Breaking News
Home / Uncategorized / ಪಿಎಸ್‌ಎಸ್​ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ; ನಿರಾಣಿ ಒಡೆತನದಲ್ಲಿ ವಿದ್ಯುಕ್ತ ಆರಂಭ

ಪಿಎಸ್‌ಎಸ್​ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ; ನಿರಾಣಿ ಒಡೆತನದಲ್ಲಿ ವಿದ್ಯುಕ್ತ ಆರಂಭ

Spread the love

ಮಂಡ್ಯ: ಕಳೆದ ನಾಲ್ಕು ವರ್ಷಗಳ ಹಿಂದೆ ನಷ್ಟದಿಂದ ಸ್ಥಗಿತ ಗೊಂಡಿದ್ದ ಆಗಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ದೊರೆತಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ಒಡೆತನದಲ್ಲಿ ಇಂದು ಕಾರ್ಖಾನೆ ವಿದ್ಯುಕ್ತವಾಗಿ ಆರಂಭಗೊಂಡಿದೆ. ರಾಜ್ಯದ ಹಲವು ಮಠಾಧೀಶರು ಕಾರ್ಖಾನೆಯ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಲನೆ ನೀಡಿ ಶುಭಕೋರಿದ್ದಾರೆ.

ಪಾಂಡವಪುರ ತಾಲೂಕಿನಲ್ಲಿರುವ ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾ ನೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪಿತವಾಗಿದ್ದ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆ. ಆದರೆ, ಕಳೆದ ನಾಲ್ಕು ವರ್ಷದ ಹಿಂದೆ ಸಾಲದ ಸುಳಿಗೆ ಸಿಲುಕಿ ನಷ್ಟದಿಂದ ಸ್ಥಗಿತವಾಗಿತ್ತು. ಇದರಿಂದಾಗಿ ಈ ಭಾಗದ ಕಬ್ಬು ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ನಷ್ಟದಿಂದ ಸ್ಥಗಿತಗೊಂಡಿದ್ದ ಕಾರ್ಖಾನೆ ಆರಂಭಿಸಲು ಪ್ರಯತ್ನ ಮಾಡಿದರು ಸಾಧ್ಯವಾಗಿರಲಿಲ್ಲ. ಕಡೆಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾರ್ಖಾನೆಯನ್ನು ಖಾಸಗಿ ಕರಣಗೊಳಿಸಿ ಕಾರ್ಖಾನೆಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ಗೆ 40 ವರ್ಷಗಳ ಕಾಲ ಗುತ್ತಿಗೆ ನೀಡಿದೆ. ಇಂದು ವಿದ್ಯುಕ್ತವಾಗಿ ಕಾರ್ಖಾನೆಯನ್ನು ಕಾರ್ಯಾರಂಭ ಮಾಡಲಾಗಿದ್ದು, ಕಾರ್ಖಾನೆಯ ಆವರಣದಲ್ಲಿ ರಾಜ್ಯದ ಹಲವು ಸ್ವಾಮೀಜಿಗಳಿಂದ ಹೋಮ ಸೇರಿದಂತೆ ಪೂಜೆಗಳನ್ನು ನೆರೆವೇರಿಸಿದ್ದು. ಜನ ಪ್ರತಿನಿಧಿಗಳೊಂದಿಗೆ ದೀಪ ಬೆಳಗಿ ಶುಭಕೋರಿ ಹಾರೈಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಉಸ್ತುವಾರಿ ಸಚಿವ ನಾರಾಯಣಗೌಡ ಜಿಲ್ಲೆಯಲ್ಲಿ ಕಾರ್ಖಾ ನೆಗಳ ಸ್ಥಗಿತವಾಗಿರುವುದಕ್ಕೆ ಜಿಲ್ಲೆಯ ರಾಜಕಾರಣಿಗಳೆ ಕಾರಣ. ಕೈಗಾರಿಕೆಗಳ ವಿಚಾರದಲ್ಲಿ ರಾಜಕಾರಣಿಗಳನ್ನು ದೂರವಿಡುವಂತೆ ತಿಳಿಸಿದರು.

ಇನ್ನು ಕಾರ್ಖಾನೆಯ ಉಧ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ಹಲವು‌ ಭಾಗಗಳ‌ ಮಠಾಧೀಶರು ಪಾಲ್ಗೊಂಡಿದ್ದರು. ಮಾಜಿ ಸಚಿವ‌ ಮುರುಗೇಶ್ ನಿರಾಣಿಗೆ ಮುಠಾಧಿಶರು ಶುಭಕೋರಿ ಕಾರ್ಖಾನೆಯನ್ನು ಸಂಸ್ಥಾಪಿಸಿದ ನೀಲೇಗೌಡರರಂತೆ ಮುನ್ನೆಡೆಸುವಂತೆ ಆಶೀರ್ವದಿಸಿದರು.

ಕಲಬುರ್ಗಿಯಲ್ಲಿ ಸಾವಿನ ಸಂಖ್ಯೆ ವ್ಯಾಪಕ ; ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸದೇ ಇರುವುದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ

ಇದೇ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಜಿಲ್ಲಾಉಸ್ತುವಾರಿ ಹೇಳಿದ ಮಾತನ್ನು ಸಮರ್ಥಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಕಾರ್ಖಾನೆ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರುತ್ತಿಲ್ಲ‌. ರಾಜಕಾರಣಿಗಳಿಂದಾಗಿ ಉದ್ಯಮಿಗಳು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಮಾಡಿಸಿದೆ. ಇಂತಹ ಘಟನೆ ಆಗಬಾರದು. ಜನರು ಪ್ರಶ್ನಿಸಬೇಕು ಜಿಲ್ಲೆಯ ಅಭಿವೃದ್ದಿ ಬೇಡವೇ ಎಂದು ಈ ಹಿಂದೆ ಕಾರ್ಖಾನೆ ವಿಚಾರದಲ್ಲಿ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಸಂಘಟನೆಗಳೊಂದಿಗೆ ಸೇರಿ ಕಾರ್ಖಾನೆ ಆರಂಭಕ್ಕೆ ಅಡ್ಡಿಯಾಗಿದ್ದರು. ಇದನ್ನು ಬಿಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಕಾರ್ಖಾನೆ ಆರಂಭಕ್ಕೆ ಅಡ್ಡಿ ಮಾಡುತ್ತಿದ್ದ ಜಿಲ್ಲೆಯ ಜೆಡಿಎಸ್ ನಾಯಕರ ಹೆಸರನ್ನು ಹೇಳದೇ ಆಕ್ರೋಶ ಹೊರ ಹಾಕಿದರು. ಅಲ್ಲದೇ ಕೋವಿಡ್ ಹೋರಾಟದಲ್ಲಿ ತಾವು ಜಯಗಳಿಸಿ ಬಂದಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.
ಒಟ್ಟಾರೆ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಪಾಂಡವಪುರದ ಪಿಎಸ್‌ಎಸ್​ಕೆ ಕಾರ್ಖಾನೆ ಮತ್ತೆ ಪುನರಾರಂಭಗೊಂಡಿರುವುದು ಪಾಂಡವಪುರ, ಶ್ರೀರಂಗಪಟ್ಟಣ, ಮತ್ತು ಕೆ.ಆರ್.ಪೇಟೆ ಭಾಗದ ರೈತರಲ್ಲಿ ಸಂತಸ ತಂದಿದೆ. ಇದರ ಜೊತೆಗೆ ಈ ಭಾಗದಲ್ಲಿ ಈ ಕಾರ್ಖಾನೆ ನಿಂತಿರುವುದರಿಂದ ಕಬ್ಬು ಹಾಕಲು‌ ಹಿಂದೇಟು ಹಾಕಿದ್ದ ರೈತರಿಗೆ ಮತ್ತೆ ಕಬ್ಬು ಹಾಕಲು ಮನಸ್ಸು ಮಾಡಿದ್ರು. ಇನ್ನಿತರ ಆರ್ಥಿಕ ಚಟುವಟಿಕೆ ಈ ಕಾರ್ಖಾನೆ ಪುನರಾರರಂಭ ಮರುಜೀವ ತಂದುಕೊಟ್ಟಿದೆ.


Spread the love

About Laxminews 24x7

Check Also

ಲೋಕಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

Spread the loveಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿಯಲು ಕೆಲವೇ ಹೊತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ