ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಉಪ್ಪಾರ ಬೀರನಹಳ್ಳಿ ಪಿಡಬ್ಲ್ಯುಡಿ ಕ್ವಾಟರ್ಸ್‍ನಲ್ಲಿ ನಡೆದಿದೆ.
ಸಹೋದರರಿಬ್ಬರು ಮನೆ ಮುಂದೆ ಚೌಕಾಬಾರ ಆಟವಾಡುತ್ತಿದ್ದಾಗ ಕ್ಷುಲಕ್ಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ತಮ್ಮ ಕಿರಣ್ ಬಳಿ ಅಣ್ಣ ಅರುಣ್ ಚೌಕಾಬಾರ ಆಟದಲ್ಲಿ 500 ರೂಪಾಯಿ ಸೋತಿದ್ದ. ಈ ವೇಳೆ ತಮ್ಮ ಕಿರಣ್ ಮೊದಲು ಸೋತ ಹಣ ಕೊಡು, ಆಮೇಲೆ ಆಡೋಣ ಎಂದು ದುಂಬಾಲು ಬಿದ್ದಿದ್ದಾನೆ. ಈ ವೇಳೆ ಅಣ್ಣ ಅರುಣ್, ಕೊಡ್ತೀನಿ ಆಡೋ ಎಂದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಇಬ್ಬರು ಸಹೋದರರ ನಡುವ ಗಲಾಟೆ ನಡೆದಿದೆ.
ಗಲಾಟೆಯಲ್ಲಿ ಕಿರಣ್ 26 ವರ್ಷದ ಅಣ್ಣ ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಅರುಣ್ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದ. ಕೂಡಲೇ ಅರುಣ್‍ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗುರುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಸಾವಿಗೀಡಾಗಿದ್ದಾನೆ.
ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಿರಣ್‍ನನ್ನು ಬಂಧಿಸಿದ್ದಾರೆ.