ಬೆಂಗಳೂರು: ಚಲಿಸುತ್ತಿದ್ದ ಕ್ಯಾಬ್ಗೆ ಹಿಂಬದಿಯಿಂದ ಪೊಲೀಸ್ ಜೀಪ್ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ನಗರದ ಎಂಜಿ ರೋಡ್ನ ಟ್ರಿನಿಟಿ ಸರ್ಕಲ್ ಬಳಿ ಡಿಸಿಪಿ ಕುಲ್ ದೀಪ್ ಜೈನ್ ಮನೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಜೀಪ್ ಟ್ರಿನಿಟಿ ಸರ್ಕಲ್ ಬಳಿ ವೇಗವಾಗಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮೊದಲು ಟಾಟಾ ಇಂಡಿಗೊ ಕ್ಯಾಬ್ಗೆ ಡಿಕ್ಕಿ ಹೊಡೆದಿದೆ. ನಂತರ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲಸೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಪೊಲೀಸ್ ಜೀಪ್ನ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ.
