Breaking News
Home / ಜಿಲ್ಲೆ / ಧಾರವಾಡ / ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ನರ್ಸ

ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ನರ್ಸ

Spread the love

ಧಾರವಾಡ(ಆ.03): ರಾಜ್ಯದಲ್ಲಿ ಕೊರೋನಾ ವೈರಸ್​ನ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಧಾರವಾಡ ಜಿಲ್ಲೆ ಸಹ ಹೊರತಾಗಿಲ್ಲ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ. ಇದರಿಂದ ಜಿಲ್ಲೆಯ ನಗರ ಪ್ರದೇಶದಲ್ಲಿ  ಆ್ಯಂಟಿಜನ್ ಟೆಸ್ಟ್  ವಾಹನದ ಮೂಲಕ ಕೊರೋನಾ ಟೆಸ್ಟ್​​ ಮಾಡಲಾಗುತ್ತಿದೆ. ಆದರೆ ಈ ಆ್ಯಂಟಿಜನ್ ಟೆಸ್ಟ್ ಮಾಡಲು ನರ್ಸ್ ತನ್ನ ಪುಟ್ಟ ಮಗಳೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾಳೆ.

ಧಾರವಾಡ ನಗರದ ವಿವಿಧ ಬಡಾವಣೆಗಳಲ್ಲಿ ಕೊರೋನಾ ಸೋಂಕಿತರ ಪತ್ತೆಗಾಗಿ ಆ್ಯಂಟಿಜನ್ ಟೆಸ್ಟ್ ಬಸ್ ಸಂಚರಿಸುತ್ತಿದೆ. ಈ ಬಸ್ ನಲ್ಲಿ ಕರ್ತವ್ಯ ಮಾಡುವ ನರ್ಸ್ ತನ್ನೊಂದಿಗೆ ಪುಟ್ಟ‌ ಮಗುವನ್ನು ಕರೆ ತಂದಿದ್ದಾರೆ. ಈ ಆ್ಯಂಟಿಜನ್ ಬಸ್ ಹತ್ತಿರಕ್ಕೆ ಪುಟ್ಟ ಮಕ್ಕಳು ಹೋಗುವುದು ಸಹ ಅಪಾಯ. ಇಂತಹ ಸಂದರ್ಭದಲ್ಲಿ ಬಸ್‌ ನೊಳಗೆ ಎರಡೂವರೆ ವರ್ಷದ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ನರ್ಸ್.

ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ನರ್ಸ್: ಆ್ಯಂಟಿಜನ್ ಟೆಸ್ಟ್ ಬಸ್ ನಲ್ಲಿ ಅಮ್ಮನೊಂದಿಗೆ ಕಂದನ ಸಂಚಾರ

ಈ ಆ್ಯಂಟಿಜನ್ ಟೆಸ್ಟ್ ಬಸ್ ನಿಂದ  ವ್ಯಕ್ತಿಗೆ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಲಾಗುತ್ತದೆ. ಆದರೆ ಪಾಸಿಟಿವ್ ಬಂದರೆ ಬಸ್ ನಲ್ಲಿನ ಈ ಮಗು ಸಹ ಪ್ರಥಮ ಸಂಪರ್ಕ ಬರುವ ಸಾಧ್ಯತೆ ಇದೆ‌ ಎಂಬುದನ್ನು ಸಹ ಅರಿಯದೇ ತನ್ನೊ ಮಗುವೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದು ಅಪಾಯಕಾರಿ ಸಂಗತಿ.

ತಾಯಿ ( ನರ್ಸ್ ) ತನ್ನ‌ಪಾಡಿಗೆ ತಾನು ಆ್ಯಂಟಿಜನ್ ಟೆಸ್ಟ್​​ ಮಾಡುತ್ತಿದ್ದರೆ, ಪುಟ್ಟ ಮಗು ತನ್ನ ಪಾಡಿಗೆ ತಾನು ಬಸ್​​ನಲ್ಲಿ ಆಟವಾಡುತ್ತದೆ. ಏನೂ ಅರಿಯದ ಮಗು ಕೊರೋನಾ ಸೋಂಕಿತರನ್ನು ಪತ್ತೆ ಮಾಡುವ ಆ್ಯಂಟಿಜನ್ ಬಸ್ ನಲ್ಲಿ ಸಂಚಾರ ಮಾಡುತ್ತಿದೆೆ.

ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಯಾರು ಇಲ್ಲ. ಮನೆಯಲ್ಲಿ ಮಗು ಬಿಟ್ಟು ಬರುವುದು ಕಷ್ಟವಾದ ಹಿನ್ನೆಲೆ ಮಗುವಿನ ಜೊತೆಯೇ ಟೆಸ್ಟಿಂಗ್ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ನರ್ಸ್ ‌ಹೇಳುತ್ತಾರೆ.


Spread the love

About Laxminews 24x7

Check Also

ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.

Spread the loveಧಾರವಾಡ, ಆಗಸ್ಟ್‌, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ