Breaking News
Home / ಮೂಡಲಗಿ / ಗಾಯಗೊಂಡ ತಂದೆ, ಮಗಳನ್ನು ಭಾರಿ ಮಳೆಯಲ್ಲಿ ಸುರಕ್ಷಿತ ಜಾಗಕ್ಕೆ ತಲುಪಿಸಿದ ಮುಂಬೈ ಪೊಲೀಸ್

ಗಾಯಗೊಂಡ ತಂದೆ, ಮಗಳನ್ನು ಭಾರಿ ಮಳೆಯಲ್ಲಿ ಸುರಕ್ಷಿತ ಜಾಗಕ್ಕೆ ತಲುಪಿಸಿದ ಮುಂಬೈ ಪೊಲೀಸ್

Spread the love

ಪ್ರತಿವರ್ಷ ಮುಂಬೈಯಲ್ಲಿ ಬೀಳುವ ಭಾರಿ ಮಳೆ ವಾತಾವರಣವನ್ನು ನೋಡಲು ಎಷ್ಟು ಸುಂದರ ಗೊಳಿಸುತ್ತದೆಯೋ, ಅಷ್ಟೇ ಭಯಾನಕವಾಗಿಯೂ ಸಹ ಇರುತ್ತದೆ. ಈ ಭಾರಿ ಮಳೆ ಬೀಳುವುದರಿಂದ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ರಸ್ತೆಯಲ್ಲಿ ನಡೆದು ಕೊಂಡು ಹೋಗಿ ಸುರಕ್ಷಿತವಾಗಿ ಒಂದು ಜಾಗಕ್ಕೆ ಸೇರುವುದೇ ಸುಮಾರು ಜನರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಇಂತಹ ಮಳೆಯಲ್ಲಿ ಅನೇಕರಿಗೆ ರಸ್ತೆ ಕಾಣದೆ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆಗಳು ಸಹ ನಡೆದಿವೆ. ಮೊಣಕಾಲು ಉದ್ದಕ್ಕೆ ನೀರು ನಿಂತಿದ್ದರೆ ನಡೆದು ಕೊಂಡು ಹೋಗುವುದು ಅಷ್ಟೊಂದು ಸುಲಭದ ಕೆಲಸವಲ್ಲ.

 

ಇಂತಹ ಮಳೆಯಲ್ಲಿ ತಮ್ಮ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಗಾಯಗೊಂಡಿರುವ ತಂದೆ ಮತ್ತು ಅವರ ಮಗಳನ್ನು ಜಲಾವೃತಗೊಂಡ ರಸ್ತೆಯಲ್ಲಿ ಕೊಡೆ ಹಿಡಿದು ಅಲ್ಲಿಂದ ಮಗಳನ್ನು ಎತ್ತಿಕೊಂಡ ತಂದೆಯ ಜೊತೆಗೆ ನಡೆದುಕೊಂಡು ಬಂದು ಅವರಿಬ್ಬರನ್ನೂ ಸುರಕ್ಷಿತ ಜಾಗಕ್ಕೆ ಸೇರಿಸಿದ್ದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ಪೊಲೀಸ್ ಗೆ ಭೇಷ್ ಎಂದಿದ್ದಾರೆ.

ಭಾರಿ ಮಳೆಯಿಂದಾಗಿ ಮುಂಬೈ ನ ಕಾಂದಿವೇಲಿ ಏರಿಯಾದಲ್ಲಿ ಒಂದು ರಾತ್ರಿ ಮೊಣಕಾಲಿನವರೆಗೂ ನೀರು ಇರುತ್ತದೆ ಮೇಲಿಂದ ಜೋರಾಗಿ ಮಳೆ ಸಹ ಬೀಳುತ್ತಿರುತ್ತದೆ, ಅದರಲ್ಲಿ ತಂದೆ ಮತ್ತು ಮಗಳು ನಡೆದು ಕೊಂಡು ಬರಲು ಆಗದೇ ಒದ್ದಾಡುತ್ತಿದ್ದಾಗ ಪೊಲೀಸರೊಬ್ಬರು ಅದನ್ನು ನೋಡಿ ಪೊಲೀಸ್ ತಕ್ಷಣವೇ ಆ ಜಾಗಕ್ಕೆ ಹೋಗಿ ಕೊಡೆಯನ್ನು ಹಿಡಿದು ಕೊಂಡು ಹೋಗಿ ಆ ಮಗಳು ಮತ್ತು ಗಾಯಗೊಂಡಿರುವ ತಂದೆಯನ್ನು ಹಿಡಿದುಕೊಂಡು ನೀರಿನಿಂದ ಸುರಕ್ಷಿತ ಜಾಗಕ್ಕೆ ಅವರಿಬ್ಬರನ್ನು ಸೇರಿಸಿದ್ದಾರೆ. ಈ ವಿಡಿಯೋ ವನ್ನು ಮುಂಬೈ ಪೊಲೀಸ್ ಟ್ವಿಟ್ಟರ್ ಅಕೌಂಟ್ ನ ಪೇಜ್ ನಲ್ಲಿ ಹಂಚಿಕೊಂಡಿದ್ದು ವಿಡಿಯೋ ನೋಡಿದಂತಹ ಪ್ರತಿಯೊಬ್ಬರೂ ಪೊಲೀಸನಿಗೆ ಭೇಷ್ ಎಂದಿದ್ದಾರೆ.

15 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ ಪೊಲೀಸ್ ಗಾಯಾಳು ತಂದೆಯು ಮತ್ತು ಮಗಳು ತಮ್ಮ ಮೊಣಕಾಲಿನವರೆಗೆ ನಿಂತ ಮಳೆನೀರಿನಲ್ಲಿ ಮುಂದಕ್ಕೂ ಹೋಗಲು ಬಾರದೆ ಹಿಂದಕ್ಕೂ ತೆರಳಲು ಬಾರದೆ ತುಂಬಾ ಕಷ್ಟ ಪಡುತ್ತಿದ್ದಾಗ ಅಲ್ಲೇ ಇದ್ದ ಪೊಲೀಸ್ ಒಂದು ಕೊಡೆಯನ್ನು ಹಿಡಿದುಕೊಂಡು ಹೋಗಿ ಇಬ್ಬರನ್ನು ಸುರಕ್ಷಿತ ಜಾಗಕ್ಕೆ ಸೇರಿಸಿದ್ದನ್ನು ನೋಡಬಹುದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ “ನೀವು ನಮ್ಮನ್ನು ನಂಬಬಹುದು! ಕಾಂದಿವೇಲಿ ಏರಿಯಾದಲ್ಲಿ ಮೊಣಕಾಲಿನವರೆಗೂ ನಿಂತ ನೀರಿನಲ್ಲಿ ತಂದೆ ಮತ್ತು ಮಗಳಿಗೆ ಸಹಾಯ ಮಾಡಿದ ಪೊಲೀಸ್”, ಎಂದು ಬರೆಯಲಾಗಿದೆ.

ಈ ವಿಡಿಯೋವನ್ನುಮುಂಬೈ ಪೊಲೀಸ್ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇದುವರೆಗೂ 52,500 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದು, 364 ಜನರು ಈ ವಿಡಿಯೋಗೆ ಮರು ಟ್ವೀಟ್ ಮಾಡಿದ್ದು, 4067 ಜನರು ಲೈಕ್ ಮಾಡಿದ್ದಾರೆ.

ದೇಶಾದ್ಯಂತ ಪೊಲೀಸರು ನಾಗರಿಕರ ಸುರಕ್ಷತೆಯ ಬಗ್ಗೆ ತಮ್ಮ ಜೀವದ ಹಂಗು ತೊರೆದು ಸಹಾಯ ಮಾಡುತ್ತಾರೆ ಮತ್ತು ಈ ವೈರಲ್ ವಿಡಿಯೋ ಸಹ ಇದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿದೆ. ಇದನ್ನು ನೋಡಿದ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸನ ಸಹಾಯಕ್ಕೆ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಅವರು ಮಾಡಿದ ಸಹಾಯವನ್ನು ತುಂಬಾ ಮುಕ್ತವಾಗಿ ಹೊಗಳಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ