Breaking News
Home / 2021 / ಮಾರ್ಚ್ / 26 (page 4)

Daily Archives: ಮಾರ್ಚ್ 26, 2021

ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಸಲು ನನ್ನ ಹೆಸರನ್ನೇ ಹೈಕಮಾಂಡ್ ಗೆ ಕಳಿಸಲಿಲ್ಲ: ಪ್ರಕಾಶ ಹುಕ್ಕೇರಿ ಅಸಮಾಧಾನ

ಬೆಳಗಾವಿ : “ಬಿಜೆಪಿಯಿಂದ ಸುರೇಶ ಅಂಗಡಿ ಕುಟುಂಬದ ಯಾರಿಗೇ ಟಿಕೆಟ್ ನೀಡಲಿ, ನಾನು ಅವರ ಪರವಾಗಿ ಕ್ಷೇತ್ರದಲ್ಲೆಲ್ಲ ಸುತ್ತಾಡಿ ಪ್ರಚಾರ ಮಾಡುತ್ತೇನೆ. ನನ್ನ ಮಗನ ಚುನಾವಣೆಗೆ ಕೆಲಸ ಮಾಡಿದ ರೀತಿಯಲ್ಲೇ ಮಾಡುತ್ತೇನೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಏನ್ ಮಾಡುತ್ತೋ ಮಾಡ್ಕೊಳ್ಳಿ ನೋಡೋಣ” ಎಂದು ಸವಾಲೆಸೆದಿದ್ದ ಮಾಜಿ ಸಂಸದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಇದೀಗ ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ನಂತರ  ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈಗ ತರಾತುರಿಯಲ್ಲಿ …

Read More »

BIG BREAKING: ರಾಜ್ಯದಲ್ಲಿಂದು 2500 ಕ್ಕೂ ಅಧಿಕ ಜನರಿಗೆ ಸೋಂಕು, 18 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ 2000 ಗಡಿ ದಾಟಿದೆ. ಇವತ್ತು ಒಂದೇ ದಿನ ಬರೋಬ್ಬರಿ 2523 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,78,478 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1192 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,47,781 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇವತ್ತು ಒಂದೇ ದಿನ 10 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ 12,471 …

Read More »

ಜನರನ್ನು ಭೀತಿಗೊಳಿಸಬೇಡಿ, ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ಮಾಡಿ:CMಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಕೋವಿಡ್‍ನ ಎರಡನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅತ್ಯಂತ ವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಜನರನ್ನು ಹೆಚ್ಚು ಭೀತಿಗೆ ಒಳಪಡಿಸದೇ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸದೆ ಜನರು ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ತಿಳುವಳಿಕೆಯನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವ, ಸಣ್ಣ ರೋಗ ಲಕ್ಷಣಗಳು ಕಂಡು ಬಂದರೂ …

Read More »

ಮೇಯಲ್ಲಿ ಚುನಾವಣೆ ಕಷ್ಟ ?

ಬೆಂಗಳೂರು: ಚುನಾವಣೆಗಳನ್ನು ಮುಂದೂಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಿಯೇ ಸಿದ್ಧ ಎಂದು ರಾಜ್ಯ ಚುನಾವಣ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಕ್ಷೇತ್ರ ಮರುವಿಂಗಡಣೆ, ಮೀಸಲಾತಿಗೆ ಸಂಬಂಧಿಸಿದ ಸದ್ಯದ ಬೆಳವಣಿಗಳನ್ನು ಗಮನಿಸಿದರೆ ಮೇ ತಿಂಗಳಿನಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆ ನಡೆಯುವುದು ಅನುಮಾನ. ಜಿ.ಪಂ. ಮತ್ತು ತಾ.ಪಂ.ಗಳಿಗೆ ಸದಸ್ಯ ಸ್ಥಾನಗಳ ಸಂಖ್ಯೆ ನಿಗದಿಪಡಿಸಿ ಚುನಾವಣ ಆಯೋಗ ಮಾ. 24ರ ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರ ಬಳಿಕ ಸದಸ್ಯ …

Read More »

ಕೋವಿಡ್: ಮತ್ತಷ್ಟು ಕ್ರಮ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರವು ಎಲ್ಲ ಹಬ್ಬಗಳ ಸಾರ್ವಜನಿಕ ಆಚರಣೆಯ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹೊಸ ಆದೇಶದಂತೆ ಮುಂಬರುವ ಯುಗಾದಿ, ಹೋಳಿ, ಷಬ್‌-ಎ- ಬರಾತ್‌, ಗುಡ್‌ ಫ್ರೈಡೇ ಸಹಿತ ಹಲವು ಹಬ್ಬಗಳು ಮತ್ತು ಸಂಬಂಧಿತ ಸಮಾರಂಭಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಬಾರದು. ಈ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳ, ಮೈದಾನ, ಉದ್ಯಾನವನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಮತ್ತಿತರ ಕಡೆಗಳಲ್ಲಿ ಸಭೆ-ಸಮಾರಂಭ ನಡೆಸದಂತೆ ಸೂಚಿಸಲಾಗಿದೆ. ನಿಯಮ ಉಲ್ಲಂ‍ಘಿಸುವವರ ವಿರುದ್ಧ ವಿಪತ್ತು …

Read More »

ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ, ಕೊರೋನಾ 2 ನೇ ಅಲೆ ಆರ್ಭಟ ತಡೆಗೆ ಹಬ್ಬ ಆಚರಣೆಗೆ ನಿರ್ಬಂಧ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ಮುಂದಿನ ಹಬ್ಬ-ಹರಿದಿನ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಯುಗಾದಿ ಹಬ್ಬ, ಹೋಳಿ ಹಬ್ಬ, ಗುಡ್ ಫ್ರೈಡೇ, ಶಬ್ ಎ ಬರಾತ್ ಮೊದಲಾದ ಹಬ್ಬಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಮೈದಾನ, ಮಾರ್ಕೆಟ್, ಪಾರ್ಕ್, ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ …

Read More »

ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣ ಕಡಿತ

ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿದೆ. ಇದಾದ ನಂತರದಲ್ಲಿ ಅಂತ್ಯೋದಯ ಕಾರ್ಡ್ ಅಕ್ಕಿಯನ್ನು ಕೂಡ ಕಡಿತ ಮಾಡಲು ನಿರ್ಧರಿಸಲಾಗಿದ್ದು 35 ಕೆಜಿ ಅಕ್ಕಿಯ ಬದಲು 15 ಕೆಜಿ ಅಕ್ಕಿ ಜೊತೆಗೆ 20 ಕೆಜಿ ರಾಗಿ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. …

Read More »

ವಿದ್ಯಾರ್ಥಿಗಳೇ ಗಮನಿಸಿ: ರದ್ದಾಗಿದೆ ಈ 7 ಬಿ.ಇಡಿ ಕಾಲೇಜುಗಳ ಮಾನ್ಯತೆ

ಬಿ.ಇಡಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ರಾಜ್ಯದ 7 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಿದ್ದು, ಜೊತೆಗೆ ಎರಡು ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಮಾನ್ಯತೆ ರದ್ದುಗೊಂಡಿರುವ ಕಾಲೇಜುಗಳ ಪಟ್ಟಿ ಇಂತಿದ್ದು, ಬೆಳಗಾವಿಯ ಕೆಎಸ್‌ಆರ್ ಕಾಲೇಜ್ ಆಫ್ ಎಜುಕೇಶನ್ ಹಾಗೂ ಶ್ರೀ ಸಿದ್ಧಿವಿನಾಯಕ ರೂರಲ್ ಕಾಲೇಜ್, ವಿಜಯಪುರದ ಎಸ್ ಎಂ ಆರ್ ಕೆ ಮಹಿಳಾ ವಿದ್ಯಾವರ್ಧಕ ಕಾಲೇಜ್ ಆಫ್ ಎಜುಕೇಶನ್, ಶ್ರೀ ಫುಲ್ಸಿಂಗ್ …

Read More »