ಆಗಿದೆ. ಬಿಎಸ್​ವೈ ಸರ್ಕಾರ ಸಿಡಿ ಸರ್ಕಾರ. ನೈತಿಕ ಅಧಃಪತನಕ್ಕೆ …

Read More »

ಜಾರಕಿಹೊಳಿ ಪರ ಅಬ್ಬರದ ಪ್ರಚಾರಕ್ಕಿಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ, ಏಪ್ರಿಲ್ 1: ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರ ನಡೆಸಿದರು. ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ವಾದ್ಯ-ಮೇಳಗಳನ್ನು ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸತೀಶ್ ಅವರ ಪರ ಘೋಷಣೆಗಳನ್ನು ಕೂಗಿದರು. ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, …

Read More »

ಸಿಡಿ ಪ್ರಕರಣಕ್ಕೆ ಇದೊಂದು ಹೆಸರಿನಿಂದಲೇ ಹೆಚ್ಚು ಮಾರ್ಕೆಟಿಂಗ್”!

ಬೆಂಗಳೂರು, ಏಪ್ರಿಲ್ 1: ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ನನ್ನ ಹೆಸರು ಹೇಳಿದರಷ್ಟೇ ಮಾರ್ಕೆಟಿಂಗ್ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರಿಗೆ ನನ್ನ ಹೆಸರು ಬಳಸಿಕೊಳ್ಳದೇ ಮಾರುಕಟ್ಟೆಯೇ ಸಿಗುವುದಿಲ್ಲ ಎಂದರು. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ನನಗೆ ಸಂಬಂಧವಿಲ್ಲದ ವಿಚಾರದಲ್ಲಿ ನನ್ನ …

Read More »

1200 ಕೋಟಿ ರೂ.ಗಳ ಹಗರಣ : ಯಡಿಯೂರಪ್ಪ ರಾಜೀನಾಮೆಗೆ ಡಿಕೆಶಿ ಆಗ್ರಹ

ಬೆಂಗಳೂರು, ಏ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅವರ ಸಂಪುಟದಲ್ಲೇ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು 1200 ಕೋಟಿ ರೂ.ಗಳ ಹಗರಣದ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಸಂಪುಟದ ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ ಗಂಭೀರ ಆರೋಪ ಮಾಡಿದ್ದಾರೆ. 1200 ಕೋಟಿ ರೂ.ಗಳ ಹಗರಣ …

Read More »

ಈಶ್ವರಪ್ಪ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ

ಬೆಂಗಳೂರು : ಸಿಎಂ ವಿರುದ್ಧ ಈಶ್ವರಪ್ಪ ದೂರು ವಿಚಾರ ಮಾಜಿ ಸಿಎಂ ಸಿದ್ಧರಾಮಯ್ಯ ಈಶ್ವರಪ್ಪ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ಧರಾಮಯ್ಯ, ಈಶ್ವರಪ್ಪ ಆರೋಪ ಗಂಭೀರ ಸ್ವರೂಪದ್ದು. ರಾಜ್ಯದ ಆಡಳಿತ ಕುಸಿದಿರುವುದಕ್ಕೆ ಇದೇ ಸಾಕ್ಷಿ. ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಸರ್ಕಾರ ಎಂದು ಕಿಡಿಕಾರಿದ್ದಾರೆ. ಈಶ್ವರಪ್ಪ ಅಕ್ರಮದ ಆರೋಪಗಳಿಗೆ ಸಾಕ್ಷ್ಯ ಒದಗಿಸಿದ್ದಾರೆ. ಈಶ್ವರಪ್ಪ ಯಾವುದೇ ಒತ್ತಡಕ್ಕೆ ಮಣಿಯಬಾರದು . ಈಶ್ವರಪ್ಪ ತಮ್ಮ ಮಾತಿಗೆ ಬದ್ಧರಾಗಿ ಉಳಿಯಬೇಕು. ಮೊದಲ …

Read More »