Breaking News

ಅಣ್ಣಾಮಲೈ ವಾರ್ನಿಂಗ್, ದಳಪತಿ ವಿಜಯ್‌ ಜೊತೆ ಏನಿದು ಕಿರಿಕ್?

ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಹವಾ ಬಲು ಜೋರಾಗಿದ್ದು, ಲೋಕಸಭೆಗೂ ಮೊದಲು ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಗೆಲುವಿಗಾಗಿ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ತಿಕ್ಕಾಟ ಬಲು ಜೋರಾಗಿರುವ ಸಮಯದಲ್ಲೇ ನಟ ದಳಪತಿ ವಿಜಯ್ ಕೊಟ್ಟಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.ಹಾಗೇ ವಿಜಯ್ ಅವರು ಕೊಟ್ಟಿದ್ದ ಹೇಳಿಕೆಗೆ ಈಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಅಣ್ಣಾಮಲೈ.2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ …

Read More »

ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ

ಬೆಳಗಾವಿಯಲ್ಲಿ ಪರಿವಾರವಾದ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ ಕೇವಲ ಕಾಂಗ್ರೆಸ್ ಮಾತ್ರ ಅಲ್ಲ, ಪರಿವಾರವಾದವನ್ನು ಅನುಸರಿಸಿಕೊಂಡು ಬರುತ್ತಿರುವ ಸಮಾಜವಾದಿ ಪಕ್ಷ, ಎನ್ ಸಿಪಿ ಮತ್ತು ಶಿವಸೇನೆಯ (ಉದ್ಧವ್ ಬಣ) ಹೆಸರುಗಳನ್ನು ಸಹ ಪೋಸ್ಟರ್ ನಲ್ಲಿ ನೋಡಬಹುದು. ಪ್ರಾಯಶಃ ಪೋಸ್ಟರ್ ಅಭಿಯಾನ ಶುರುಮಾಡಿರುವ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ರಾ ಜಾಧವ್ ಎನ್ನುವವರು ತನ್ನದು ಮೋದಿ ಕುಟುಂಬ ಎಂದು ಬರೆಸಿಕೊಂಡಿದ್ದಾರೆ. ಬೆಳಗಾವಿ: ಲೋಜಸಭಾ ಚುನಾವಣೆಗೆ ಸಂಬಂಧಿಸಿದಂತೆ …

Read More »

ST ವರ್ಗದವರಿಗೆ ಗುಡ್ ನ್ಯೂಸ್ 5 ಲಕ್ಷ ರೂ.ಗಳಷ್ಟು ಸಹಾಯಧನ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ, ಯುವತಿಯರು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ದಿಮೆ ಸ್ಥಾಪಿಸಲು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಯುಟ್ಯೂಬ್ ಚಾನೆಲ್, ಸೋಶಿಯಲ್ …

Read More »

ಯಡಿಯೂರಪ್ಪ ಆಪ್ತ ವಿಶ್ವನಾಥ ಪಾಟೀಲ್ ಇಂದು ಬಿಜೆಪಿ ಸೇರ್ಪಡೆ

ಬೆಳಗಾವಿ : ಬೈಲಹೊಂಗಲ ಮಾಜಿ ಶಾಸಕ ಹಾಗೂ ಯಡಿಯೂರಪ್ಪ ಆಪ್ತ ವಿಶ್ವನಾಥ ಪಾಟೀಲ್ ಇಂದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ವಿಶ್ವನಾಥ ಪಾಟೀಲ ಬಿಜೆಪಿ ಸೇರಿದರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಗದೀಶ್ ಮೆಟಗುಡ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕೌಜಲಗಿ ಗೆಲುವು ಸಾಧಿಸಿದ್ದರು. …

Read More »

ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌ಗಳು

ಬೆಂಗಳೂರು: ವ್ಯಕ್ತಿಯನ್ನು ಬಂಧಿಸಿ ಹಣಕ್ಕೆ (Money) ಬೇಡಿಕೆ ಇಟ್ಟಿದ್ದ ಕೆಆರ್ ಪುರ ಪೋಲಿಸರು (KR Pura Police) ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ. ಕೆಆರ್‌ ಪುರ ಠಾಣಾ ಇನ್ಸ್‌ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್ ರಮ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು. ಶ್ರೀರಾಮ್‌ ಎನ್ನುವವರನ್ನು 420 ಕೇಸ್‌ನಲ್ಲಿ ಬಂಧಿಸಿದ್ದ ರಮ್ಯಾ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ರಾತ್ರೋ ರಾತ್ರಿ 50 ಸಾವಿರ ರೂ. ಪಡೆದು ಶ್ರೀರಾಮ್‌ನನ್ನು …

Read More »

ವಿದೇಶಿ ಕಾರಿಗೆ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಸ್ವಾಗತ: ಬೆಲೆ 10 ಕೋಟಿ ಇರಲಿ ಪೂಜೆ ಕಡ್ಡಾಯ!

ಭಾರತದಲ್ಲಿ ವಾಹನಗಳನ್ನು ಖರೀದಿಸಿದಾಗ, ಮೊದಲು ದೇವಾಲಯಕ್ಕೆ ಹೋಗುತ್ತಾರೆ. ವಾಹನಕ್ಕೆ ಪೂಜೆ ನೆರವೇರಿಸದ ಬಳಿಕವಷ್ಟೆ ಕುಟುಂಬವೆಲ್ಲ ಓಡಾಡುತ್ತಾರೆ. ಇದು ಹಿಂದೂ ಸಾಂಪ್ರದಾಯವಾಗಿದ್ದು, ಬಹುಕೋಟಿ ಐಷಾರಾಮಿ ಬೆಂಟ್ಲೆ ಎಸ್‌ಯುವಿ ಖರೀದಿಸಿದ ಮಾಲೀಕರೊಬ್ಬರು ಪೂಜೆ ನೆರವೇರಿಸಿ ಇದೀಗ ವೈರಲ್ ಆಗಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೆಂಟ್ಲಿ ಬೆಂಟೈಗಾ ಎಸ್‌ಯುವಿಯನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು, ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ಇದರ ಬೆಲೆಯು ರೂ. 5 ಕೋಟಿಯಿಂದ ಪ್ರಾರಂಭವಾಗಿ ರೂ. 7 …

Read More »

ಪಶ್ಚಿಮ ಬಂಗಾಳ ಸಿಎಂ ‘ಮಮತಾ ಬ್ಯಾನರ್ಜಿ’ಗೆ ಗಂಭೀರ ಗಾಯ,

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಎಂಸಿ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಈ ಮಾಹಿತಿಯನ್ನ ನೀಡಿದ್ದು, ನಮ್ಮ ಅಧ್ಯಕ್ಷರು ಗಂಭೀರ ಗಾಯದಿಂದ ಬಳಲುತ್ತಿದ್ದಾರೆ ಎಂದು ಟಿಎಂಸಿ ಬರೆದಿದೆ. ಅವರಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ. ಸಿಎಂ ಮಮತಾ ಅವರ ಚಿತ್ರವೂ ಹೊರಬಂದಿದ್ದು, ಅದರಲ್ಲಿ ಅವರ ಹಣೆಯಿಂದ ರಕ್ತ ಹೊರಬರುತ್ತಿರುವುದನ್ನ ಕಾಣಬಹುದು. ಅವರನ್ನ ಕೋಲ್ಕತ್ತಾದ ಎಸ್‌ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

CAA: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಮಿತ್ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಎಂದಿಗೂ ಹಿಂಪಡೆಯುವುದಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. “ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಇದು ನಮ್ಮ ಸಾರ್ವಭೌಮ ಹಕ್ಕು, ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಬಿಜೆಪಿಯ ಹಿರಿಯ ನಾಯಕ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.   ವಿವಾದಾತ್ಮಕ ಪೌರತ್ವ …

Read More »

‘KSRTC’ ಮುಡಿಗೆ ಪ್ರತಿಷ್ಠಿತ 5 ರಾಷ್ಟ್ರೀಯ, 1 ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು : ಕೆಎಸ್‌ಆರ್ಟಿಸಿಗೆ (KSRTC) ಐದು ರಾಷ್ಟ್ರೀಯ ಮತ್ತು ಒಂದು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಬಸ್ ಬ್ರ್ಯಾಂಡ್ ನಿರ್ವಹಣೆಗಾಗಿ ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿ, ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ, ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ ಸ್ಟಾರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ, ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ʼಗೌವರ್ನೆನ್ಸ್ ನೌʼ 10ನೇ …

Read More »

B.J.P.ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ:ಶಂಕರಗೌಡ ಪಾಟೀಲ

ಬೆಳಗಾವಿ  : ಬೆಳಗಾವಿ : ಭಾರತೀಯ ಜನತಾ ಪಾರ್ಟಿಯವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಉಲಿದಂತೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದ್ದಾರೆ. ಕುಟುಂಬ ರಾಜಕಾರಣ ಕುರಿತಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸುತ್ತಿರುವ ಕುರಿತು ಹೇಳಿಕೆ ನೀಡಿರುವ ಅವರು, ರಾಷ್ಟ್ರ ರಾಜಕಾರಣದಿಂದ ಹಳ್ಳಿ ರಾಜಕಾರಣದವರೆಗೂ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ಯಾವ ನೈತಿಕತೆ …

Read More »