Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಯುವ ಶಕ್ತಿ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೋಳ್ಳಿ: ಮುತ್ತೆಪ್ಪ ಬಿರನಗಡ್ಡಿ

ಯುವ ಶಕ್ತಿ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೋಳ್ಳಿ: ಮುತ್ತೆಪ್ಪ ಬಿರನಗಡ್ಡಿ

Spread the love

ಗೋಕಾಕ:ಯುವ ಶಕ್ತಿ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ದೇಶದ ಬೆನ್ನೆಲುಬಾದ ಯುವ ಶಕ್ತಿ ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೋಳ್ಳುವಂತೆ ಬೆನಚನಮರಡಿ ಗ್ರಾಮದ ಗ್ರಾ.ಪಂ ಉಪಾಧ್ಯಕ್ಷ ಮುತ್ತೆಪ್ಪ ಬಿರನಗಡ್ಡಿ ಹೇಳಿದರು

ಸೋಮವಾರದಂದು ತಾಲೂಕಿನ ಬೆನಚನಮರಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ದಿ.2 ರಿಂದ 8 ರವರಗೆ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು .
ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೋಳಬೇಕು ಪರಿಸರ ರಕ್ಷಣೆ , ಸಾರ್ವಜನಿಕ ಆಸ್ತಿ ರಕ್ಷಣೆ , ಆರೋಗ್ಯ ರಕ್ಷಣೆ ಅಂತಹ ಸಮಾಜಿಕ ಕಾರ್ಯಗಳಲ್ಲಿ ಪಾಲ್ಗೋಳಬೇಕು. ಹಳ್ಳಿಗಳ ಪ್ರಧಾನವಾದ ಈ ದೇಶದಲ್ಲಿ ಗ್ರಾಮೀಣ ಭಾಗದ ಜನತೆಯಲ್ಲೂ ಅರಿವು ಮೂಡಿಸಿ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸನತ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಐ.ಎಸ್.ಪವಾರ, ಎನ್.ಎಸ್.ಎಸ್.ಸಂಯೋಜನಾಧಿಕಾರಿ ವ್ಹಿ.ಎನ್.ಖಡುಂಗೋಳ ಶಿಕ್ಷಕರಾದ ವ್ಹಿ.ಬಿ.ಪಾಟೀಲ, ವೆಂಕಟೇಶ್ ನಾಯಿಕ, ಎ.ಪಿಂ.ಎಂ.ಸಿ ನಿರ್ದೇಶಕ ಲಕ್ಕಪ್ಪ ಮಾಳಗಿ, ಗ್ರಾಮದ ಮುಖಂಡರುಗಳಾದ ಲಗಮನಗೌಡ ಪೊಲೀಸ ಪಾಟೀಲ, ರಾಮಸಿದ್ಧಪ ಗುಬಚಿ,ಸಿದ್ದಪ್ಪ ಪೂಜೇರಿ, ಲಕ್ಷ್ಮಣ ಕಿಲಾರಿ, ಸಿದ್ದಪ್ಪ ರಂಗನ್ನವರ, ಅರುಣ ಬಬಲಿ, ಸಿದ್ದಪ್ಪ ಗೋಧಿ, ವಿಠಲ ಕಿಲಾರಿ ಸೇರಿದಂತೆ ಅನೇಕರು ಇದ್ದರು.
ಉಪನ್ಯಾಸ ವ್ಹಿ‌.ಬಿ ಕನಿಲದಾರ ಸ್ವಾಗತಿಸಿ, ವಂದಿಸಿದರು ಮುತ್ತೆಪ್ಪ ಬಿರನಗಡ್ಡಿ


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ