ಗೋಕಾಕ್ ನಗರದಲ್ಲಿ ಮೇ 6ನೇ ತಾರೀಖುನಂದು ರಾತ್ರಿ 8 ಗಂಟೆಗೆ ಸಿದ್ದು ಕನಮಡ್ಡಿ ಎಂಬ 26 ವರ್ಷದ ಮಾದಿಗ ಸಮಾಜದ ಯುವಕನ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಮಾದಿಗ ಸಮಾಜದ ಜನರೆಲ್ಲ ಒಟ್ಟಾಗಿ ಗೋಕಾಕ್ ನಗರದ ಟೌನ್ ಠಾಣೆಗೆ ತೆರಳಿ ಪ್ರಕರಣವನ್ನ ಆದಷ್ಟು ಬೇಗ ಭೇದಿಸಿ ತಪ್ಪಿತಸ್ಥರನ್ನ ಬಂಧಿಸುವಂತೆ ಒತ್ತಾಯಿಸಿದರು. ಅಲ್ಲದೆ ಎಸ್ ಪಿ ಅವರಿವೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರದಲ್ಲಿ ಮಾದಿಗ ಸಮಾಜದ ಯುವ ವೇದಿಕೆ ಅಧ್ಯಕ್ಷರಾದ ಸಿದ್ದು ಕನಮಡ್ಡಿ ಯವರನ್ನ ಕೊಲೆ ಮಾಡಿದರೆ ಹಿಂದೆ ದಲಿತ ಸಘಟನೆ ವಿರೋಧಿ ಅಂಗ ಆರ್ ಎಸ್ ಎಸ್, ಭಜರಂಗ ದಳ, ರಾಮಸೇನ ಸಂಘಟನೆ ಗಳ ಕೈವಾಡವಿದೆ ಎಂಬ ಶಂಕೆಯಿದೆ . ಆದ್ದರಿಂದ ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಬರೆಯಲಾಗಿತ್ತು.ತಾಲೂಕಾ ತಹಶೀಲದಾರ ಶ್ರೀ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ನೀಡಲಾಯಿತು.