ಬಿಷ್ಕೆಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಷ್ಕೆಕ್‌ನಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ಪಶ್ಚಿಮ ಏಷ್ಯಾದಲ್ಲಿ ವಿನಾಶಕಾರಿ ಯುದ್ಧ ಭುಗಿಲೆದ್ದ ನಂತರ ಉಭಯ ದೇಶಗಳ ನಾಯಕ ಮೊದಲ ಮುಖಾಮುಖಿ ಸಭೆ ಇದಾಗಿದೆ. ಕಿರ್ಗಿಸ್ತಾನ್ ರಾಜಧಾನಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಮುಂಚಿತವಾಗಿ ಈ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪೆಜೆಶ್ಕಿಯಾನ್ ಅಧಿಕಾರ ವಹಿಸಿಕೊಂಡ ಬಳಿಕ, 2024ರ …
Read More »ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನ ಮನಸಿನಲ್ಲಿಟ್ಟುಕೊಳ್ಳಬೇಕು: ಭೋಜೇಗೌಡ
ಬೆಂಗಳೂರು: ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನು ಮನಸಿನಲ್ಲಿಟ್ಟುಕೊಳ್ಳಬೇಕು ಅಂತ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಜೆಡಿಎಸ್ MLC ಭೋಜೇಗೌಡ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪ್ರೀತಿ ತೋರಿಸಬೇಕಾದ್ರೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಪ್ರೀತಿಯನ್ನು ತೋರ್ಪಡಿಸುವ ಅಗತ್ಯವಿಲ್ಲ. ರಾಜಕೀಯ ಹೇಳಿಕೆ ಕೊಡುವಾಗ ರಾಯರೆಡ್ಡಿ ಬಾಲಿಶ ಹೇಳಿಕೆ ಕೊಡಬಾರದು ಎಂದು ಗುಡುಗಿದ್ದಾರೆ. ಯಾವುದೇ ಧರ್ಮವನ್ನು ಓಲೈಸುವ ಅಗತ್ಯವಿಲ್ಲ. 1985ರಲ್ಲೇ ಮಂತ್ರಿಯಾದ ನಿಮಗೆ ಅಗಾಧ ಅನುಭವವಿದೆ. ನಿಮ್ಮ ಹೇಳಿಕೆಯಿಂದ ಹಿಂದೂಗಳಿಗೆ ಸಹಜವಾಗಿ ನೋವು …
Read More »ಪೊಲೀಸ್ ಶ್ವಾನಗಳ ಮಧ್ಯೆ ಸ್ಪರ್ಧೆ – ಬೆಳಗಾವಿ ಎಸ್‌ಪಿ ಮೈದಾನದಲ್ಲಿ ಮಿಂಚಿದ ಶ್ವಾನಪಡೆ
ಬೆಳಗಾವಿ: ಅಪರಾಧ ಪತ್ತೆ ಹಾಗೂ ತನಿಖಾ ಕೌಶಲ್ಯ ಪ್ರದರ್ಶಿಸುವ ಸಲುವಾಗಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೈದಾನದಲ್ಲಿ ಪೊಲೀಸ್ ಶ್ವಾನಗಳ ರೋಚಕ ಸ್ಪರ್ಧೆ ಮತ್ತು ಆಕರ್ಷಕ ಕವಾಯತು ನಡೆಯಿತು. ಉತ್ತರ ವಲಯ ವ್ಯಾಪ್ತಿಯ 6 ಜಿಲ್ಲೆಗಳ ಶ್ವಾನಪಡೆಗಳು ಭಾಗವಹಿಸಿದ್ದ ಈ ತರಬೇತಿ ಸಾಮರ್ಥ್ಯ ಪರೀಕ್ಷೆಯಲ್ಲಿ, ಶ್ವಾನಗಳ ಚುರುಕುತನ ಹಾಗೂ ಕರ್ತವ್ಯನಿಷ್ಠೆ ನೆರೆದಿದ್ದವರ ಗಮನ ಸೆಳೆಯಿತು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಮುಧೋಳ ಹೌಂಡ್ ಸೇರಿದಂತೆ …
Read More »ಸುಪಾರಿ ಕೊಟ್ಟು ಪತಿಯ ಹತ್ಯೆ – ಪತ್ನಿ, ಪ್ರಿಯಕರ ಸೇರಿ ಮೂವರು ಅರೆಸ್ಟ್
ದಾವಣಗೆರೆ: ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಜಗಳೂರಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸವರಾಜ್ (37) ಕೊಲೆಯಾದ ವ್ಯಕ್ತಿ. ಪತ್ನಿ ಸುನೀತಾ ಹಾಗೂ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಹತ್ಯೆ ಆರೋಪಿಗಳಾಗಿದ್ದಾರೆ. ತಿಪ್ಪೇಸ್ವಾಮಿ ಜೊತೆ ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದು ಪತಿ ಮನೆಯಲ್ಲಿ ಗಲಾಟೆ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರು ಸೇರಿ ಹಂತಕರಿಗೆ 2 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ …
Read More »ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಮನಸೋ ಇಚ್ಛೆ ಹಲ್ಲೆ – ಆರೋಪಿ ಅರೆಸ್ಟ್
ವಿಜಯಪುರ: ಜಿಲ್ಲೆಯಲ್ಲಿ ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಥಳಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಚಾಕಲೇಟ್ ಕದಿದ್ದಕ್ಕೆ ಅಂಗಡಿಯ ಮಾಲೀಕ ಅಶೋಕ್ ಪತ್ತಾರ ಎಂಬಾತ ಬಾಲಕನಿಗೆ ಥಳಿಸಿದ್ದ. ಇದರ ಬೆನ್ನಲ್ಲೇ ಬಾಲಕನ ತಂದೆ ರೆಹಮಾನ್ ವಾಲೀಕಾರ್ ಎಂಬುವವರು ದೂರು ನೀಡಿದ್ದರು. ದೂರಿನನ್ವಯ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿ ಅಶೋಕ್‌ನನ್ನು ಬಂಧಿಸಿದ್ದಾರೆ.
Read More »ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡಭಾವನೆ ಬೆಳೆಸುತ್ತದೆ: ಕಿರಣ್ ಜಾಧವ್
ಬೆಳಗಾವಿ: ವಿದ್ಯಾಭಾರತಿ ಕರ್ನಾಟಕ – ಬೆಳಗಾವಿ ಜಿಲ್ಲಾ ವತಿಯಿಂದ ಆಯೋಜಿಸಿದ್ದ ರಾಜ್ಯ/ವಲಯ ಮಟ್ಟದ ಫುಟ್‌ಬಾಲ್ ಹಾಗೂ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಬಿಜೆಪಿ ಮುಖಂಡ ಕಿರಣ್ ಜಾಧವ್ ಚಾಲನೆ ನೀಡಿ, ಯುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಒದಗಿಸುವ ಇಂತಹ ಕ್ರೀಡಾಕೂಟಗಳು ಅತ್ಯಂತ ಮಹತ್ವದ್ದಾಗಿವೆ. ಕ್ರೀಡೆ ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ತಂಡಭಾವನೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ …
Read More »ಧಾರ್ಮಿಕ ಆಚರಣೆಗೆ ಜಾತಿ ಬಣ್ಣ – ರಾಹುಲ್ ವಿರುದ್ಧ SC/ST ಕಾಯ್ದೆ ಅಡಿ ಕೇಸ್ ದಾಖಲು
ಡೆಹ್ರಾಡೂನ್: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ನಡೆದ ಧಾರ್ಮಿಕ ಆಚರಣೆಗೆ ಜಾತಿ ಬಣ್ಣ ಬಳಿದಿದ್ದಾರೆ ಎಂಬ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ಶ್ರೀರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ನ ಸದಸ್ಯ ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಹಲ್ದ್ವಾನಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಭಾರತೀಯ …
Read More »ಟೈರ್ ಬ್ಲಾಸ್ಟ್, ಕಾರಿನ ಮೇಲೆ ಟ್ರಕ್ ಪಲ್ಟಿ – ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಚಲಿಸುತ್ತಿದ್ದಾಗ ಟೈರ್ ದಿಢೀರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸರ್ವಿಸ್ ರಸ್ತೆಗೆ ನುಗ್ಗಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಇಳಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಗ್ರಹ ಡಾಬಾ ಬಳಿ ನಡೆದಿದೆ. ಆಗಸ್ಟ್ 29ರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಕೊಪ್ಪಳದ ಕುಷ್ಟಗಿ ಮಾರ್ಗವಾಗಿ ಹೊರಟಿದ್ದ ಗುಜರಾತ್ ಮೂಲದ ಲಾರಿಯ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ …
Read More »ಈಗ ಚುನಾವಣೆ ಎದುರಿಸಲು ಟನ್‌ಗಟ್ಟಲೆ ಹಣ ಬೇಕು: ಸಿದ್ದರಾಮಯ್ಯ
ತುಮಕೂರು: ಇನ್ಮುಂದೆ ನಾನು ಲೋಕಸಭೆಗೂ ನಿಲ್ಲಲ್ಲ, ವಿಧಾನಸಭೆಗೂ ನಿಲ್ಲಲ್ಲ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ದಿವಂಗತ ಮಾಜಿ ಸಚಿವ ವೀರಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಉಗ್ರಪ್ಪನವರು ಕಾಲ್ ಮಾಡಿ ಹೇಳಿದ್ರು. ತುಮಕೂರಿನಲ್ಲಿ ಒಂದು ನುಡಿನಮನ ಕಾರ್ಯಕ್ರಮ ಮಾಡ್ತೀವಿ. ನೀವು ಬರಲೇಬೇಕು ಅಂದ್ರು. ನಾನು ವೀರಣ್ಣನವರು ಕಾಲವಾದ ದಿನ ಕೆ.ಆರ್. ಪೇಟೆಗೆ ಹೋಗಿದ್ದೆ. ಹಾಗಾಗಿ, …
Read More »ಕ್ರಿಕೆಟ್ ಅಕಾಡೆಮಿಯಲ್ಲಿ ಪಿಚ್ ರೋಲರ್ ಹರಿದು 8 ವರ್ಷದ ಬಾಲಕ ದುರ್ಮರಣ
ಚಂಡೀಗಢ: ಕ್ರಿಕೆಟ್ ಅಕಾಡೆಮಿಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಮಿನಿ ಪಿಚ್ ರೋಲರ್ ಹರಿದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರದ ನಳಂದಾ ನಿವಾಸಿಯಾಗಿದ್ದ ಆಕಾಶ್, ತನ್ನ ಸಹೋದರ ನೀಲ್ ಹಾಗೂ ಇತರ ಮಕ್ಕಳೊಂದಿಗೆ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಡೆಮಿ ಆವರಣದಲ್ಲಿ …
Read More »
Laxmi News 24×7