ಬೆಂಗಳೂರು: ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನು ಮನಸಿನಲ್ಲಿಟ್ಟುಕೊಳ್ಳಬೇಕು ಅಂತ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಜೆಡಿಎಸ್ MLC ಭೋಜೇಗೌಡ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪ್ರೀತಿ ತೋರಿಸಬೇಕಾದ್ರೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಪ್ರೀತಿಯನ್ನು ತೋರ್ಪಡಿಸುವ ಅಗತ್ಯವಿಲ್ಲ. ರಾಜಕೀಯ ಹೇಳಿಕೆ ಕೊಡುವಾಗ ರಾಯರೆಡ್ಡಿ ಬಾಲಿಶ ಹೇಳಿಕೆ ಕೊಡಬಾರದು ಎಂದು ಗುಡುಗಿದ್ದಾರೆ. ಯಾವುದೇ ಧರ್ಮವನ್ನು ಓಲೈಸುವ ಅಗತ್ಯವಿಲ್ಲ. 1985ರಲ್ಲೇ ಮಂತ್ರಿಯಾದ ನಿಮಗೆ ಅಗಾಧ ಅನುಭವವಿದೆ. ನಿಮ್ಮ ಹೇಳಿಕೆಯಿಂದ ಹಿಂದೂಗಳಿಗೆ ಸಹಜವಾಗಿ ನೋವು …
Read More »Nepal Floods – Two US citizens of Tumakuru origin missing
ತುಮಕೂರು: ನೇಪಾಳದ ಪ್ರವಾಹದಲ್ಲಿ ಯು.ಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ. ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾಗಿದ್ದಾರೆ. ಯು.ಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರು ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಣಾಮ ಅವರ ತುಮಕೂರಿನ ಮನೆಯ ಸದಸ್ಯರಲ್ಲಿ …
Read More »ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ
ಬ್ಯೂನಸ್ ಐರಿಸ್: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ , ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾತಂಡವು ಸ್ಪೇನ್ ವಿರುದ್ಧ ಸೋತ ಕೆಲವು ತಿಂಗಳುಗಳ ಬಳಿಕ, ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ಗುಡ್‌ಬೈ ಹೇಳುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೈಬರಹದ ಭಾವನಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ 39 ವರ್ಷದ ಮೆಸ್ಸಿ ತಮ್ಮ ಎರಡು ದಶಕಗಳ …
Read More »ಖೋಟಾ ನೋಟ್ ತಯಾರಿಕಾ ಜಾಲ ಪತ್ತೆ- ಏಳು ಮಂದಿ ಅರೆಸ್ಟ್
ರಾಮನಗರ: ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದ ಖೋಟಾ ನೋಟ್ ತಯಾರಿಕಾ ಜಾಲವನ್ನು ರಾಮನಗರ ಪೊಲೀಸರು ಭೇದಿಸಿದ್ದಾರೆ. ನಿರ್ಮಾಣ ಹಂತದ ಮನೆಯೊಂದರಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಖತರ್ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಕೆಮಿಕಲ್ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ರಾಮನಗರ ಟೌನ್ ವ್ಯಾಪ್ತಿಯ ಶಾಂತಿಲಾಲ್ ಲೇಔಟ್ ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಐಜೂರು ಇನ್ಸ್ಪೆಕ್ಟರ್ ರಮೇಶ್ …
Read More »ಕೆಪಿಎಸ್‌ಸಿ ಹಗರಣ | 40 ಲಕ್ಷಕ್ಕೆ ಹುದ್ದೆ ಡೀಲ್ – ಸಿಐಡಿ ಮುಂದೆ ಅಭ್ಯರ್ಥಿ ತಪ್ಪೊಪ್ಪಿಗೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ತನಿಖೆ ತೀವ್ರಗೊಂಡಿದ್ದು, ಸಿಐಡಿ ಅಧಿಕಾರಿಗಳ ಮುಂದೆ ಅಭ್ಯರ್ಥಿಯೊಬ್ಬ ತನ್ನ ಕೃತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾನೆ. 30 ವರ್ಷದ ಅಭ್ಯರ್ಥಿ ಮಹಮದ್ ಸುಹೇಲ್ ಎಂಬಾತ ಸಿಐಡಿ ವಿಚಾರಣೆ ವೇಳೆ ಮಹತ್ವದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ನೇಮಕಾತಿ ಹಗರಣದ ಕರಾಳ ಮುಖ ಬಯಲಾಗಿದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಹುದ್ದೆ ಪಡೆಯಲು ಬರೋಬ್ಬರಿ 40 ಲಕ್ಷ ರೂ.ಗೆ ಡೀಲ್ ಕುದುರಿಸಲಾಗಿತ್ತು.ಡೀಲ್ ಪ್ರಕಾರ ಅಭ್ಯರ್ಥಿ ಸುಹೇಲ್ ಮುಂಗಡ …
Read More »ಕಲ್ಮ ಹೇಳಿ ಹಜ್‌ಗೆ ಹೋಗಿ ಅಲ್ಲೇ ಇರಿ: ರಾಯರೆಡ್ಡಿ ವಿರುದ್ಧ ಸಿ.ಟಿ.ರವಿ ಕೆಂಡ
ಚಿಕ್ಕಮಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಅನ್ನೋದಾದರೆ ಕಲ್ಮ ಹೇಳಿ ಹಜ್‌ಗೆ ಹೋಗಿ, ವಾಪಸ್ ಬರಬರಬೇಡಿ. ಅಲ್ಲೇ ಇರಿ ಎಂದು ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಯರೆಡ್ಡಿ ಅವರ ಹೇಳಿಕೆ ದಯೆಯೇ ಧರ್ಮದ ಮೂಲವೆಂದು ಹೇಳಿದ ಬಸವಣ್ಣನವರ ತತ್ವಗಳಿಗೆ ಮಾಡಿದ ಅಪಮಾನ. ಇಂತಹ ಮನಸ್ಥಿತಿಯವರು ಹಿಂದೂ ಅಥವಾ ಬಸವ ತತ್ವಗಳ ಯಾವುದೇ ವಿಚಾರದಲ್ಲಿ ಇರಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ. ಇಸ್ಲಾಂ ಧರ್ಮ …
Read More »ಶಿಕ್ಷಕರ ದಿನದ ಅಂಗವಾಗಿ ರಕ್ತದಾನ ಅಭಿಯಾನ
ಬೆಳಗಾವಿ: ಈ ಬಾರಿ ಶಿಕ್ಷಕರ ದಿನವನ್ನು ವಿಶಿಷ್ಟ ವಾಗಿ ಆಚರಿಸಲು ಮುಂದಾಗಿರುವ ಜಿಪಂ ಶಿಕ್ಷಕರಿಗೆ ಹೂವು, ಶುಭಾಶಯ ಬದಲು, ಜೀವ ಉಳಿಸುವ ರಕ್ತದಾನ ಮಾಡುವ ಮೂಲಕ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವನ್ನು ಸೆ.3ರಂದು 14 ತಾಲೂಕುಗಳಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದ ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನ …
Read More »ಕಲಾವಿದನೂ ಎಲ್ಲರಂತೆ ಸಾಮಾನ್ಯ ಮನುಷ್ಯ
ತಮಗೆ ಕರಗತವಾಗಿರುವ ಕಲೆ ಪ್ರದರ್ಶಿಸುವಾಗ ಮಾತ್ರ ಕಲಾವಿದರು ಇತರರಿಗಿಂತ ವಿಶೇಷರಾಗುತ್ತಾರೆ. ಅದರ ಹೊರತಾಗಿ ವೇದಿಕೆಯಿಂದ ಕೆಳಗಿಳಿದ ತಕ್ಷಣ ಅವರೂ ಎಲ್ಲರಂತೆ ಓರ್ವ ಸಾಮಾನ್ಯ ಮನುಷ್ಯ. ಇದನ್ನು ಅರಿತು ಮುನ್ನಡೆದಾಗ ಮಾತ್ರ ಜೀವನಕ್ಕೊಂದು ಪರಿಪೂರ್ಣತೆ ಬರುತ್ತದೆ ಎಂದು ಹಿರಿಯ ರಂಗಕರ್ಮಿ ಬಿ.ಜಯಶ್ರೀ ಹೇಳಿದರು. ನಾನು ನಮ್ಮವರೊಂದಿಗೆ ಹಾಗೂ ಓದಿ ಫೌಂಡೇಶನ್‌ಗಳ ಆಶ್ರಯದಲ್ಲಿ ಭರತೇಶ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ರಂಗಗೀತೆಗಳ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇತರ ಹಾಡುಗಾರಿಕೆಯಂತೆ ರಂಗಗೀತೆಗಳಿಗೆ …
Read More »ರೈತರಿಗೆ ಅಗತ್ಯ ನೆರವು, ಸೌಲಭ್ಯಗಳು ದೊರೆಯುವಂತೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು
ಕೃಷಿ ವಿಮೆ ಯೋಜನೆಯಡಿ ರೈತರಿಗೆ ಅಗತ್ಯ ನೆರವು ಹಾಗೂ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಕೃಷಿ ವಿಮೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಹಕರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ರೈತರು ಬೆಳೆಹಾನಿ ಸೇರಿದಂತೆ ವಿವಿಧ …
Read More »ಬೆಳಗಾವಿ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡದಂತೆ ಕರವೇ ಪ್ರತಿಭಟನೆ
ಬೆಳಗಾವಿ: ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರ ವರ್ಗಾವಣೆ ತಡೆಹಿಡಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಸೋಮವಾರ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಬೆಳಗಾವಿ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಬಾರದು ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. …
Read More »
Laxmi News 24×7