Breaking News
Home / ರಾಜಕೀಯ / ಮಂಡ್ಯ ಗಣಿ ವಿವಾದ: ಅಖಾಡಕ್ಕೆ ಬರಲು ಸಿದ್ದರಾಮಯ್ಯಗೆ ಆಹ್ವಾನ ಕೊಟ್ಟ ಸುಮಲತಾ ಅಂಬರೀಶ್

ಮಂಡ್ಯ ಗಣಿ ವಿವಾದ: ಅಖಾಡಕ್ಕೆ ಬರಲು ಸಿದ್ದರಾಮಯ್ಯಗೆ ಆಹ್ವಾನ ಕೊಟ್ಟ ಸುಮಲತಾ ಅಂಬರೀಶ್

Spread the love

ಬೆಂಗಳೂರು (ಜುಲೈ 11): ರಾಜ್ಯ ರಾಜಕೀಯದಲ್ಲೀಗ ಮಂಡ್ಯ ರಾಜಕಾರಣದ್ದೇ ಸುದ್ದಿ. ಕೆ ಆರ್ ಸ್ ಡ್ಯಾಮ್ ಬಿರುಕಿನ ವಿಷಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವೆ ಉಂಟಾಗಿರುವ ಸಮರ ಇನ್ನಷ್ಟು ತಾರಕಕ್ಕೇರಿದೆ. ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳಿಗೆ ತಕ್ಕ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ದದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಪಣ ತೊಟ್ಟಿರುವಂತಿದೆ. ಈ ನಡುವೆ ತಮ್ಮ ಹೋರಾಟಕ್ಕೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೂಡ ಆಹ್ವಾನಿಸಿದ್ದಾರೆ.

ಇಂದು ಭಾನುವಾರ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗಹ್ಲೋಟ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರನ್ನು ಸಂಸದೆ ಸುಮಲತಾ ಅಂಬರೀಶ್ ಭೇಟಿ ಮಾಡಿದರು. ಈ ವೇಳೆ, ‘ಏನಮ್ಮ ನಿಮ್ದು ಜೋರಾಗಿದೆ’ ಎಂದು ಸುಮಲತಾ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಮಲತಾ ಅಂಬರೀಶ್, ಹಾಗೆ ಸರ್ ಸ್ವಲ್ಪ ನಡೆಯುತ್ತಿದೆ ಎಂದರು. ನಂತರ ಮಂಡ್ಯಕ್ಕೆ ಬರುವಂತೆ ಸಿದ್ದರಾಮಯ್ಯ ಅವರನ್ನ ಆಹ್ವಾನಿಸುವುದರ ಮೂಲಕ ಗಣಿಗಾರಿಕೆ ವಿರುದ್ದದ ಹೋರಾಟಕ್ಕೆ ಕೈ ಜೋಡಿಸುವಂತೆ ಸುಮಲತಾ ಮನವಿ ಮಾಡಿದ್ರು. ಇದಕ್ಕೆ ಸ್ಪಂದಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಂಡ್ಯಾಗೆ ಬರುವುದಾಗಿ ಭರವಸೆ ನೀಡಿದರು. ಈ ಮೂಲಕ ಅಕ್ರಮ ಗಣಿಗಾರಿಕೆ ವಿರುದ್ದದ ಹೋರಾಟಕ್ಕೆ ಕಾಂಗ್ರೆಸ್​ನ ಬೆಂಬಲವನ್ನು ಸುಮಲತಾ ಅಂಬರೀಶ್ ಪರೋಕ್ಷವಾಗಿ ಕೋರಿದ್ದಾರೆ. ಈಗಾಗಲೇ ಅಕ್ರಮ ಗಣಿಗಾರಿಕೆ ವಿರುದ್ದ ಸುಮಲತಾ ಸಮರ ಸಾರಿದ್ದಾರೆ. ಈಗ ಜಿಲ್ಲೆಗೆ ಬರುವಂತೆ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದಾರೆ. ಪ್ರಮುಖವಾಗಿ ಸಿದ್ದರಾಮಯ್ಯ ಜಿಲ್ಲೆಗೆ ಬಂದ್ರೆ, ಈ ಹೋರಾಟ ಮತ್ತಷ್ಟು ಜೋರಾಗಲಿದೆ. ಸಹಜವಾಗಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಭೇಟಿ, ಅಲ್ಲಿರುವ ವಾಸ್ತವ ಪರಿಸ್ಥಿತಿ ಅವಲೋಕಿಸಿ ಅಂತಿಮವಾಗಿ ಆ ಬಗ್ಗೆ ವಿಧಾನಸಭೆ ಯಲ್ಲಿ ಧ್ವನಿ ಎತ್ತಿದ್ರೆ ಸರ್ಕಾರ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು.

ಸುಮಲತಾ v/s ಹೆಚ್​ಡಿಕೆ ಗಣಿ ವಾರ್: ಗಣಿಗಾರಿಕೆ ಬಂದ್ ಮಾಡುವುದಾಗಿ ಮಾಲೀಕರ ಎಚ್ಚರಿಕೆ

ಈಗಾಗಲೇ ಸುಮಲತಾ ಅಂಬರೀಷ್ ಕೂಡ ಸಿಎಂ ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನ ಭೇಟಿ ಮಾಡಿ ದೂರು ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಇದರ ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯಕ್ಕೆ ಬಂದು ಜಿಲ್ಲೆಯಲ್ಲಿರುವ ಗಣಿಗಾರಿಕೆ ಬಗ್ಗೆ ಸಂಕ್ಷಿಪ್ತವಾದ ವಿವರ ಪಡೆದು, ಅದನ್ನು ಸದನದ ಒಳಗೆ ಇಟ್ಟರೆ ಸರ್ಕಾರ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಗಣಿಗಾರಿಕೆ ಹಿಂದಿರುವ ಬಣ್ಣ ಕೂಡ ಬಯಲಾಗಲಿದೆ. ಅದಕ್ಕಾಗಿಯೇ ಹೋರಾಟ ತೀವ್ರ ಗೊಳಿಸಲು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸುಮಲತಾ ಮಂಡ್ಯ ಜಿಲ್ಲೆಗೆ ಬರುವಂತೆ ಆಹ್ಚಾನಿಸಿದ್ಸಾರೆ ಎನ್ನಲಾಗಿದೆ.

ಒಟ್ಟಾರೆ ಮಂಡ್ಯದಲ್ಲಿ ಉಂಟಾಗಿರುವ ಅಕ್ರಮ ಗಣಿಗಾರಿಕೆ ಸದ್ದು ದಿನೇ ದಿನೇ ಹೆಚ್ಚಾಗುತ್ತಿದ್ದು, ಮುಂದೆ ಇದು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪಕ್ಷೇತರ ಸಂಸದೆ ಸುಮಲತಾ ನಡುವೆ ಉಂಟಾಗಿರುವ ಸಮರದಲ್ಲಿ ಯಾರ ಪ್ರತಿಷ್ಠೆ ಗೆಲ್ಲಲಿದೆ ಎಂಬುದು ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ