ಶಿರಸಿ (ಉತ್ತರ ಕನ್ನಡ) : ಒಂದೆಡೆ ತೀವ್ರ ಬರಗಾಲ, ಇನ್ನೊಂದೆಡೆ ರೈತರ ಬೆಳೆಗಳಿಗೆ ರೋಗ ಬಾಧೆ, ಹೀಗೆ ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿರುವ ಸಂದರ್ಭದಲ್ಲಿಯೇ ಈ ಹಿಂದೆ ರಾಜ್ಯ ಸರ್ಕಾರದಿಂದ ಮನ್ನಾ ಮಾಡಲಾಗಿದ್ದ ಬೆಳೆ ಸಾಲದ ಸೌಲಭ್ಯದಿಂದ ಉತ್ತರ ಕನ್ನಡ ಜಿಲ್ಲೆಯ 700ಕ್ಕೂ ಅಧಿಕ ರೈತರು ವಂಚಿತರಾಗಿದ್ದಾರೆ. ಮನ್ನಾ ಮಾಡಿ 6 ವರ್ಷಗಳೇ ಕಳೆದರೂ ಅನ್ನ ಕೊಡುವ ರೈತ ಸಹಕಾರಿ ಸಂಘಗಳಿಗೆ ಅಲೆಯುವ ದುಸ್ಥಿತಿ ಮುಂದುವರೆದಿದೆ. ಉತ್ತರ ಕನ್ನಡ ಜಿಲ್ಲೆಯ ರೈತರು …
Read More »ಮಹಿಳಾ ಮೀಸಲಾತಿ ಯುಪಿಎ ಸರ್ಕಾರದ ಕೂಸು, ಬಿಜೆಪಿ ಮಾಡಿರುವುದರಲ್ಲಿ ವಿಶೇಷ ಏನೂ ಇಲ್ಲ: ಸಚಿವ ಕೆ ಎಚ್ ಮುನಿಯಪ್ಪ
ಕೋಲಾರ: ಮಹಿಳಾ ಮೀಸಲಾತಿ ವಿಚಾರವಾಗಿ ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೇ ಅಂಗೀಕಾರಕ್ಕೆ ಮುಂದಾಗಿದ್ದೆವು. ಆದರೆ ಕೆಲವರ ವಿರೋಧ ಇದ್ದ ಕಾರಣ ಅನುಮೋದನೆ ಸಿಗಲಿಲ್ಲ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ವಿಚಾರವಾಗಿ ಕೋಲಾರದ ಕುರುಡುಮಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಚಾರ ಯುಪಿಎ ಸರ್ಕಾರ ಇದ್ದಾಗಲೇ ಚಿಂತನೆ ಮಾಡಿದ್ದೆವು. ಇದು ನಮ್ಮ ಕೂಸು. ಮಹಿಳಾ ಮೀಸಲಾತಿ ಕುರಿತಾಗಿ …
Read More »ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಗಗನ್ ಕಡೂರು ಕರೆತಂದು ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು
ಚಿಕ್ಕಮಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಗೂ ಸ್ಥಳ ಮಹಜರಿಗಾಗಿ ಚಿಕ್ಕಮಗಳೂರಿಗೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾದ ಗಗನ್ ಕಡೂರು ಹಾಗೂ ವಂಚನೆಗೊಳಗಾದ ಉದ್ಯಮಿ ಗೋವಿಂದ ಪೂಜಾರಿ ಸಮ್ಮುಖದಲ್ಲಿ ಚಿಕ್ಕಮಗಳೂರು ಹಾಗೂ ಕಡೂರಿನಲ್ಲಿ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಚೈತ್ರಾ ಕುಂದಾಪುರ ಪ್ರಕರಣ ಬಗೆದಷ್ಟು ಅಂಶಗಳು ಬಯಲಾಗುತ್ತಿವೆ. ಈ ಘಟನೆ ನಡೆಯುವುದಕ್ಕೂ ಮೊದಲು ಆರೋಪಿಗಳು ಭೇಟಿ ನೀಡಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ಆಗಮಿಸಿ ಮಹತ್ವದ …
Read More »ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಭೂಮಿಯ ಪರಿಷ್ಕೃತ ಮಾರ್ಗಸೂಚಿ ದರ ಜಾರಿ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು : ಅಕ್ಟೋಬರ್ 1 ರಿಂದ ರಾಜ್ಯಾದ್ಯಂತ ಭೂಮಿಯ ಪರಿಷ್ಕೃತ ನೂತನ “ಮಾರ್ಗಸೂಚಿ ದರ” (ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನೋಂದಣಿ ಇಲಾಖೆ ಕಾನೂನಿನ ಪ್ರಕಾರ, ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ, ಕಳೆದ ಐದು ವರ್ಷದಿಂದ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ಯಾಯವಾಗಿದ್ದರೆ, ಇದು ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ. …
Read More »ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ. ಸದ್ಯ ನಾನು ಬಿಜೆಪಿ ಪಕ್ಷ ಬಿಡುವ ವಿಚಾರದಲ್ಲಿ ಇಲ್ಲ: ಪ್ರದೀಪ್ ಶೆಟ್ಟರ್
ಹುಬ್ಬಳ್ಳಿ: ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ. ಸದ್ಯ ನಾನು ಬಿಜೆಪಿ ಪಕ್ಷ ಬಿಡುವ ವಿಚಾರದಲ್ಲಿ ಇಲ್ಲ. ಆದರೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದೆ. ವಿಜೃಂಭಣೆಯಿಂದ ಗಣೇಶ ಮೆರವಣಿಗೆ ಮಾಡಿದ್ದೇವೆ. ಈದ್ಗಾ ಗಣೇಶೋತ್ಸವ ಹೋರಾಟದಲ್ಲಿ ಭಾಗಿಯಾಗದಿರುವುದಕ್ಕೆ …
Read More »ರಾಯಬಾಗ:ಸರ್ವಧರ್ಮ ಸಮಾನ ಸಿಪಿಐ ಮುಲ್ಲಾ, ಠಾಣೆಗೆ ಆಗಮಿಸಿದ ಗಣೇಶ
ರಾಯಬಾಗ:ಸರ್ವಧರ್ಮ ಸಮನ್ವಯ ಸಿಪಿಐ ಮುಲ್ಲಾ ಠಾಣೆಗೆ ಆಗಮಿಸಿದ ಗಣೇಶ.ಹೌದು ಬೆಳಗಾವಿ ಜಿಲ್ಲೆಯ ಪಟ್ಟಣದಲ್ಲಿಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪೋಲಿಸ್ ಗಣೇಶ ಆಗಮನ, ಗಣೇಶ ಚತುರ್ಥೀ ಹಬ್ಬದ ನಿಮಿತ್ಯ ಎಲ್ಲೆಡೆ ಸಡಗರ ಸಂಭ್ರಮದಿಂದ ಗಣೇಶನನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಇಂದು ಪಟ್ಟಣದ ರಾಯಬಾಗದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಠಾಣೆಗೆ ಗಣಪಣ ಆಗಮನ, ಇಂದು ರಾಯಬಾಗ ಪೊಲಿಸರು ಅದ್ದೂರಿಯಾಗಿ ಗಣೇಶನನ್ನ ಪೋಲಿಸ್ ಜೀಪ ಮೇಲಿಟ್ಟು ಅದ್ದೂರಿಯಾಗಿ ಪಟಾಕಿ ಸಿಡಿಸಿ ವಾದ್ಯಮೇಳದೊಂದಿಗೆ …
Read More »ತಿಗಡೊಳ್ಳಿಯ ಯುವಕನಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಭೀಮಾಶಂಕರ ಗುಳೇದ ಹೇಳಿದ್ದೇನು?
ಬೆಳಗಾವಿ: ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಅದರಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಿಗಡೊಳ್ಳಿಯ ವಿಜಯ ಆರೇರ್(32) ಕೊಲೆಯಾದ ಯುವಕ. …
Read More »ಸರ್ಕಾರಿ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿ ನಿಷೇಧ: ಸುತ್ತೋಲೆ ಹೊರಡಿಸಿದ ಸಿಎಸ್
ಬೆಂಗಳೂರು: ಸರ್ಕಾರಿ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿ ನಿಷೇಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಅವರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಆಯೋಜಿಸುವ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿನ (Single use packaged water bottles) ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಷೇಧಿಸಿ ಕೆಲ ವರ್ಷಗಳ ಹಿಂದೆಯೇ ಆದೇಶಿಸಲಾಗಿತ್ತು. …
Read More »ಶಕ್ತಿ ಯೋಜನೆ ಎಫೆಕ್ಟ್?: ಸಾರಿಗೆ ಇಲಾಖೆಯ ಪ್ರಮುಖ ಯೋಜನೆಗಳಿಗೆ ಬಿಡುಗಡೆಯಾಗದ ಬಿಡಿಗಾಸು
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದು. ಸಾಮಾನ್ಯ ಸರ್ಕಾರಿ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅನುಷ್ಠಾನದ ಉತ್ಸಾಹದಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಇತರ ಪ್ರಮುಖ ಯೋಜನೆಗಳನ್ನು ನಿರ್ಲಕ್ಷಿಸಿದೆಯೇ? ಎಂಬ ಅನುಮಾನ ಮೂಡಿದೆ. ‘ಶಕ್ತಿ ಯೋಜನೆ’ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅನುಷ್ಠಾನ ಮಾಡಿದ ಮೊದಲ ಗ್ಯಾರಂಟಿ ಯೋಜನೆ. 2023-24ರ ಸಾಲಿನಲ್ಲಿ ಮಹತ್ವಾಕಾಂಕ್ಷೆಯ ಈ ಗ್ಯಾರಂಟಿ ಯೋಜನೆಗೆ …
Read More »ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಪೋಷಣ್ ಅಭಿಯಾನದ ಅಡಿ ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಈ ಹುದ್ದೆ ಭರ್ತಿ ನಡೆಸಲಾಗುವುದು. ಒಟ್ಟು ಐದು ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆಹುದ್ದೆ ವಿವರ: ಪೋಷಣ್ ಅಭಿಯಾನ ಯೋಜನೆ ಅಡಿ …
Read More »