Breaking News
Home / ಜಿಲ್ಲೆ / ಬೆಳಗಾವಿ ಸೇರಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಳಗಾವಿ ಸೇರಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

Spread the love

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕಕ್ಕೆ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ರಾಜ್ಯ ಗುಪ್ತದಳ ಐಜಿಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅಯ್ಯಂಕಿ, ಬೆಳಗಾವಿ ಉತ್ತರ ವಲಯದ ಎಸಿಬಿಯ ಎಸ್ಪಿ ಬಿ.ಎಸ್‍. ನೇಮೆಗೌಡ, ಬೆಂಗಳೂರಿನ ಸಿಐಡಿಯ ಆರ್ಥಿಕ ಅಪರಾಧಗಳ ಘಟಕದ ಡಿವೈಎಸ್ಪಿ ಬಸವಣ್ಣಪ್ಪ ರಾಮಚಂದ್ರ, ಬೆಂಗಳೂರು ರೈಲ್ವೆ ವಿಭಾಗದ ಡಿವೈಎಸ್‍ಪಿ ಡಿ.ಅಶೋಕ್, ಬಿಡಿಎ ವಿಶೇಷ ಕಾರ್ಯಪಡೆಯ ಡಿವೈಎಸ್‍ಪಿ ಸಿ.ಬಾಲಕೃಷ್ಣ, ಪೊಲೀಸ್ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಡಿವೈಎಸ್ಪಿ ವಿ.ಕೆ.ವಾಸುದೇವ್, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಬಾಲಚಂದ್ರ ನಾಯಕ್ ಅವರು ಸೇವಾ ಪದಕಕ್ಕೆ
ಬೆಂಗಳೂರು ಗುಪ್ತದಳದ ಎಎಸ್‍ಐ ಹೊನ್ನಗಂಗಯ್ಯ ಈಶ್ವರಯ್ಯ, ಉಡುಪಿಯ ಡಿಸಿಆರ್‍ಬಿಯ ಎಎಸ್‍ಐ ಪ್ರಕಾಶ್, ಚಾಮರಾಜನಗರ ಜಿಲ್ಲೆ ಮಹಿಳಾ ಠಾಣೆಯ ಇನ್ಸಪೆಕ್ಟರ್ ಬಸವಯ್ಯಪುಟ್ಟಸ್ವಾಮಿ, ಕೆಎಸ್‍ಆರ್‍ಪಿಯ ಮೂರನೇ ಬೆಟಾಲಿಯನ್‍ನ ವಿಶೇಷ ಸಹಾಯಕ ಸಬ್ ಇನ್ಸಪೆಕ್ಟರ್ ವೆಂಕಟೇಶ್, ನಾಲ್ಕನೇ ಬೆಟಾಲಿಯನ್‍ನ ವಿಶೇಷ ಸಹಾಯಕ ಎಸೈಗಳಾದ ಮೋಹನ್‍ರಾಜ್ ಕುರಡಗಿ, ವೆಂಕಟಸ್ವಾಮಿ ಚಿನ್ನಪ್ಪ, ಗುಪ್ತದಳದ ವಿಶೇಷ ಸಹಾಯಕ ಸಬ್‍ ಇನ್ಸಪೆಕ್ಟರ್ ಶಶಿಕುಮಾರ್, ಕೊಡಗು ಜಿಲ್ಲೆ ಡಿಎಆರ್ ಸಹಾಯಕ ಎಸ್‍ಐ ಜಿತೇಂದ್ರ ಕುಡುಕಡಿ, ರಾಧಾಕೃಷ್ಣ ರೈ, ಮೈಸೂರು ಡಿಎಆರ್ ಹೆಡ್‍ಕಾನ್‍ಸ್ಟೆಬಲ್ ರಾಮಚಂದ್ರ ಲೋಕೇಶ್, ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಉಸ್ಮಾನ್‍ಸಾಬ್, ಬೆಂಗಳೂರಿನ ಸಿಐಡಿ ಘಟಕದ ಹೆಡ್‍ಕಾನ್‍ಸ್ಟೆಬಲ್ ಸತೀಶ್ ಕೆಂಪಯ್ಯ ವೆಂಕಟಪ್ಪ, ಮಂಗಳೂರಿನ ಕೆಎಸ್‍ಆರ್ಪಿ 7ನೇ ಬೆಟಾಲಿಯನ್‍ನ ಹೆಡ್‍ಕಾನ್‍ಸ್ಟೆಬಲ್ ಪ್ರಕಾಶ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ