Breaking News

ಸುದ್ದಿ ಮಾಡಲು ಹೋದ ವರದಿಗಾರನಿಗೆ ಮ್ಯಾನೆಜರನಿಂದ ದರ್ಪ

Spread the love

ಜಗತ್ತಿನ ತುಂಬ ಕರೊನಾ ವೈರಸ್ ತಡೆಯುವ ಬಗ್ಗೆ ಮುಂಜಾಗೃತೆಗಾಗಿ ಸರಕಾರ ಎಲ್ಲ ಇಲಾಖೆಗಳಿಗೆ ಸೂಚನೆ ಮಾಡಿದೆ ಆದರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿರುವ ಕೆನರಾ ಬ್ಯಾಂಕ ಮ್ಯಾನೇಜರ್ ಕಲ್ಲಪ್ಪ ತೇಲಿ ಎಂಬ ಮ್ಯಾನೆಜರ ನಿಯಮ ಉಲ್ಲಂಘನೆ ಮಾಡಿ ಬ್ಯಾಂಕಿನ ಒಳಗಡೆ ಯಾರನ್ನು ತೆಗೆದುಕೊಳ್ಳದೆ ಹೊರಗಡೆ ಗ್ರಾಹಕರನ್ನು ನಿಲ್ಲಿಸಿ ಸತಾಯಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ

ಸುದ್ದಿ ಮಾಡಲು ತೆರಳಿದ ವರದಿಗಾರನ ಮೇಲೆ ದರ್ಪ ತೊರಿದ್ದಲ್ಲದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಲ್ಲದೆ ನೀವು ಮಾಡಿಕೊಳ್ಳತ್ತಿರೋ ಮಾಡಿಕೊಳ್ಳಿ ಎಂದು ದರ್ಪ ತೊರಿದ್ದಾನೆ ಹಾಗೂ ಹೊರಗಡೆ ಇದ್ದವರನ್ನು ಬ್ಯಾಂಕಿನ ಒಳಗಡೆ ಕಳಿಸಿದರೆ ಕೆವಲ ಇವನು ಪೋಟೊ ತೆಗೆದುಕೊಳ್ಳುವಗೊಸ್ಕರ ಒಳಗಡೆ ಬೀಡುತಿದ್ದಾನೆಂದು ಒಳಗಡೆ ಬರುವವರಿಗೆ ಬರದಂತೆ ಹೇಳುತಿದ್ದಾನೆ.

ಇದರ ಜೊತೆಗೆ ಆದಾರ ಕಾರ್ಡ ಲಿಂಕ್ ಮೇಲೆ ಹಣ ನೀಡುವ ಬ್ಯಾಂಕ‌ ಮಿತ್ರ ಎಂದು ಹೇಳಿಕೊಳ್ಳುವ ಮಂಜುನಾಥ ದೂದಗಾಂವಿ ಇವರು ತಮ್ಮ ಹಳ್ಳಿ ಅಥವಾ ವಾರ್ಡಿನಲ್ಲಿ ಬ್ಯಾಂಕಿಗೆ ಬರಲಿಕ್ಕೆ

ಆಗದಿರುವವರಿಗೆ ಹಣ ನೀಡುವುದನ್ನು ಬಿಟ್ಟು ದಿನಾಲು ಕೊಣ್ಣೂರ ಕೆನರಾ ಬ್ಯಾಂಕಿನ ಮುಂದೆ ಕುಳಿತು ಹೆಬ್ಬೆಟ್ಟು ತೆಗೆದುಕೊಳ್ಳುವ ನಿಯಮ ಇಲ್ಲದಿದ್ದರೂ ಅಥವಾ ಒಂದು ವೇಳೆ ಹೆಬ್ಬೆಟ್ಟು ತೆಗೆದುಕೊಳ್ಳಬೇಕಾದರೆ ಗ್ರಾಹಕರಿಗೆ ಸಾನಿಟೈಜರ ಉಪಯೋಗಿಸಲು ಹೇಳಿ ಮಾಹಿತಿ ನೀಡಿ ಹೆಬ್ಬೆಟ್ಟು ತೆಗೆದುಕೊಳ್ಳಬೇಕು ಅದನ್ನು ಯಾವುದನ್ನು ಮಾಡದೆ ಪ್ರತಿಯೊಬ್ಬರ ಹೆಬ್ಬೆಟ್ಟು ತೆಗೆದುಕೊಂಡು ಹಣ ನೀಡುತ್ತಿರುವುದನ್ನು ಕೇಳಿದರೆ ನಾನು‌ ಬ್ಯಾಂಕಿನ ಮಿತ್ರ ನನಗೆ ಕೊಡುವ ಅನುಮತಿ ಇದೆ ಎಂದು ತನ್ನ ಬೇಜವಾಬ್ದಾರಿತನವನ್ನು ತೋರಿಸಿದ್ದಾನೆ ಮತ್ತು ಅವನು ಬ್ಯಾಂಕಿನ ಒಳಗಡೆ ಕೂತರು ಮ್ಯಾನೆಜರ ಕಲ್ಲಪ್ಪ ತೇಲಿ‌ ಇತನನ್ನು ವಿಚಾರಿಸುವುದೆ ಇಲ್ಲ ಇದನ್ನೆಲ್ಲಾ ನೋಡಿದರೆ ಎಲ್ಲಿ ಬ್ಯಾಂಕ ಮಿತ್ರ ಎಂದು ಹೇಳಿಕೊಳ್ಳುವ ಮಂಜುನಾಥ ದೂದಗಾಂವಿಯನ್ನು ಮ್ಯಾನೆಜರ ವಿಚಾರಿಸದೆ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.


ಅದಕ್ಕಾಗಿ ಗ್ರಾಹಕರನ್ನು ಬ್ಯಾಂಕಿನ ಹೊರಗಡೆ ಕೂರಿಸಿ ಅವನಿಂದಲೆ ಹಣ ತೆಗೆದುಕೊಳ್ಳಲು ಗ್ರಾಹಕರನ್ನು ಬ್ಯಾಂಕಿನ ಹೊರಗಡೆ ನಿಲ್ಲಿಸುತ್ತಿರುವುದು ಕಾರಣ ಎಂದು ತಿಳಿದು ಬಂದಿದೆ


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶ

Spread the loveಬೆಳಗಾವಿ: ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ