Breaking News

ವಿದ್ಯಾರ್ಥಿನಿ ಕುಮಾರಿ ಕರುಣಾ ರಾಘವೇಂದ್ರ ಪತ್ತಾರ್ ಇವಳು ಜವಾಹರ್ ನವೋದಯ ವಿದ್ಯಾಲಯ ಕೊತಲಿ ಕುಪ್ಪನವಾಡಿ ಎಸ್ಪಿ ಸಿ ಬ್ಯಾಚ್ 2019 2020 ನೇ ಸಾಲಿನಲ್ಲಿ

Spread the love

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ನಗರದ ವಿದ್ಯಾರ್ಥಿನಿ ಕುಮಾರಿ ಕರುಣಾ ರಾಘವೇಂದ್ರ ಪತ್ತಾರ್ ಇವಳು ಜವಾಹರ್ ನವೋದಯ ವಿದ್ಯಾಲಯ ಕೊತಲಿ ಕುಪ್ಪನವಾಡಿ ಎಸ್ಪಿ ಸಿ ಬ್ಯಾಚ್ 2019 2020 ನೇ ಸಾಲಿನಲ್ಲಿ lಎಂಟನೇ ತರಗತಿ ವಿದ್ಯಾರ್ಥಿನಿಯಾದ ಕರುಣಾ ಇವಳು ಭಾರತ ದೇಶಾದ್ಯಂತ ಕೋರೋಣ ವೈರಸ ನಿಂದ


ಸಂಕಷ್ಟಕ್ಕೊಳಗಾದ ಭಾರತ ದೇಶ ಮಹಾಮಾರಿ ಕೋರೋಣ ವೈರಸ್ಸನ್ನು ಹೊಡೆದೋಡಿಸಲು ವೈದ್ಯರು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಅವರನ್ನು ಎಷ್ಟು ಹೊಗಳಿದರೂ ಕಡಿಮೆ. ವೈದ್ಯರು ಮತ್ತು ಪೊಲೀಸರು ಹಾಗೂ ಸರಕಾರಿ ಅಧಿಕಾರಿಗಳನ್ನು ಚಪ್ಪಾಳೆ ತಟ್ಟುವ ಮೂಲಕ ಹಾಗೂ ದೀಪ ಹಚ್ಚುವುದರ ಮೂಲಕ ಪುಷ್ಪ ಹಾರಿಸುವ ಮೂಲಕ ಅವರನ್ನು ಸಾರ್ವಜನಿಕರು ಗೌರವಿಸುತ್ತಿದ್ದಾರೆ. ಮಹಾಮಾರಿ ಕೋರೋಣ ವೈರಸ್ಸನ್ನು ಜನರಿಗೆ ಹರಡಬಾರದ ಹಾಗೆ ಮುಂಜಾಗೃತಿಯಾಗಿ ಮಾಡುತ್ತಿರುವ ಕೆಲಸಗಳನ್ನು ಕುಮಾರಿ ಕರುಣಾ ರಾಘವೇಂದ್ರ ಪತ್ತಾರ ಇವಳು ಚಿತ್ರ ಬಿಡಿಸುವುದರ ಮೂಲಕ ಅತಿ ಸ್ಪಷ್ಟವಾಗಿ ಪ್ರಚಲಿತ ಘಟನೆ ಯನ್ನು ತಿಳಿಸಿದ್ದಾಳೆ. ಈ ಕೋರೋಣ ವೈರಸ್ನಿಂದ ಹೇಗೆ ಜಾಗೃತರಾಗಬೇಕು ಎಂದು ಎಂಟನೇ ತರಗತಿಯ ಕರುಣಾ ಚಿತ್ರಕಲೆಗೆ ಮಾದರಿಯಾಗಿದ್ದಾಳೆ. ದೇಶದಲ್ಲಿ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮಗಳು ಇದ್ದರೂ ಯಾವುದೇ ಸರ್ಕಾರಿ ಯೋಜನೆಗಳನ್ನು ಸಹಿತ ಜನಸಾಮಾನ್ಯರಿಗೆ ಸರಳ ರೀತಿಯಲ್ಲಿ ತಿಳಿಯುವ ಹಾಗೆ ಚಿತ್ರಗಳನ್ನು ಬಿಡಿಸುತ್ತಾಳೆ . ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಗಿಟ್ಟಿಸಿಕೊಂಡಿದ್ದಾಳೆ. ಈ ಚಿತ್ರದಲ್ಲಿ ಕೋರೋಣ ವೈರಸ್ ಹಾವಿನಂತೆ ಚಿತ್ರ ಬಿಡಿಸಿ ಅದರ ಬದಿಗೆ ವೈದ್ಯರು ಅದರ ಬದಿಗೆ ಪೊಲೀಸ್ ಇಂಜೆಕ್ಷನ್ ಡೆಟಾಲ್ ಸ್ಯಾನಿಟೈಸರ್ ಇದರಿಂದ ಸಾರ್ವಜನಿಕರನ್ನು ಹೇಗೆ ಜಾಗೃತಗೊಳಿಸಬೇಕೆಂದು ಈ ಚಿತ್ರ ನೋಡಿದರೆ ಸಾಕು ವೈರಸ್ ನಿಂದ ಹೇಗೆ ಬಚಾವಾಗಬೇಕು ಎನ್ನುವುದನ್ನು ಕಲಿಯಲು ಈ ಚಿತ್ರ ಸರಳವಾಗಿದೆ ಈ ಚಿತ್ರ ಕಲೆಗೆ ವೈದ್ಯರಾದ ಹಾಗೂ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀ ಡಾಕ್ಟರ್ ರಾಘವೇಂದ್ರ ಪತ್ತಾರ ಡಾಕ್ಟರ್ ಭಾಗ್ಯಶ್ರೀ ಪತ್ತಾರ ಹಾಗೂ ಚಿತ್ರಕಲೆಯಲ್ಲಿ ಗುರುಗಳು ಆಗಿರುವ ಆಗಿರುವ ಶ್ರೀ ಗುಂಡೋಪಂತ್ ಅಪ್ಪಣ್ಣ ಪತ್ತಾರ ಪ್ರಕಾಶ್ ಪತ್ತಾರ ಗೋಪಾಲ್ ಪತ್ತಾರ ಸರಸ್ವತಿ ಪತ್ತಾರ ಮೂಲತಃ ಇವರ ಮನೆಯಲ್ಲಿ ಚಿತ್ರಕಲೆ ಯನ್ನುವುದು ದೇವರು ಕೊಟ್ಟ ವರ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿರುವ ಈ ಚಿತ್ರವನ್ನು ಸಾಕಷ್ಟು ಜನ ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಸುವರ್ಣ ವಿಧಾನಸೌಧದ ಪಕ್ಕ ಆಡಳಿತ ಸೌಧ ನಿರ್ಮಾಣ ಮಾಡಲು ಅಧಿವೇಶನದಲ್ಲಿ ಸರಕಾರ ನಿರ್ಣಯವನ್ನು ತೆಗೆದುಕೊಳ್ಳಬೇಕು

Spread the loveಬೆಳಗಾವಿ ಸುವರ್ಣ ವಿಧಾನಸೌಧದ ಪಕ್ಕ ಆಡಳಿತ ಸೌಧ ನಿರ್ಮಾಣ ಮಾಡಲು ಅಧಿವೇಶನದಲ್ಲಿ ಸರಕಾರ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ