Breaking News
Home / ರಾಜಕೀಯ / ಲಿವಿಂಗ್ ಟುಗೆದರ್ ಇದ್ದಾಗ ಹುಟ್ಟಿರೋ ಸರ್ಕಾರವಿದು- ಎಸ್​.ಆರ್. ಪಾಟೀಲ್ ವಾಗ್ದಾಳಿ

ಲಿವಿಂಗ್ ಟುಗೆದರ್ ಇದ್ದಾಗ ಹುಟ್ಟಿರೋ ಸರ್ಕಾರವಿದು- ಎಸ್​.ಆರ್. ಪಾಟೀಲ್ ವಾಗ್ದಾಳಿ

Spread the love

ಬಾಗಲಕೋಟೆ: ರಾಜ್ಯದಲ್ಲಿ ಇರುವುದು ಲಿವಿಂಗ್ ಟುಗೆದರ್​ನಿಂದ ಹುಟ್ಟಿದ ಅನೈತಿಕ ಶಿಶುವಿನಿಂದ ಕೂಡಿದ ಸರ್ಕಾರ.. ಹೀಗಾಗಿ ಈ ಸರ್ಕಾರದಲ್ಲಿ ಮುಂದೆ ನಡೆಯುತ್ತಿರುವುದೆಲ್ಲವೂ ಅನೈತಿಕವೇ ಎಂದು ಬಾಗಲಕೋಟೆಯಲ್ಲಿ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಸಿಡಿ ವಿಚಾರದಲ್ಲಿ ಬಹಳಷ್ಟು ಕೆಸರೆರಚಾಟ ನಡೆದಿದೆ. ಈ ಸರ್ಕಾರದಲ್ಲಿ 6 ಜನ ಮಂತ್ರಿಗಳು ಸ್ಟೇ ತಂದ್ರು. ಒಬ್ಬರ ಮೇಲೆ ಈಗಾಗಲೇ ಕಂಪ್ಲೇಂಟ್, ಎಫ್ ಆರ್ ಐ ಫೈಲ್ ಆಗಿದೆ. ಬಿಎಸ್​ವೈ ಸರ್ಕಾರ ಸಿಡಿ ಸರ್ಕಾರ. ನೈತಿಕ ಅಧಃಪತನಕ್ಕೆ ಹೋಗಿ ಮುಟ್ಟಿದ ಸರ್ಕಾರ. ಸರ್ಕಾರ ಹುಟ್ಟಿದ್ದೇ ಅನೈತಿಕ, ಇದು ಅನೈತಿಕ ಶಿಶು. ಸರ್ಕಾರ ಕಾನೂನಾತ್ಮಕವಾಗಿ ರಚನೆ ಆಗಿದೆ. ಕಾಂಗ್ರೆಸ್, ಜೆಡಿಎಸ್​ನಿಂದ 17 ಶಾಸಕರು ರಾಜೀನಾಮೆ ಕೊಟ್ರು. ಬಿಜೆಪಿ ಜೊತೆ ಇರಲಿಕ್ಕೆ ಆರಂಭಿಸಿದ್ರು. ಆ ಸಂದರ್ಭದಲ್ಲಿ ಸರ್ಕಾರ ಜನಿಸಿದೆ.

ಅಸೆಂಬ್ಲಿಯಲ್ಲಿ ಸಂಖ್ಯಾಬಲ ಬಿಜೆಪಿ ಸಂಖ್ಯೆ ಹೆಚ್ಚಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಲಿವಿಂಗ್ ಟು ಗೆದರ್ ಇದ್ದಾಗ ಹುಟ್ಟಿರೋ ಸರ್ಕಾರವಿದು. ಮುಂದೆ ಬೈ ಎಲೆಕ್ಷನ್ ಆಯ್ತು ಬಿಜೆಪಿಯಿಂದ ಗೆದ್ದು ಬಂದ್ರು. 17ಜನ ಶಾಸಕರು ಲಿವಿಂಗ್ ಟು ಗೆದರ್ ಅನ್ನೋ ಕಾನ್ಸೆಪ್ಟ್ ನಲ್ಲಿದ್ರು. ಮದುವೆ ಆಗದೆನೇ ಲಿವಿಂಗ್ ಟು ಗೆದರ್ ಅನ್ನೋ ರೀತಿಯಲ್ಲಿದ್ರು. 17 ಜನರು ಬಿಜೆಪಿಯೊಂದಿಗೆ ಸಂಸಾರ ಶುರು ಮಾಡಿದ್ರು. ಆವಾಗ ಸಂಖ್ಯಾ ಬಲ ಬಿಜೆಪಿ ಹೆಚ್ಚಾಯ್ತು.. ನನ್ನ ಪ್ರಕಾರ ಈ ಸರ್ಕಾರ ಅನೈತಿಕ ಶಿಶು ಎಂದು ಎಸ್. ಆರ್. ಪಾಟೀಲ್ ಹೇಳಿದ್ದಾರೆ.

ನಂಬರ್ ಗೇಮ್​ನಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ಇದರ ಹುಟ್ಟು ಅನೈತಿಕವಾಗಿದೆ. ಹಾಗಾಗಿ ಮುಂದೆ ನಡೆಯೋ ಕೆಲ್ಸಗಳು ಅನೈತಿಕವಾಗಿವೆ. ಆ ಕಾರಣಕ್ಕೆ ಎರಡು ಸಲ ರಾಜ್ಯದಲ್ಲಿ ಪ್ರವಾಹ ಬಂತು. ಅತಿವೃಷ್ಟಿಯಿಂದ ನೂರಾರು ಹಳ್ಳಿಗಳು ಕೊಚ್ಚಿಕೊಂಡು ಹೋದ್ವು. 2019-20 ಹಾಗೂ 2020-21ರಲ್ಲಿ ಪ್ರವಾಹ, ಆಮೇಲೆ ಕೋವಿಡ್ ಬಂತು. ಕೋವಿಡ್ ನಿಂದ ರಾಜ್ಯ ಅಷ್ಟೇ ಅಲ್ಲ ಪ್ರಪಂಚನೇ ಸಫರ್ ಆಗಿದೆ. ಆಮೇಲೆ ಈ ಸಿಡಿ ಕೇಸ್ ಬಂದಿದೆ. ಒಂದಿಲ್ಲೊಂದು ಇಂತಹ ಅನೈತಿಕತೆ ನಡೆಯುತ್ತಿವೆ ಎಂದು ಎಸ್​ಆರ್​ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ

Spread the loveವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ ನವದೆಹಲಿ: ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಟೇಪ್ ವಿವಾದದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ