Breaking News
Home / ಜಿಲ್ಲೆ / ಬೆಂಗಳೂರು: :ನಾನು ನಿರ್ಭಯಾ ತಾಯಿ ಪಾತ್ರ ಮಾಡ್ತೇನೆ: ಮಾಳವಿಕಾ

ಬೆಂಗಳೂರು: :ನಾನು ನಿರ್ಭಯಾ ತಾಯಿ ಪಾತ್ರ ಮಾಡ್ತೇನೆ: ಮಾಳವಿಕಾ

Spread the love

ಬೆಂಗಳೂರು: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಯಾರಾದರೂ ಸಿನಿಮಾ ಮಾಡಿದರೆ ಹೇಳಿ ನಾನು ನಿರ್ಭಯಾ ತಾಯಿ ಪಾತ್ರವನ್ನು ಮಾಡುತ್ತೇನೆ ಎಂದು ಹಿರಿಯ ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇಂದು ನಿರ್ಭಯಾ ದೋಷಿಗಳಿಗೆ ಮರಣದಂಡನೆ ಆಗಿದೆ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು ಎಂದು ನಿರ್ಭಯಾ ತಾಯಿ ಆಶಾದೇವಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದರು. ಇದೀಗ ನಿರ್ಭಯಾ ತಾಯಿ ಮಾತಿಗೆ ನಟಿ ಮಾಳವಿಕಾ ಅವಿನಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಮಾಳವಿಕಾ ಸೋಶಿಯಲ್ ಮೀಟಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಯಾರಾದರೂ ಸಿನಿಮಾ ಮಾಡುತ್ತಿದ್ದರೆ ಹೇಳಿ, ನಾನು ನಿರ್ಭಯಾ ತಾಯಿ ಆಶಾದೇವಿ ಪಾತ್ರ ಮಾಡುತ್ತೇನೆ. ಇಂದಿನ ರಾಷ್ಟ್ರೀಯ ಹೀರೋ ಅವರು. ಎಂತಹ ತಾಯಿ” ಎಂದು ಮಾಳವಿಕಾ ನಿರ್ಭಯಾ ತಾಯಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ


Spread the love

About Laxminews 24x7

Check Also

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

Spread the love ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ