Breaking News
Home / Uncategorized / COVID ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

COVID ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

Spread the love

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಜೂನ್ 7 ರ ವರೆಗೆ ಇದ್ದ ಲಾಕ್​ಡೌನ್​ನನ್ನು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇನ್ನು ಒಂದು ವಾರ ವಿಸ್ತರಿಸಿದೆ. ಜೊತೆಗೆ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5 ಕ್ಕೆ ಬರುತ್ತದೋ ಆ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ಕಡಿಮೆ ಇದ್ದು, ಇನ್ನು ಹಲವು ಕಡೆ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗಿಲ್ಲ.

ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಾರಿ ಇಳಿಕೆ ಕಂಡಿದೆ. ಐದು ದಿನದಲ್ಲಿ 72 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಸದ್ಯ ಬೀದರ್​ನಲ್ಲಿ ಪಾಸಿಟಿವಿಟಿ ದರ ಶೇಕಡಾ 0.55 ಕ್ಕೆ ಇಳಿದಿದೆ. ಜೊತೆಗೆ ಯಾದಗಿರಿಯಲ್ಲೂ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಪಾಸಿಟಿವಿಟಿ ರೇಟ್ ಶೇ.3.3 ರಷ್ಟಿದೆ. ಕಲಬುರಗಿ, ಹಾವೇರಿ, ಬಾಗಲಕೋಟೆ, ರಾಮನಗರದಲ್ಲಿ ಕ್ರಮವಾಗಿ ಶೇ.2.5, 3.2, 4.5, 4.8 ಪಾಸಿಟಿವಿಟಿ ದರ ಕಂಡುಬಂದಿದೆ.

ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 4.52 ರಷ್ಟಿದ್ದು, ಗದಗದಲ್ಲಿ ಶೇ.5.64, ಚಿತ್ರದುರ್ಗದಲ್ಲಿ 5.8, ಚಿಕ್ಕಬಳ್ಳಾಪುರದಲ್ಲಿ 5.83, ಕೋಲಾರದಲ್ಲಿ 7.21, ರಾಯಚೂರಿನಲ್ಲಿ 8.4 ಹಾಗೂ ಬಳ್ಳಾರಿಯಲ್ಲಿ ಶೆ.9 ರಷ್ಟಿರುವುದು ತಿಳಿದುಬಂದಿದೆ.

ಕೆಲ ಜಿಲ್ಲೆಗಳಲ್ಲಿ ಕೊರೊನಾ ನಿಂತ್ರಣಕ್ಕೆ ಬಂದಿಲ್ಲ. ಪಾಸಿಟಿವಿಟಿ ರೇಟ್ ಹೆಚ್ಚಿದೆ. ಧಾರವಾಡದಲ್ಲಿ ಪಾಸಿಟಿವಿಟಿ ರೇಟ್ ಶೇ.11 ಇದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ ಶೇ.11.3 ರಷ್ಟಿದೆ. ಕೊಡಗಿನಲ್ಲಿ ಶೇ.11.53, ಉಡುಪಿ 11.67, ಮೈಸೂರು 12, ವಿಜಯಪುರ 12.8, ಮಂಡ್ಯ 13.24, ಕೊಪ್ಪಳ 15, ತುಮಕೂರು 15.40, ಚಾಮರಾಜನಗ 16.53, ಹಾಸನ 18.34, ಶಿವಮೊಗ್ಗ 18.5, ದಾವಣಗೆರೆ 18.06 ರಷ್ಟಿದೆ. ಚಿಕ್ಕಮಗಳೂರಿನಲ್ಲಿ ಶೇ.26.09 ಇದ್ದರೆ, ಮಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ.23.92 ಇರುವುದು ತಿಳಿದುಬಂದಿದೆ.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ