ಚಿಕ್ಕೋಡಿ -ಚಿಂಚಲಿ ಪಟ್ಟಣದಲ್ಲಿ ಕಟ್ಟಡವೊಂದರಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ.
ಕೊರೊನಾ ಭಯಕ್ಕೆ ರಾತ್ರೋರಾತ್ರಿ ಮಾನೆಗಳನ್ನ ಖಾಲಿ ಮಾಡುತ್ತಿರುವ ಜನ ಹತ್ತಿರದ ತೋಟಗಳಲ್ಲಿ ಟೆಂಟ್ ಹಾಕಿಕೊಂಡು ಇರಲು ನಿರ್ಧರಿಸಿದ್ದಾರೆ.
ಚಿಂಚಲಿ ಪಟ್ಟಣದ ಭಕ್ತಿ ನಿವಾಸದಲ್ಲಿ 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾಯಕ್ಕಾ ದೇವಸ್ಥಾನದ ಭಕ್ತಿನಿವಾಸದ ಸುತ್ತಲೂ ಇರುವ 40 ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ.
ಕುಡಚಿ ಪಟ್ಟಣ ಸೇರಿದಂತೆ ಬೇರೆ ರಾಜ್ಯದ 44 ಜನರನ್ನು ಚಿಂಚಲಿಯಲ್ಲಿ ಕ್ವಾರಂಟೈನ ಮಾಡಲಾಗಿದೆ.
ಇದರಿಂದ ನಮಗೂ ಕೊರೊನಾ ಬರುತ್ತದೆ ಎಂಬ ಆತಂಕದಲ್ಲಿ ರಾತ್ರೋರಾತ್ರಿ ಮನೆಗಳನ್ನ ಖಾಲಿ ಮಾಡುತ್ತಿದ್ದಾರೆ.
ಕ್ವಾರಂಟೈನ್ ಮಾಡಿರುವ ಕಟ್ಟಡ ಚಿಂಚಲಿ ಪಟ್ಟಣದ ಮಧ್ಯಭಾಗದಲ್ಲಿರುವ ಧರ್ಮಶಾಲೆ. ಈ ಹಿಂದೆ ಶಂಕಿತರನ್ನ ಇಲ್ಲಿರಿಸಲು ಜನ ವಿರೋಧ ವ್ಯಕ್ತಡಿಸಿದ್ದರು. ವಿರೋಧದ ನಡುವೆಯೂ ಬೇರೆ ಊರಿನ ಜನರನ್ನ ಇಲ್ಲಿಗೆ ತಂದು ಕ್ವಾರಂಟೈನ ಮಾಡಲಾಗಿದೆ. ಹಾಗಾಗಿ ಮಕ್ಕಳು, ವೃದ್ದರನ್ನು ಕರೆದುಕೊಂಡು ಜನ ಹೊರಗೆ ಹೋಗುತ್ತಿದ್ದಾರೆೆ
