Breaking News
Home / ರಾಜ್ಯ / ವಿದ್ಯಾರ್ಥಿಗಳೇ ಗಮನಿಸಿ: ರದ್ದಾಗಿದೆ ಈ 7 ಬಿ.ಇಡಿ ಕಾಲೇಜುಗಳ ಮಾನ್ಯತೆ

ವಿದ್ಯಾರ್ಥಿಗಳೇ ಗಮನಿಸಿ: ರದ್ದಾಗಿದೆ ಈ 7 ಬಿ.ಇಡಿ ಕಾಲೇಜುಗಳ ಮಾನ್ಯತೆ

Spread the love

ಬಿ.ಇಡಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ರಾಜ್ಯದ 7 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಿದ್ದು, ಜೊತೆಗೆ ಎರಡು ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

ಮಾನ್ಯತೆ ರದ್ದುಗೊಂಡಿರುವ ಕಾಲೇಜುಗಳ ಪಟ್ಟಿ ಇಂತಿದ್ದು, ಬೆಳಗಾವಿಯ ಕೆಎಸ್‌ಆರ್ ಕಾಲೇಜ್ ಆಫ್ ಎಜುಕೇಶನ್ ಹಾಗೂ ಶ್ರೀ ಸಿದ್ಧಿವಿನಾಯಕ ರೂರಲ್ ಕಾಲೇಜ್, ವಿಜಯಪುರದ ಎಸ್ ಎಂ ಆರ್ ಕೆ ಮಹಿಳಾ ವಿದ್ಯಾವರ್ಧಕ ಕಾಲೇಜ್ ಆಫ್ ಎಜುಕೇಶನ್, ಶ್ರೀ ಫುಲ್ಸಿಂಗ್ ನಾರಾಯಣನ್ ಚೌಹಾನ್ ಕಾಲೇಜ್ ಆಫ್ ಎಜುಕೇಶನ್, ಕೆಜಿವಿಕೆ ಸಂಘದ ಮಾತೋಶ್ರೀ ಕಾಂತಮ್ಮ ಕಾಲೇಜು ಹಾಗೂ ಕುಮಾರಿ ಮೋನಿಕಾ ಬಸವರಾಜ್ ಕನ್ನಿ ಬಿ.ಇಡಿ ಕಾಲೇಜ್, ಬೀದರ್ ನ ಎಐಎಂ ಕಾಲೇಜ್ ಆಫ್ ಎಜುಕೇಶನ್ ಮಾನ್ಯತೆ ರದ್ದುಗೊಂಡಿದೆ.

ಇದರ ಜೊತೆಗೆ ಹಾಸನದ ಹಾಸನಾಂಬ ಕಾಲೇಜ್ ಆಫ್ ಎಜುಕೇಶನ್ ಹಾಗೂ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಒಂಕರ್ಮಲ್ ಸೊಮಾನಿನ್ ಕಾಲೇಜ್ ಆಫ್ ಎಜುಕೇಶನ್ ಗೆ ನಿಗದಿಪಡಿಸಲಾಗಿದ್ದ ಒಟ್ಟು 75 ಸೀಟುಗಳ ಸಂಖ್ಯೆಯನ್ನು 38ಕ್ಕೆ ಇಳಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಈಗಾಗಲೇ ದಾಖಲಾಗಿದ್ದರೆ ಅಂತವರಿಗೆ ಪ್ರತ್ಯೇಕ ಆಯ್ಕೆ ಪಟ್ಟಿ ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ