ಬೆಂಗಳೂರು: ಪಾದರಾಯನಪುರದ ನಿವಾಸಿಗಳಿಗೆ, ಶಾಂತಿ ಕಾಪಾಡುವಂತೆನಿನ್ನೆ ಇಲ್ಲಿನ ಕೆಲ ನಿವಾಸಿಗಳನ್ನ ಕ್ವಾರಂಟೈನ್ಗೆ ಒಳಪಡಿಸುವ ವಿಚಾರವಾಗಿ ಸ್ಥಳೀಯರು, ಬಿಬಿಎಂಪಿ, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಗಲಾಟೆ ಮಾಡಿದ್ರು. ಈ ಹಿನ್ನೆಲೆ ಟ್ವೀಟ್ ಮಾಡಿರೋ ಜಮೀರ್ ಅಹ್ಮದ್, ಪಾದರಾಯನಪುರ ನಿವಾಸಿಗಳೆಲ್ಲಾ ಶಾಂತಿಯಿಂದ ಇದ್ದು, ಬಿಬಿಎಂಪಿಯ
ಮಾರ್ಗಸೂಚಿಗಳನ್ನ ಪಾಲಿಸುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಶಾಸಕ ಜಮೀರ್ ಅಹ್ಮದ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆಗೆ ಯತ್ನಿಸಿರುವುದು ದುಃಖಕರ. ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವುದು ನಿಮ್ಮ ಕ್ಷೇಮಕ್ಕಾಗಿ. ಅವರೊಂದಿಗೆ ಸಹಕರಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.