Breaking News
Home / ಜಿಲ್ಲೆ / ಬೆಂಗಳೂರು / ಮೇಯಲ್ಲಿ ಚುನಾವಣೆ ಕಷ್ಟ ?

ಮೇಯಲ್ಲಿ ಚುನಾವಣೆ ಕಷ್ಟ ?

Spread the love

ಬೆಂಗಳೂರು: ಚುನಾವಣೆಗಳನ್ನು ಮುಂದೂಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಿಯೇ ಸಿದ್ಧ ಎಂದು ರಾಜ್ಯ ಚುನಾವಣ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಕ್ಷೇತ್ರ ಮರುವಿಂಗಡಣೆ, ಮೀಸಲಾತಿಗೆ ಸಂಬಂಧಿಸಿದ ಸದ್ಯದ ಬೆಳವಣಿಗಳನ್ನು ಗಮನಿಸಿದರೆ ಮೇ ತಿಂಗಳಿನಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆ ನಡೆಯುವುದು ಅನುಮಾನ.

ಜಿ.ಪಂ. ಮತ್ತು ತಾ.ಪಂ.ಗಳಿಗೆ ಸದಸ್ಯ ಸ್ಥಾನಗಳ ಸಂಖ್ಯೆ ನಿಗದಿಪಡಿಸಿ ಚುನಾವಣ ಆಯೋಗ ಮಾ. 24ರ ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರ ಬಳಿಕ ಸದಸ್ಯ ಸ್ಥಾನಗಳಿಗೆ ಭೌಗೋಳಿಕ ಪ್ರದೇಶ ಗುರುತಿಸಬೇಕು. ಇದಕ್ಕೆ ಕನಿಷ್ಠ ಒಂದು ವಾರ ಬೇಕು. ಬಳಿಕ ಮೀಸಲಾತಿ ಕರಡು ಅಧಿ ಸೂಚನೆ ಹೊರಡಿಸಬೇಕು. ಅದರ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕನಿಷ್ಠ ಒಂದು ವಾರ ನೀಡಬೇಕು. ಅಂತಿಮ ಮೀಸಲು ಅಧಿಸೂಚನೆ ಹೊರಡಿಸಿದ 45 ದಿನಗಳ ಬಳಿಕ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಬೇಕು.

ಭೌಗೋಳಿಕ ಪ್ರದೇಶ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಎಪ್ರಿಲ್‌ ಮೊದಲ ವಾರ ಆಗುತ್ತದೆ. 2ನೇ ವಾರದಲ್ಲಿ ಮೀಸಲು ಕರಡು ಅಧಿಸೂಚನೆ ಹೊರಡಿಸಬೇಕು. ಆಕ್ಷೇಪಣೆಗಳಿಗೆ ಕಾಲಾವಕಾಶ ಕೊಟ್ಟು ಅಂತಿಮ ಮೀಸಲು ಅಧಿಸೂಚನೆ 3ನೇ ವಾರದಲ್ಲಿ ಹೊರಬೀಳಬಹುದು. ಅದಾದ 45 ದಿನಗಳ ಅನಂತರ ಚುನಾವಣೆ ಅಧಿಸೂಚನೆ ಹೊರಡಿಸಬೇಕು. ಅಂದರೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಾಗಲೇ ಮೇ ಕೊನೆಯಾಗಬಹುದು.

ಈ ಮಧ್ಯೆ ಹೊಸ ಮೀಸಲಾತಿ ನಿಯಮಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಅವನ್ನು ಅಳವಡಿಸಿ ಮೀಸಲಾತಿ ಪ್ರಕ್ರಿಯೆ ಕೈಗೊಳ್ಳುವ ಅನಿವಾರ್ಯ ಇದೆ. ಮೇ-ಜೂನ್‌ ತಿಂಗಳಲ್ಲಿ ಜಿ.ಪಂ., ತಾ.ಪಂ.ಗಳ ಅವಧಿ ಮುಗಿಯಲಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಇದು ಸಾಧ್ಯವೇ ಎಂಬುದು ಪ್ರಶ್ನೆ.

ಜಿ.ಪಂ., ತಾ.ಪಂ. ಕ್ಷೇತ್ರ ನಿಗದಿ : ಚುನಾವಣೆ ನಡೆಯಲಿರುವ ಜಿ.ಪಂ. ಮತ್ತು ತಾ.ಪಂ.ಗಳಿಗೆ ಸದಸ್ಯ ಸ್ಥಾನ (ಕ್ಷೇತ್ರಗಳು)ಗಳನ್ನು ನಿಗದಿಪಡಿಸಿ ರಾಜ್ಯ ಚುನಾವಣ ಆಯೋಗ ಮಾ. 24ರಂದು ಅಧಿಸೂಚನೆ ಹೊರಡಿಸಿದೆ.

ಏಕೆ ಹೆಚ್ಚಳ, ಇಳಿಕೆ? :

ಈ ಹಿಂದೆ ಪ್ರತೀ 40 ಸಾವಿರ ಜನಸಂಖ್ಯೆಗೆ 1 ಜಿ.ಪಂ. ಮತ್ತು ಪ್ರತೀ 10 ಸಾವಿರ ಜನಸಂಖ್ಯೆಗೆ 1 ತಾ.ಪಂ. ಕ್ಷೇತ್ರ ರಚಿಸಲಾಗು ತ್ತಿತ್ತು. ಆದರೆ, ಪಂ. ರಾಜ್‌ ಕಾಯ್ದೆ ತಿದ್ದುಪಡಿ ಯಂತೆ 35 ಸಾವಿರಕ್ಕೆ ಒಂದು ಜಿ.ಪಂ. ಕ್ಷೇತ್ರ ಇರಬೇಕು. ಆದ್ದರಿಂದ ಜಿ.ಪಂ. ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ 12,500 ಜನಸಂಖ್ಯೆಗೆ 1 ತಾ.ಪಂ. ಕ್ಷೇತ್ರ ಇರಬೇಕು. ಹಾಗಾಗಿ ತಾ.ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಚುನಾವಣ ಆಯೋಗದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

2016 : 1,083

ಜಿ.ಪಂ. ಕ್ಷೇತ್ರಗಳು

3,903 ತಾ.ಪಂ. ಕ್ಷೇತ್ರಗಳು

2021 : 1,191

ಜಿ.ಪಂ. ಕ್ಷೇತ್ರಗಳು

3,285

ತಾ.ಪಂ. ಕ್ಷೇತ್ರಗಳು

108 ಜಿ.ಪಂ. ಕ್ಷೇತ್ರ ಹೆಚ್ಚಳ

618 ತಾ.ಪಂ. ಕ್ಷೇತ್ರಗಳು ಇಳಿಕೆ

ಮೇಯಲ್ಲೇ ಜಿ.ಪಂ., ತಾ.ಪಂ. ಚುನಾವಣೆ ಗಳು ನಡೆಯುತ್ತವೆ. ಮೀಸಲಾತಿ ನಿಯಮಗಳಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸ್ಪೀಕರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹೊಸ ನಿಯಮ ಅಳವಡಿಸಿ ಕೊಳ್ಳುವಂತೆ ಆಯೋಗಕ್ಕೆ ಸೂಚಿಸಲಾಗಿದೆ.– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಕ್ಷೇತ್ರ ಮರುವಿಂಗಡಣೆ ಯಷ್ಟೇ ಆಗಿರುವುದರಿಂದ ಹೊಸ ನಿಯಮಗಳನ್ನು ಅಳವಡಿಸಿಕೊಂಡು ಮೀಸಲಾತಿ ನಿಗದಿ ಪಡಿಸಲಾಗುವುದು. – ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ