Home / Uncategorized / ದುಬೈ ಟೂರ್ನಿ ಬಳಿಕ ಟೆನಿಸ್​ ಅಂಗಳಕ್ಕೆ ಸಾನಿಯಾ ಮಿರ್ಜಾ ವಿದಾಯ

ದುಬೈ ಟೂರ್ನಿ ಬಳಿಕ ಟೆನಿಸ್​ ಅಂಗಳಕ್ಕೆ ಸಾನಿಯಾ ಮಿರ್ಜಾ ವಿದಾಯ

Spread the love

ನವದೆಹಲಿ: ಭಾರತದ ಟೆನಿಸ್​​ ತಾರೆ ಸಾನಿಯಾ ಮಿರ್ಜಾ ಮೈದಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಫೆಬ್ರವರಿ 19 ರಿಂದ ಆರಂಭವಾಗುವ ದುಬೈ ಟೆನಿಸ್​ ಚಾಂಪಿಯನ್​ಶಿಪ್​ ಬಳಿಕ ಅವರು ಟೆನಿಸ್​ಗೆ ಗುಡ್​ಬೈ ಹೇಳಲಿದ್ದಾರೆ. ಫಿಟ್​ನೆಸ್​ ಸಮಸ್ಯೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಅವರು ಟೆನಿಸ್​ನಿಂದ ದೂರವುಳಿಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಪರ್ಲ್​ ಸಿಟಿಯ 36 ವರ್ಷದ ಮೂಗುತಿ ಸುಂದರಿ ಗಾಯದ ಸಮಸ್ಯೆಯಿಂದಾಗಿ ಕಳೆದ ಯುಎಸ್​ ಒಪನ್​ನಲ್ಲಿ ಭಾಗವಹಿಸಿರಲಿಲ್ಲ. ಅದಾದ ಬಳಿಕ ಅವರು ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು. ಆದರೆ, ಕಳೆದ ವರ್ಷ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದ ಬಳಿಕ ನಿರ್ಧಾರವನ್ನು ಕೆಲಕಾಲ ತಡೆಹಿಡಿದಿದ್ದರು. ಇದೀಗ ದುಬೈ ಟೆನಿಸ್​ ಟೂರ್ನಿಗೆ ಸಿದ್ಧವಾಗುತ್ತಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಸಾನಿಯಾ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಆಡಲಿದ್ದು, ಆ ಬಳಿಕ ಯುಎಇಯಲ್ಲಿ ನಡೆಯುವ ಚಾಂಪಿಯನ್ ಶಿಪ್ ಆಡಿ ಟೆನಿಸ್​ ಅಂಗಳಕ್ಕೆ ವಿದಾಯ ಹೇಳಲಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, ‘ಕಳೆದ ವರ್ಷ ಡಬ್ಲ್ಯುಟಿಎ ಫೈನಲ್‌ನ ನಂತರವೇ ನಿವೃತ್ತಿ ಹೊಂದಲು ಬಯಸಿದ್ದೆ. ಆದರೆ, ಮೊಣಕೈ ಗಾಯದ ಕಾರಣ ಅಮೆರಿಕನ್​ ಓಪನ್ ಟೆನಿಸ್​​ ಮತ್ತು ಉಳಿದ ಕೆಲ ಪಂದ್ಯಾವಳಿಗಳಿಂದ ಹಿಂದೆ ಸರಿಯಬೇಕಾಯಿತು. ಈ ಎಲ್ಲ ಕಾರಣಗಳಿಂದ ಟೆನಿಸ್​ ಅಂಗಳದಲ್ಲಿಯೇ ವಿದಾಯ ಹೇಳಲು ಸಾಧ್ಯವಾಗಲಿಲ್ಲ. ಮುಂದಿನ ದುಬೈ ಟೆನಿಸ್ ಚಾಂಪಿಯನ್‌ಶಿಪ್ ನಿವೃತ್ತಿಯಾಗುವೆ ಎಂದು ಮೂಗುತಿ ಸುಂದರಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವೈವಾಹಿಕ ಜೀವನದಲ್ಲಿ ಬಿರುಕು?: ಸಾನಿಯಾ ಮಿರ್ಜಾ ಅವರು 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಿಜಾ- ಮಲಿಕ್​ ದಂಪತಿಗೆ ಒಬ್ಬ ಪುತ್ರ ಸಹ ಇದ್ದಾನೆ. ಕಳೆದ ವರ್ಷ ಸ್ಟಾರ್​ ದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ವದಂತಿ ಹಬ್ಬಿತ್ತು. ಪಾಕಿಸ್ತಾನದ ಮಾಧ್ಯಮಗಳಲ್ಲೂ ಇದು ದೊಡ್ಡ ಸುದ್ದಿಯಾಗಿತ್ತು. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂಬ ಚರ್ಚೆಯೂ ಇದೆ. ಆದರೆ ಅದಿನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ.


Spread the love

About Laxminews 24x7

Check Also

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ

Spread the love ಮಾಲ್ಕನ್‌ಗಿರಿ: ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 5 ಲಕ್ಷ ಜನರಿಗೆ ಅಯೋಧ್ಯೆಯ ರಾಮ ಮಂದಿರದ ದರ್ಶನ ಒದಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ