ಅಥಣಿ: ತಾಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಬಂದೆನವಾಜ ಮುಲ್ಲಾ ಹಾಗೂ ದೇಸಾರಟ್ಟಿ ಗ್ರಾಮದ ಮಂಡುಭಾಯಿ ಪವಾರ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ತಲಾ ಐದು ಲಕ್ಷ ರೂಪಾಯಿ ಚೆಕ್ಕನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಯವರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಮಹೇಶ ಕುಮಠಳ್ಳಿ ಇಂತಹ ದುರ್ಘಟನೆ ಘಟಿಸಬಾರದಿತ್ತು ಆದರೆ ವಿಧಿ ಆಟದ ಎದುರು ಎಲ್ಲರೂ ತಲೆ ಭಾಗ ಬೇಕಾಗುತ್ತದೆ. ಪ್ರಕೃತಿ ವಿಕೋಪ ಮತ್ತು ನೈಸರ್ಗಿಕ ಕಾರಣ ಸಾವಿಗೆ ಜಿಲ್ಲಾಡಳಿತ ಸರ್ಕಾರದ ಪರಿಹಾರ ಧನದ ಚೆಕ್ ವಿತರಿಸಲಾಗುತ್ತಿದೆ ಅದನ್ನು ಕುಟುಂಬ ಸದಸ್ಯರು ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಹೇಳಿದರು.