Breaking News
Home / Uncategorized / ಭಾರತ್ ಜೋಡೋ ಯಾತ್ರೆಯಲ್ಲಿ ಇಬ್ಬರು ರಾಹುಲ್ ಗಾಂಧಿ.. ಡುಪ್ಲಿಕೆಟ್ ರಾಹುಲ್​ ಜೊತೆ ಸೆಲ್ಫಿಗೆ ಮುಗಿ ಬಿದ್ದ ಜನ!

ಭಾರತ್ ಜೋಡೋ ಯಾತ್ರೆಯಲ್ಲಿ ಇಬ್ಬರು ರಾಹುಲ್ ಗಾಂಧಿ.. ಡುಪ್ಲಿಕೆಟ್ ರಾಹುಲ್​ ಜೊತೆ ಸೆಲ್ಫಿಗೆ ಮುಗಿ ಬಿದ್ದ ಜನ!

Spread the love

ಬಾರತ್ ಜೋಡೋ ಯಾತ್ರೆಯಲ್ಲಿ ಇಬ್ಬರು ರಾಹುಲ್ ಗಾಂಧಿ ನೋಡಿ ಅಚ್ಚರಿಗೊಂಡ ಜನರು.. ಥೇಟ್​ ರಾಹುಲ್ ಗಾಂಧಿಯಂತೆ ಕಾಣುವ ಫೈಸಲ್ ಜೊತೆ ಈಟಿವಿ ಭಾರತ ಮಾತುಕತೆ..

ಮೀರತ್, ಉತ್ತರಪ್ರದೇಶ: ಯುಪಿಯಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಭರದಿಂದ ಸಾಗಿದೆ.

ರಾಹುಲ್ ಗಾಂಧಿಯೊಂದಿಗೆ ಸಾವಿರಾರೂ ಜನರ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಈ ಪಯಣದಲ್ಲಿ ರಾಹುಲ್​ ಗಾಂಧಿ ಹೊಲಿಕೆಯ ವ್ಯಕ್ತಿಯಿದ್ದು, ಅವರು ಹೋದಲ್ಲೆಲ್ಲಾ ಜನ ಹಿಂಬಾಲಿಸುತ್ತಿದ್ದರು. ಕೆಲವರು ಸೆಲ್ಫಿ ತೆಗೆಸಿಕೊಂಡರು, ಕೆಲವರು ಕೈಕುಲುಕಿದರು ಮತ್ತು ಕೆಲವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಅವರಂತೆಯೇ ಕಾಣುವ ಈ ವ್ಯಕ್ತಿಯನ್ನು ನೋಡಿದ ಜನರು ಅವರನ್ನು ರಾಹುಲ್ ಗಾಂಧಿ ಎಂದು ಭಾವಿಸುತ್ತಿದ್ದರು. ಅಷ್ಟೇ ಅಲ್ಲ ರಾಹುಲ್ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಕ್ಷ ಜಿಂದಾಬಾದ್ ಎಂಬ ಘೋಷಣೆಗಳನ್ನು ಸಹ ಕೂಗುತ್ತಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಮೀರತ್ ಜಿಲ್ಲೆಯ ನಿವಾಸಿಯಾಗಿರುವ ರಾಹುಲ್ ಗಾಂಧಿಯಂತಹ ಜೂನಿಯರ್ ರಾಹುಲ್ ಗಾಂಧಿ ಬಗ್ಗೆ ತಿಳಿಯೋಣ ಬನ್ನಿ..

ಥೇಟ್​ ರಾಹುಲ್ ಗಾಂಧಿಯಂತೆ ಕಾಣುವ ಫೈಸಲ್
ಈಟಿವಿ ಭಾರತನ ಮೀರತ್​ ವರದಿಗಾರ ಪರೀಕ್ಷಿತ್‌ಗಢ್‌ನಲ್ಲಿರುವ ಸೌಂದತ್ ಗ್ರಾಮದ ನಿವಾಸಿ ಫೈಸಲ್ ಚೌಧರಿ ಅವರ ಮನೆಗೆ ತಲುಪಿ ಅವರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಈ ಯಾತ್ರೆಗೆ ಎಲ್ಲೆಡೆ ಭಾರೀ ಜನಬೆಂಬಲ ಸಿಕ್ಕಿರುವುದು ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಫೈಸಲ್ ಚೌಧರಿ. ಜನವರಿ 3ರಂದು ಯಾತ್ರೆಯು ದೆಹಲಿಯಿಂದ

ಲೋನಿ ಗಡಿಯ ಮೂಲಕ ಯುಪಿ ಪ್ರವೇಶಿಸಿತ್ತು. ಆಗ ಜನರು ಯಾತ್ರೆಯಲ್ಲಿ ಇಬ್ಬರು ರಾಹುಲ್ ಗಾಂಧಿಗಳನ್ನು ನೋಡಿ ದಂಗಾಗಿದ್ದಂತೂ ನಿಜ.

ಥೇಟ್​ ರಾಹುಲ್ ಗಾಂಧಿಯಂತೆ ಕಾಣುವ ಫೈಸಲ್
ಈಟಿವಿ ಭಾರತ್ ಜೊತೆಗಿನ ಸಂವಾದದ ಸಂದರ್ಭದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡ ಫೈಸಲ್, ನಾನು ರಾಹುಲ್ ಗಾಂಧಿಯವರ ಗಮನಕ್ಕೆ ಬರಬೇಕೆಂದು ಜನರು ಬಯಸಿದ್ದರು. ಭಾರತ್ ಜೋಡೋ ಯಾತ್ರೆ ದೆಹಲಿಯ ಬಾದರ್‌ಪುರ ಗಡಿಯ ಮೂಲಕ ಹಾದುಹೋಗುತ್ತಿತ್ತು. ಈ ಯಾತ್ರೆಯಲ್ಲಿ ನಾನು ಮೊದಲು ಸೇರಿಕೊಂಡೆ. ಅದರ ನಂತರ ಯಾತ್ರೆಯು ಲೋನಿ ಗಡಿಯಿಂದ ಯುಪಿಗೆ ಪ್ರವೇಶಿಸಿದಾಗ ನಮ್ಮ ನಾಯಕರ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದೆ. ನಾನು ಫೈಸಲ್ ಅವರು

ರಸ್ತೆಯಲ್ಲಿ ನಡೆಯುತ್ತಿದ್ದಾಗ ಜನರೆಲ್ಲರೂ ರಾಹುಲ್ ಗಾಂಧಿ ಎಂದು ಭಾವಿಸಿದ್ದರು. ಅಷ್ಟೇ ಅಲ್ಲ ನಾನು ರಾಹುಲ್ ಗಾಂಧಿ ಧರಿಸುವ ಟೀ ಶರ್ಟ್ ಅನ್ನು ಸಹ ಧರಿಸಿದ್ದೆ ಎಂದರು.

ರಾಹುಲ್ ಗಾಂಧಿಯಂತೆ ಕಾಣುವ ಫೈಸಲ್
ಜನರೆಲ್ಲರೂ ಮಹಾಪುರುಷರ ಮೂರ್ತಿಗಳ ಬಳಿ ಕರೆದೊಯ್ಯುತ್ತಿದ್ದರು..: ದೇವಸ್ಥಾನ ಅಥವಾ ಮಹಾಪುರುಷರ ಪ್ರತಿಮೆ ಬಂದಾಗ ಜನರು ಇಲ್ಲಿ ರಾಹುಲ್ ಜೀ ಹಾರ ಹಾಕಿ ಅಥವಾ ಹೂವುಗಳನ್ನು ಅರ್ಪಿಸಿ ಎಂದು ಹೇಳುತ್ತಿದ್ದರು. ನಾನೂ ಸಹ ಜನರನ್ನು ಹೇಳಿದ್ದೇ ಮಾಡುತ್ತಿದ್ದೆ. ಇದನ್ನು ಮಾಡಿದ ನಂತರ ನಿಜವಾದ ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಜನರಿಗೆ ಹೇಳುತ್ತಿದ್ದೆ ಎಂದು ಫೈಸಲ್ ಹೇಳಿದ್ದಾರೆ.


Spread the love

About Laxminews 24x7

Check Also

ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ

Spread the loveಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ ಭಾರತದಲ್ಲಿ ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ