Breaking News

ಖಾನಾಪುರ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಂಜಿನಿಯರ್

ಖಾನಾಪುರ: ಸ್ಥಳೀಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರದುಂಡೇಶ್ವರ ಮಹಾದೇವ ಬನ್ನೂರ ಮಂಗಳವಾರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮನರೇಗಾ ಕಾಮಗಾರಿಗೆ ತಾಂತ್ರಿಕ ಅನುಮೋದನೆ ನೀಡಲು ತಮ್ಮ ಕಚೇರಿಯಲ್ಲೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರಿಂದ ₹10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.   ಖಾನಾಪುರ ತಾಲ್ಲೂಕಿನ ನೀಲಾವಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ವಾರ್ಡಿನಲ್ಲಿ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ …

Read More »

ಮಹಿಳಾ ಮತದಾರರು ಬಿಜೆಪಿ ಪರ ಇದ್ದಾರೆ: B.S.Y.

ಬೆಳಗಾವಿ: ‘ರಾಜ್ಯದಲ್ಲಿ ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತೆಯರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ಗಳನ್ನು ಕೊಟ್ಟಿದ್ದೇವೆ. ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ನಿಮಗೆ ಉತ್ತರ ಕೊಡುತ್ತೇವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.   ‘ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಏಕಮಾತ್ರ ಮಹಿಳಾ ಸಂಸದರಾದ ಮಂಗಲಾ ಅಂಗಡಿ ಅವರಿಗೆ ಟಿಕೆಟ್‌ ತಪ್ಪಿಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, …

Read More »

ಐಪಿಎಲ್ ಬೆಟ್ಟಿಂಗ್ ಹುಚ್ಚಿಗೆ ಕೋಟಿ ಸಾಲ ಮಾಡಿದ ಪತಿ! ಸಾಲಗಾರರ ಹಿಂಸೆಗೆ ಮಸಣ ಸೇರಿದ ಪತ್ನಿ

ಚಿತ್ರದುರ್ಗ: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬ ಮಾತನ್ನು ಕೇಳಿರುತ್ತೇವೆ. ಇಲ್ಲ ಕಣ್ಣಾರೆ ಸಹ ನೋಡಿರುತ್ತೇವೆ. ಇಲ್ಲಿಯೂ ಅಂತಹದ್ದೇ ದುರ್ಘಟನೆ ಸಂಭವಿಸಿದೆ. ಪತಿಯ ಬೆಟ್ಟಿಂಗ್ (Cricket Betting) ಗೀಳಿಗೆ ಪತ್ನಿ ದುರಂತ ಅಂತ್ಯ ಕಂಡಿದ್ದಾಳೆ. ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಕರ್ನಾಟಕದ (Karnataka) ನಿವಾಸಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾನೆ. ಪತಿಯ ಸಾಲದಿಂದ ಪ್ರತಿನಿತ್ಯ ಆಕೆಯೂ ನರಕ ಕಂಡಿದ್ದಾಳೆ. ಕೊನೆಗೆ ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿ ಆತ್ಮಹತ್ಯೆಗೆ …

Read More »

ಹೊಸ ರೇಷನ್‌ ಕಾರ್ಡ್‌ಗಳಿಗೆ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ: ಬೇಕಾದ ದಾಖಲೆಗಳೇನು?

ಏಪ್ರಿಲ್‌ 1ರಿಂದ ಮತ್ತೆ ಹೊಸ ರೇಷನ್‌ ಕಾರ್ಡ್‌ಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಲಿದೆ ಎಂದು ವರದಿಯಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಮಾನದಂಡಗಳು:   ಕರ್ನಾಟಕದ ನಿವಾಸಿಯಾಗಿರಬೇಕು. ಈಗಾಗಲೇ ರೇಷನ್‌ ಕಾರ್ಡ್‌ ಹೊಂದಿರಬಾರದು. ಬೇಕಾದ ದಾಖಲೆಗಳು: ಓಟರ್‌ ಐಡಿ, ಆಧಾರ್‌ ಕಾರ್ಡ್‌, ವಯಸ್ಸಿನ ಪ್ರಮಾಣಪತ್ರ, ಡ್‌ರೈವಿಂಗ್‌ ಲೈಸನ್ಸ್‌, ಇತ್ತೀಚಿನ ಫೋಟೊ(ಪಾಸ್‌ಪೋರ್ಟ್‌ ಸೈಜ್‌), ಮೋಬೈಲ್‌ ನಂಬರ್‌, ಸ್ವಯಂ ಘೋಷಿತ ಪ್ರಮಾಣ ಪತ್ರ ಹೊಂದಿರಬೇಕು. https://ahara.kar.nic.in/ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ, ರೇಷನ್‌ …

Read More »

ರೂಲ್ಸ್ ಅಂದ್ರೆ ರೂಲ್ಸ್..! DC ಕಾರ್ ಸಹ ತಪಾಸಣೆ

ಲೋಕಸಭಾ ಚುನಾವಣೆಗೆ ಕಟ್ಟುನಿಟ್ಟಿನ ರೂಲ್ಸ್ ಜಾರಿ ಹಿನ್ನಲೆ ಕಲಬುರಗಿ DC ಫೌಜಿಯಾ ತರುನಮ್ ಕಾರ್ ಸಹ ತಪಾಸಣೆ ಮಾಡಿದ ಎಲೆಕ್ಷನ್ ಟೀಂ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.. ಜಿಲ್ಲಾಧಿಕಾರಿ & ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಫೌಜಿಯಾ ತರನಮ್ ಹೀರಾಪುರ್ ಕ್ರಾಸ್ ಚೆಕ್ ಪೋಸ್ಟ್ ಗೆ ಭೇಟಿ. ನೀಡಿದ ವೇಳೆ ನನ್ನ ಕಾರ್ ಸಹ ತಪಾಸಣೆ ಮಾಡಿ ಅಂತ ಖುದ್ದು DC ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ರು..DC ಸೂಚನೆ ಮೇರೆಗೆ …

Read More »

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು ಮೆಜೆಸ್ಟಿಕ್ ಲಾಸ್ಟ್ ಸ್ಟಾಪಲ್ಲಿ ಬಸ್ ನಿಲ್ತು. ಕೆಳಗೆ ಇಳಿಯೋವಾಗ ನನ್ನ ಹಿಂದೆ ಒಬ್ರು ಅಜ್ಜಿ ಇದ್ರು. ಕಂಡಕ್ಟರ್ ನನ್ನ ಹತ್ರ “ನೀವು ಯಾವ್ ಕಡೆ ಹೋಗೋದು? ಇವರಿಗೆ ರೈಲ್ವೇ ಸ್ಟೇಷನ್ ತೋರಿಸ್ತೀರಾ” ಅಂತ ಕೇಳಿದ್ರು. ನಾನು ವಿರುದ್ಧ ದಿಕ್ಕಿನಲ್ಲಿ ಹೋಗೋನು, ಬಟ್ ಹಿಂಗ್ ಹಿಂಗ್ ಇದೆ ಸ್ಟೇಷನ್ ರೋಡ್ ಅಂತ ಅಜ್ಜಿಗೆ …

Read More »

ಕಾರ್ಮಿಕರಿಗೆ ಗುಡ್ ನ್ಯೂಸ್ : ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ – 2025ರಿಂದ ಜಾರಿ ಸಾಧ್ಯತೆ

ನವದೆಹಲಿ : ಕಾರ್ಮಿಕರಿಗೆ ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2025ರಿಂದ ಈ ವೇತನ ಬದಲಾವಣೆ ಜಾರಿಗೆ ತರುವ ಸಾಧ್ಯತೆ ಇದೆ. ಜೀವನ ವೇತನ ಜಾರಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ತಾಂತ್ರಿಕ ಸಹಕಾರ ಪಡೆದು ರೂಪುರೇಷೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕನಿಷ್ಠ ವೇತನದಲ್ಲಿ ಕಾರ್ಮಿಕರ ಕೆಲಸ, ಉತ್ಪಾದಕತೆ, ಕೌಶಲ ಪರಿಗಣಿಸಿ ವೇತನ ನಿಗದಿ ಮಾಡಲಾಗುತ್ತದೆ. ಜೀವನ ವೇತನದಲ್ಲಿ ಹೆಚ್ಚಿನ …

Read More »

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ಚಿತ್ರದುರ್ಗ ತಹಸಿಲ್ದಾ‌ರ್ ನಾಗವೇಣಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಲೋಕಸಭಾ ಚುನಾವಣೆ : 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್‌

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಪಕ್ಷವು ತನ್ನ ಪಾಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆಯೇ ಮಂಡ್ಯದಿಂದ ಸ್ವತಃ ಮಾಜಿ ಸಿಎಂ, ಜೆಡಿಎಸ್‌ ರಾಜಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಸ್ಪರ್ಧಿಸಿದರೆ, ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿರುವ ಹಾಸದನದಿಂದ ಎಚ್.ಡಿ ದೇವೇಗೌಡ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ಘೋಷಿಸಿದೆ.ಅಲ್ಲದೆ ,ಕೋಲಾರದಿಂದ ಮಲ್ಲೇಶ್‌ ಬಾಬು ಅವರಿಗೆ ಜೆಡಿಎಸ್ ಟಿಕೆಟ್‌ ನೀಡಿದೆ.

Read More »

ಗೋಕಾಕ: ಮಾರ್ಚ್ 28ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ

ಗೋಕಾಕ: ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮಹಾಲಕ್ಷ್ಮಿ ಸಭಾಭವನದಲ್ಲಿ ಗೋಕಾಕ ಮತ್ತು ಅರಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಸೇರಿದಂತೆ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More »