ಸಗುಣ ಹಾಗೂ ನಿರ್ಗುಣ ಪರಮಾತ್ಮ ಶಂಕರರು ಚಿಕ್ಕಂದಿನಲ್ಲಿಯೇ ವಿಗ್ರಹಾರಾಧನೆಯನ್ನು ಮಾಡಿ, ಸಗುಣೋಪಾಸನೆಯ ಮಹಿಮೆಯನ್ನು ತಿಳಿದುಕೊಂಡಿದ್ದವರು. ಆದ್ದರಿಂದಲೇ ತಮ್ಮ ಜೀವಿತದ ಚರಮ ಭಾಗದಲ್ಲಿ ಸಗುಣೋಪಾಸನೆಯನ್ನು ಕೆಲವರಿಗೆ ಉಪದೇಶಿಸಿದರು. ಚಿಕ್ಕ ಮಕ್ಕಳಿಗೆ ಓದು ಕಲಿಸುವಾಗ, ಅಯಾ ರೂಪಗಳನ್ನು ಬರೆದು ತೋರಿಸಲು ಸ್ಲೇಟು, ಬಳಪಗಳನ್ನು ಉಪಯೋಗಿಸುವರು. ಅದೇ ರೀತಿ ಆಧ್ಯಾತ್ಮಿಕ ವಿದ್ಯೆ ಅಭ್ಯಸಿಸುವವರಿಗೆ, ಚಿಕ್ಕ ಮಕ್ಕಳಿಗೆ, ದೇವಾಲಯಗಳು, ವಿಗ್ರಹಗಳು, ದೇವತೆಗಳ ಚಿತ್ರಪಟಗಳು ಮೊದಲಾದುವಾಗಿವೆ. ಕಪ್ಪು ಹಲಗೆಮ ಬೋರ್ಡ್‍ಗಳು, ಆನೆಯ ರೂಪವಿರುವ ಪುಸ್ತಕಗಳು ಮೊದಲಾದ ಆಟದ ಸಾಮಾನುಗಳೊಂದಿಗೆ ಎಷ್ಟು ದಿನಗಳು ಆಡಿಕೊಂಡರೂ ನಿಜವಾದ ಆನೆಯ ರೂಪ ಸ್ವಭಾವಗಳು ನಿಮಗೆ ತಿಳಿಯದು. ಅವುಗಳಿಗೆ ಸಂಬಂಧಿಸಿದ ಅನುಭವವೂ ನಿಮಗೆ ಲಭಿಸದು. ನಿಜವಾದ ಆನೆಯನ್ನು ನೋಡಿದಾಗ ಅವು ನಿಮಗೆ ಲಭಿಸುವುವು. ಆದರೆ, ಭಗವತ್ ತತ್ವಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅದು ನಿರ್ಗುಣ, ನೀವು ಗುಣಾತೀತರಾದಾಗ ಮಾತ್ರವೇ ಆ ನಿರ್ಗುಣ ತತ್ತ್ವವನ್ನು ಅರಿಯಬಲ್ಲಿರಿ.
ವಿಶೇಷ ಲೇಖನ: ದಿವ್ಯತೇಜ ಆದಿಗುರು ಶಂಕರಾಚಾರ್ಯ ಜಯಂತಿ…..
ವೇದವು ಆತ್ಮ ಮತ್ತು ಆತ್ಮಕ್ಕಿಂತ ಭಿನ್ನವಾದ ಪರಮಾತ್ಮನನ್ನು ಬೋಧಿಸುತ್ತದೆ ಎಂದು ಸಾರುತ್ತಿದ್ದವರಿಂದ ವೇದವನ್ನು ರಕ್ಷಿಸಿ ಆತ್ಮನೇ ಪರಮಾತ್ಮನು, ಜೀವನು ಮೋಹಾದಿ ಮಾಯೆಯಿಂದ ಕನಸಿನಂತೆ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂದು ವಾಸ್ತವತೆಯನ್ನು ಅರಿವಿಗೆ ಬರುವಂತೆ ಹದಿನಾರನೇ ವಯಸ್ಸಿನಲ್ಲೇ ವೇದಗಳಿಗೆ ಭಾಷ್ಯವನ್ನು ಬರೆದು ಪ್ರತಿಪಾದಿಸಿದ ದಿವ್ಯ ತೇಜ ಆದಿಗುರು ಶಂಕರಾಚಾರ್ಯ. ವೈಶಾಖ ಮಾಸ ಶುಕ್ಲ ಪಂಚಮಿದಿನದಂದು ಜನಿಸಿದ ಶಂಕರರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ
ಕ್ರಿ.ಶ.788ರಲ್ಲಿ ವೈಶಾಖ ಶುಕ್ಲ ಪಂಚಮಿಯಲ್ಲಿ ಆರಿದ್ರಾ ನಕ್ಷತ್ರ ಮಿಥುನರಾಶಿಯಲ್ಲಿ ಚಂದ್ರನಿರುವಾಗ ಈ ದೇದೀಪ್ಯಮಾನ ಪ್ರತಿಭೆ ಕೇರಳ ರಾಜ್ಯದ ಕಾಲಟೀ ಎಂಬ ಗ್ರಾಮದಲ್ಲಿ ಉತ್ತಮ ವೈದಿಕ ಸಂಪ್ರದಾಯದ ನಂಬೂದರಿ ಮನೆತನದ, ತಿರುಶಿವಪೆರುರು ಎಂಬ ಹಿರಿಯರ ಹಿತವಚನವನ್ನು ಪಾಲಿಸುತ್ತಾ ತ್ರಿಚೂರಿನ ವೃಷಾಚಲೇಶ್ವರನ ಅಖಂಡ ಸೇವೆಯಲ್ಲಿ ಭಕ್ತಿ ಪುರಸ್ಸರವಾಗಿ ಸೇವೆ ಸಲ್ಲಿಸುತ್ತಿದ್ದ ಆರ್ಯಾಂಬೆ, ಶಿವಗುರು ದಂಪತಿಗಳಿಗೆ ಸುಪುತ್ರನಾಗಿ ಮೂಡಿತು.
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳು ಅರಿಷಡ್ವರ್ಗಗಳು ಎನಿಸಿವೆ. ಈ ಆರೂ ಮಾನವನಿಗೆ ಶತ್ರುಗಳು. ಅವು ನಿಶಾಚಾರರಾದ ಗೂಬೆ ಬಾವಲಿಗಳಂತಹವು. ಬೆಳಕನ್ನು ಸಹಿಸದು. ಮಾನವನ ಮನಸ್ಸು ಅಜ್ಞಾನವೆನ್ನುವ ಅಂಧಕಾರದಿಂದ ತುಂಬಿದೆ. ಆದ್ದರಿಂದ ಆ ಆರು ಶತ್ರುಗಳು ಅದರಲ್ಲಿ ಪ್ರವೇಶಿಸುವರು. ಈ ಅಂಧಕಾರವು ಕಲ್ಲುಬೀಸಿದರೆ ಓಡಿಹೋಗದು; ಕತ್ತಿಯಿಂದ ಇರಿದರೂ, ತುಪಾಕಿಯಿಂದ ಸುಟ್ಟರೂ ಅಂತ್ಯವಾಗುವುದಿಲ್ಲ. ದೀಪವನ್ನು ಬೆಳಗಿಸಿದರೆ ಮಾತ್ರ ಅದು ನಾಶವಾಗುವುದು. ಸಾಮಾನ್ಯವಾದ ಈ ಸತ್ಯವು ಶಂಕರರು ಬೋಧಿಸುವವರೆಗೂ ಕೆಲವರಿಗೆ ತಿಳಿಯಲೇ ಇಲ್ಲ.
ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಿದರು “ಅದ್ವೈತ” ಎಂದರೆ ಪ್ರಪಂಚದಲ್ಲಿ ಎರಡಿಲ್ಲ, ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ; ಬ್ರಹ್ಮನು ಬೇರೆ ನಾವು ಬೇರೆ ಅಲ್ಲ ಎಂಬ ತತ್ವ. ಪಾರಮಾರ್ಥಿಕವಾಗಿ ಮೇಲುಕೀಳು ಎನ್ನುವುದಿಲ್ಲ. ಎಲ್ಲವೂ ಬ್ರಹ್ಮ. ಎಲ್ಲವೂ ಪೂಜನೀಯ ಎಂದು ಹೇಳಿ, ಮನುಷ್ಯರಾದ ನಮ್ಮಲ್ಲಿ ಮೇಳುಕೀಳು ಭಾವನೆ ಇರಬಾರದು. ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಿದರು. ಈ ದೇಶದ ಪ್ರಜೆಗಳ ದೃಷ್ಟಿ ಅಂಧಕಾರದಿಂದ ಆವೃತ್ತವಾಗಿದ್ದರಿಂದ ದಾರಿತಪ್ಪಿ ಏನೇನೋ ಲಕ್ಷದಲ್ಲಿಟ್ಟುಕೊಂಡು, ಅವುಗಳನ್ನು ಅನ್ವೇಷಿಸುವುದರಲ್ಲಿ ಮಗ್ನರಾಗಿ ಮುಖ್ಯ ಲಕ್ಷ್ಯವನ್ನೇ ಸೇರಲಾರದವರಾಗಿದ್ದಾರೆ. ಅಂಥವರಿಗೆ ಶಂಕರರು ಅದ್ವೈತವನ್ನು ಬೋಧಿಸಿ, ವೇದ, ಉಪನಿಷತ್ತು, ಶಾಸ್ತ್ರಗಳನ್ನು ಏಕಗ್ರೀವವಾಗಿ ಅಂಗೀಕರಿಸಿದರೆ ಅದೊಂದೇ ಸರಿಯಾದ ಮಾರ್ಗವೆಂದು ತಿಳಿಸಿ ಹೇಳಿದರು. ಜೀವನ, ಈಶ್ವರನು ಒಂದೇ, ಒಬ್ಬರೇ ವಿನಾ ಇಬ್ಬರಲ್ಲ ಎಂದು ಹೇಳುವ ಮತವೇ ಅದ್ವೈತ ತತ್ತ್ವ
ಸನ್ಯಾಸ ಸ್ವೀಕಾರಕ್ಕೆ ತಾಯಿಯ ಅನುಮತಿ ಶಂಕರರು ಲೋಕಕ್ಕೆ ವೈರಾಗ್ಯವನ್ನು ಬೋಧಿಸಲೆಳಿಸಿ, ಅದಕ್ಕೆ ಅರ್ಹತೆಯನ್ನುಗಳಿಸಲು ತಾವು ಸನ್ಯಾಸವನ್ನು ಸ್ವೀಕರಿಸಬೇಕೆಂದು ನಿಶ್ವಯಿಸಿಕೊಂಡರು. ಸನ್ಯಾಸ ಸ್ವೀಕಾರಕ್ಕೆ ತಾಯಿಯ ಅನುಮತಿ ಬೇಕು. ತನ್ನ ತಾಯಿಗೆ ತಾನೊಬ್ಬನೇ ಮಗನಾದ್ದರಿಂದ ಆಕೆ ಏಕಪುತ್ರ ಪ್ರೇಮಾತಿಶಯದಿಂದ ಸಮ್ಮತಿಸಲಾರಳೆಂದುಕೊಂಡು ಒಂದು ಉಪಾಯವನ್ನು ಮಾಡಿದರು. ಒಂದು ದಿನ ತಮ್ಮ ಮನೆಯ ಪಕ್ಕದಲ್ಲೆ ಇದ್ದ ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಾ, “ಅಮ್ಮಾ! ನನ್ನ ಕಾಲನ್ನು ಮೊಸಳೆ ಹಿಡಿದುಕೊಂಡಿದೆ” ಎಂದು ಜೋರಾಗಿ ಕಿರುಚಿದರು. ಅದು ನಿಜವೇ, ಪೂರ್ವದಲ್ಲಿ ಗಜೇಂದ್ರನ ಕಾಲನ್ನು ಹಿಡಿದುಕೊಂಡಿತು. ಆದರೆ ತನನ್ನು ನಿಜವಾಗಿ ಹಿಡಿದುಕೊಂಡಿದ್ದು ವಿಷಯಗಳ ಆಸೆಯನ್ನೇ ಹೊರತು ಮೊಸಳೆಯಲ್ಲ. ಅದನ್ನು ಶಂಕರರು ಆ ವಿಧವಾಗಿ ಕಾಣುವಂತೆ ಮಾಡಿದರು. ಕುಮರನ ಕೂಗನ್ನು ಕೇಳಿ ತಾಯಿ ಓಡಿ ಬಂದು ತನ್ನ ಮಗನಿಗೆ ಸಂಭವಿಸಿರುವ ವಿಪತ್ತನ್ನು ನೋಡಿ ಅಳತೊಡಗಿದಳು. ಆಗ ಶಂಕರರು, “ಅಮ್ಮಾ! ನಾನು ಸನ್ಯಾಸ ದೀಕ್ಷೆವಹಿಸಲು ನೀನು ಅನುಮತಿ ಕೊಟ್ಟ ಹೊರತು ಈ ಮೊಸಳೆ ನನ್ನ ಕಾಲು ಬಿಡುವುದಿಲ್ಲ” ಎಂದರು. ಅದೂ ನಿಜವೇ. ಪ್ರಪಂಚ ಸಂಬಂಧವನ್ನು ಬಿಡಿಸಿಕೊಳ್ಳುವುದು, ಬಂಧನದಿಂದ ತನ್ನನ್ನೂ ತಾನು ಮುಕ್ತಿಗೊಳಿಸಿಕೊಳ್ಳುವುದು, ಸನ್ಯಾಸಿಯಾಗಿಯಾದರೂ ಸರಿ, ತನ್ನ ಮಗನು ಜೀವಂತವಾಗಿದ್ದರೆ ಸಾಕು ಎಂದು ಶಂಕರರ ತಾಯಿ ಅನುಮತಿ ಇತ್ತಳು. ತಕ್ಷಣವೇ ಮೊಸಳೆ ಹಿಡಿತವನ್ನು ಬಿಟ್ಟು ಅಂತರ್ಧಾನವಾಯಿತು. ಶಂಕರರು ಮೋಕ್ಷ ರಹಸ್ಯವನ್ನು ತಿಳಿಸುವ ಗುರುವನ್ನು ಹುಡುಕಿಕೊಂಡು ಆ ನದಿಯ ದಡದಿಂದ ಹಾಗೇ ಹೊರಟು ಹೋದರು. ಶಂಕರರು ಜೀವಿಸಿದ್ದು ಮೂವತ್ತೆರಡು ವರ್ಷಗಳು ಮಾತ್ರವಾದರೂ ಆ ಸ್ವಲ್ಪ ಕಾಲದಲ್ಲಿಯೇ ಅವರು, ಅಂದು ಬಹು ವಿಧಗಳಲ್ಲಿ ನಡೆಯುತ್ತಿದ್ದ ಆರಾಧನೆಯ ವಿಧಾನವನ್ನು ಸಂಸ್ಕರಿಸಿ ಸಮೀಕರಣ ಮಾಡಿ ಎಲ್ಲವನ್ನೂ ವೇದಾಂತ ತತ್ವದ ಏಕಸಿದ್ಧಾಂತವಾದ ಅದ್ವೈತದ ಒಳಗೆ ಅಳವಡಿಸಿದರು
ಮಾಯೆಯೂ ಸಹ ಆದಿಪುರುಷ ನಿರ್ಮಿತವೇ ವೇದಗಳ ಮಹಾವಾಕ್ಯಗಳು ತಮ್ಮ ಸರಿಯಾದ ನಿಜಾರ್ಥದೊಂದಿಗೆ ಎಲ್ಲರ ಹೃದಯಾಂತರಂಗದೊಳಗೆ ದೃಢವಾಗಿ ನಿಲ್ಲುವಂತೆ ಭಾಷ್ಯಗಳನ್ನು ರಚಿಸಿದರು ಶಂಕರರು. “ಅಹಂ ಬ್ರಹ್ಮಾಸ್ಮಿ”, “ತತ್ವಮಸಿ”, “ಪ್ರಜ್ಞಾನಂ ಬ್ರಹ್ಮಾ”, “ಆಯಮಾತ್ಮಾ ಬ್ರಹ್ಮಾ” ಮೊದಲಾದ ವಾಕ್ಯಗಳೆಲ್ಲಾ ಸುಲಭವಾದ ಭಾಷೆಯಲ್ಲಿ ತರ್ಕಸಮ್ಮತವಾದ ಮಧುರ ಕವಿತಾ ರೂಪದಲ್ಲಿ ಜಿಜ್ಞಾಸುಗಳಿಗೆ ಬೋಧಿಸಲಾಗಿದೆ. ಶಂಕರರ ಅದ್ವೈತವೇ ದೇವಾಂತದಲ್ಲಿ ಕೊನೆ ಸಿದ್ಧಾಂತ. ಅದೇ ಪರಮ ಸತ್ಯ. ಆದ್ದರಿಂದಲೇ ವಿಜ್ಞಾನ ಶಾಸ್ತ್ರವು ಹೊಸದಾಗಿ ಕಂಡು ಹಿಡಿದಿರುವ ಸಿದ್ಧಾಂತಗಳಿಗಾಗಲೀ ಮೇಧಾವಿಗಳ ಹೇತುವಾದಗಳಿಗಾಗಲೀ ಚಲಿಸದೇ ದೃಢವಾಗಿ ಸುಸ್ಥಿರವಾಗಿ ನಿಂತಿದೆ. ಅದ್ವೈತವು ದ್ರವ್ಯಶಕ್ತಿಗಳಿಗೂ ಮಾಯಾವರಣದಿಂದ ಕೂಡಿರುವಂತೆ ಜಗತ್ತಿಗೂ ಇರುವ ಏಕತೆಯನ್ನು ಹೇಳುವುದು. ಆ ಮಾಯೆಯೂ ಸಹ ಆದಿಪುರುಷ ನಿರ್ಮಿತವೇ.
ಅರಿವೇ ಗುರು ಎಂದು ಬೋಧಿಸಿದರು ಮಾನವನ ಮಾನಸದಿಂದ ಅಹಂಕಾರವೆನ್ನುವ ದೈತವನ್ನು ತೊಲಗಿಸುವುದಕ್ಕೂ ಅದ್ವೈತ ಭಾವವನ್ನು ಸಿದ್ಧಿಸಿಕೊಳ್ಳುವುದಕ್ಕೂ ತೀವ್ರವಾದ ಸಾಧನೆಯು ಆತ್ಯಾವಶ್ಯವೆಂದು ಶಂಕರರಿಗೆ ತಿಳಿದಿತ್ತು. ಆದ್ದರಿಂದಲೇ ಅದಕ್ಕೆ ಪ್ರಥಮ ಶಿಕ್ಷಣವಾಗಿ ಯೋಗ, ಭಕ್ತಿ, ಕರ್ಮಸೂತ್ರಗಳನ್ನು ಬೋಧಿಸಿದರು. ಆ ಮೂರು ಬುದ್ಧಿಗೆ ವಿಕಾಸವನ್ನುಂಟುಮಾಡಿ, ಭಾವ ವಿಕಾರಗಳನ್ನು ತೊಲಗಿಸಿ ಹೃದಯವನ್ನು ಪರಿಶುದ್ಧಗೊಳಿಸಿ, ವ್ಯಕ್ತಿಗೂ ಜಗತ್ತಿಗೂ ಇರುವ ಸತ್ಯವಾದ ಏಕತೆಯನ್ನು ತಿಳಿಯಪಡಿಸುವುದು. ಲೋಕದಲ್ಲಿರುವ ಪ್ರತಿ ಪ್ರದೇಶದಲ್ಲಿಯೂ ಪ್ರತಿ
ಪದಾರ್ಥದಲ್ಲಿಯೂ ಸರ್ವತ್ರ, ಸರ್ವರಲ್ಲಿಯೂ ಭಗವಂತನ ಕರುಣೆ ತುಂಬಿದೆ ಎನ್ನುವ ಜ್ಞಾನದ ಅರಿವೇ ಅದ್ವೈತ. ಶಂಕರರು ಸಾಧನೆಗೆ ಮೊಟ್ಟ ಮದಲಿನ ಹಂತವೇ ಸತ್ಸಂಗವೆಂದು ಹೇಳಿರುವುದು. ಸತ್ಸಂಗವನ್ನು ನಿಸ್ಸಂಗತ್ವವನ್ನು ಜೀವನದಲ್ಲಿ ಅಳವಡಿಸಿದರೆ ಮೌನದಲ್ಲಿಯೇ ಏಕಾಂತವಾಸದಲ್ಲಯೂ ಆಸಕ್ತಿ ಹುಟ್ಟಿಸುವುದು. ಅದು ಮೋಹವನ್ನು ದೂರ ಮಾಡುವುದು. ಪ್ರಾರ್ಥನೆಗೆ ಭಗವದ್ಗೀತೆಯನ್ನು ಕೇಳಿದುದರಿಂದ ಇದೇ ಫಲವು ಸಿದ್ಧಿಸಿತು. ಅದು ಲಭಿಸಿದಾಗ ನಿಶ್ವಲ ತತ್ವವು ದೃಢವಾಗುವುದು. ಸ್ಥಿರವಾಗುವುದು. ತತ್ ಅದು ಎಂದರೆ ಪರಮಾತ್ಮ ತ್ವಂ ನೀನು, ಎಂದರೆ ಜೀವಾತ್ಮ ಎನ್ನುವದರ ಪರಮಾರ್ಥ ಎಂದರೆ ಇವೆರಡಕ್ಕೂ ಇರುವ ಏಕತ್ವವನ್ನು ಗುರುತಿಸುವುದೇ ಅರಿಯುವುದೇ, ಮುಕ್ತಿ ಪ್ರಾಪ್ತಿ.