Breaking News
Home / ರಾಜಕೀಯ / ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನ್ ಕೇಂದ್ರ ನಿರ್ಮಿಸಿದ ಯಲ್ಲಾಪುರದ ಉದ್ಯಮಿ

ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನ್ ಕೇಂದ್ರ ನಿರ್ಮಿಸಿದ ಯಲ್ಲಾಪುರದ ಉದ್ಯಮಿ

Spread the love

ಕಾರವಾರ (ಜೂನ್ 2): ಕೋವಿಡ್ ಸಂಕಷ್ಟ ಕಾಲಕ್ಕೆ ಅದೆಷ್ಟೋ ಮಾನವೀಯ ವ್ಯಕ್ತಿಗಳು ಬೆಳಕಿಗೆ ಬರುತ್ತಿದ್ದಾರೆ. ವಿವಿಧ ರೂಪದಲ್ಲಿ ಬಡವರಿಗೆ ದಾರಿ ದೀಪವಾಗುತ್ತಿದ್ದಾರೆ. ಸರಕಾರ ಮಾಡಬೇಕಾದ ಕೆಲಸವನ್ನ ದಾನಿಗಳು ಮಾಡಿ ಸರಕಾರವನ್ನು ನಾಚಿಸುವಂತೆ ಮಾಡುತ್ತಿದ್ದಾರೆ. ಹೀಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಉದ್ಯಮಿ ಬಾಲಕೃಷ್ಣ ನಾಯ್ಕ್ ಸ್ವಂತ ಖರ್ಚಿನಲ್ಲಿ ಕೋವಿಡ್ ವ್ಯಾಕ್ಸಿನ್ ಕೇಂದ್ರವನ್ನೇ ತೆರೆದಿದ್ದಾರೆ. ವ್ಯಾಕ್ಸಿನ್ ಪಡೆಯುವವರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ನಿವಾಸಿಯಾದ ಬಾಲಕೃಷ್ಣ ತನ್ನೂರಿನ ಜನ ಉತ್ತಮವಾದ ವಾತಾವರಣದಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಯಲ್ಲಾಪುರ ಸರಕಾರಿ ಆಸ್ಪತ್ರೆಯ ಆವರಣದ ಒಂದು ಭಾಗದಲ್ಲಿ 12 ಲಕ್ಷ ವೆಚ್ಚದಲ್ಲಿ ವ್ಯಾಕ್ಸಿನ್ ಕೇಂದ್ರವನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಬಾಲಕೃಷ್ಣ ಇಲ್ಲಿನ ಅವ್ಯವಸ್ಥೆಯನ್ನ ನೋಡಿದ ಮೇಲೆ ವ್ಯಾಕ್ಸಿನ್ ಪಡೆಯುವವರು ಉತ್ತಮ ವಾತಾವರಣದಲ್ಲಿ ಪಡೆಯ ಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಕ್ಸಿನ್ ಕೇಂದ್ರ ನಿರ್ಮಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಇವರು ಯಲ್ಲಾಪುರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಜತೆ ಗುರುತಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಸೇವೆಯೇ ನನಗೆ ಪ್ರೇರಣೆ ಎನ್ನುವ ಇರುವ ಯಲ್ಲಾಪುರದ ಜನರ ಸಂಕಷ್ಟದ ಸಂದರ್ಭದಲ್ಲಿ ಯಾವ ಸಹಾಯಕ್ಕೂ ಸಿದ್ದ ಎನ್ನುತ್ತಿದ್ದಾರೆ.

ಇನ್ನೂ ಸರಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆಯಲು ಬರುವ ಜನರಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲವಂತೆ. ಒಂದೆಡೆ ಕೋವಿಡ್ ಸೋಂಕಿತರ ಮದ್ಯದಿಂದ ಹಾದು ಹೋಗಿ ವ್ಯಾಕ್ಸಿನ್ ಪಡೆಯ ಬೇಕಾದ ಸ್ಥಿತಿ ಇತ್ತಂತೆ. ಸರಕಾರದಿಂದ ಎಷ್ಟೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡ್ತಿವಿ ಅಂದರೂ ಅದು ಪ್ರಯೋಜನಕ್ಕೆ ಬಾರದ ಹಿನ್ನಲೆಯಲ್ಲಿ ಉತ್ತಮವಾದ ವ್ಯಾಕ್ಸೀನ್ ಕೇಂದ್ರವನ್ನೆ ನಿರ್ಮಿಸಿಕೊಡಬೇಕೆಂಬ ದೃಢ ಸಂಕಲ್ಪದೊಂದಿಗೆ ಬಾಲಕೃಷ್ಣ ವ್ಯಾಕ್ಸಿನ್ ಕೇಂದ್ರ ನಿರ್ಮಿಸಿಕೊಟ್ಟಿದ್ದಾರೆ..ಈಗ ವ್ಯಾಕ್ಸಿನ್ ಪಡೆಯಲು ಬಂದವರು ಖುಷಿ ಖುಷಿಯಾಗಿ ವ್ಯಾಕ್ಸಿನ್ ಪಡೆದು ಹೋಗುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಮತ್ತು ಖಾಸಗಿ ಟ್ರಸ್ಟ್ ವತಿಯಿಂದ ಸರಕಾರಿ ಆಸ್ಪತ್ರೆಗೆ ವೆಂಟಿಲೇಟರ್ ಹೊಂದಿದ 18 ಲಕ್ಷದ ಆಂಬುಲೆನ್ಸ್ ಕೂಡಾ ನೀಡಿದ್ದಾರೆ.

ಕೇವಲ ತನ್ನ ಹುಟ್ಟೂರು ಅಷ್ಟೆ ಅಲ್ಲದೆ ಅನ್ನ ನೀಡುತ್ತಿರುವ ಗೋವಾ ರಾಜ್ಯದ ಜನರಿಗೂ ಬಾಲಕೃಷ್ಣ ಅವರ ಕುಟುಂಬದ ಹೃದಯ ಮಿಡಿಯುತ್ತಿದೆ. ಗೋವಾ ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿ ನೂರಾರು ಸೋಂಕಿತರ ಪಾಲಿಗೆ ಆಶಾಕಿರಣವಾಗಿದ್ದಾರೆ. ನೂರಾರು ಸೋಂಕಿತರು ಉಚಿತವಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದಾರೆ.

ಒಟ್ಟಾರೆ ಊಟ ವಸತಿ ಹೀಗೆ ಹತ್ತಾರು ವಿಭಾಗದಲ್ಲಿ ದಾನ ಮಾಡುತ್ತಿರುವವರ ನಡುವೆ ಯಲ್ಲಾಪುರದ ಬಾಲಕೃಷ್ಣ ನಾಯ್ಕ್ ಅಪರೂಪದ ವ್ಯಕ್ತಿ ಎನ್ನಬಹುದು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ