Home / Uncategorized / 55 ವರ್ಷ ಮೇಲ್ಪಟ್ಟ ಪೊಲೀಸರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ:ಐಜಿಪಿ ಪ್ರವೀಣ್ ಸೂದ್

55 ವರ್ಷ ಮೇಲ್ಪಟ್ಟ ಪೊಲೀಸರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ:ಐಜಿಪಿ ಪ್ರವೀಣ್ ಸೂದ್

Spread the love

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದೀಗ ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಅವರು, 55 ವರ್ಷ ಮೇಲ್ಪಟ್ಟ ಪೊಲೀಸರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಮಧುಮೇಹ, ಬಿಪಿ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೊ ಸಿಬ್ಬಂದಿಗೆ ರೋಡ್ ಮೇಲೆ ಡ್ಯೂಟಿ ಹಾಕುವಂತಿಲ್ಲ. ಠಾಣೆಯ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಹಾಕಬೇಕು ಎಂದು ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

ವಯಸ್ಸಾದವರನ್ನು ಹಾಗೂ ಕಾಯಿಲೆ ಇರುವವರನ್ನ ಕೋವಿಡ್ ಬಾಧಿಸುತ್ತದೆ. ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಕೆಲಸವಾಗಿದೆ. ಹೀಗಾಗಿ 55 ವರ್ಷ ಮೇಲ್ಪಟ್ಟವರನ್ನ ರಸ್ತೆ, ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ಡ್ಯೂಟಿಗೆ ಹಾಕಬಾರದು. ಸ್ಟೇಷನ್ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಒದಗಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ