Breaking News
Home / Uncategorized / ಹಿಂದಿನ ಬಾರಿಯ ಪ್ಯಾಕೇಜ್ ಇನ್ನೂ ತಲುಪಿಲ್ಲವೆಂಬ ವಿಪಕ್ಷಗಳ ಆರೋಪಕ್ಕೆ ಡಿಸಿಎಂ ಸ್ಪಷ್ಟನೆ

ಹಿಂದಿನ ಬಾರಿಯ ಪ್ಯಾಕೇಜ್ ಇನ್ನೂ ತಲುಪಿಲ್ಲವೆಂಬ ವಿಪಕ್ಷಗಳ ಆರೋಪಕ್ಕೆ ಡಿಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಿಶೇಷ ಪ್ಯಾಕೇಜ್​ ಘೋಷಣೆಯಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರ ಆರ್ಭಟ ಜೋರಾಗಿದೆ. ಕಳೆದ ಬಾರಿಯ ಪ್ಯಾಕೇಜ್​ ಇನ್ನೂ ಫಲಾನುಭವಿಗಳ ಕೈ ತಲುಪಿಲ್ಲ ಅಂತಾ ಆರೋಪಗಳು ಕೇಳಿ ಬರ್ತಿದೆ. ವಿಪಕ್ಷಗಳ ಈ ಆರೋಪವನ್ನ ಡಿಸಿಎಂ ಅಶ್ವತ್ಥ ನಾರಾಯಣ್​ ತಳ್ಳಿ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಈ ಆರ್ಥಿಕ ಪ್ಯಾಕೇಜ್​ನಲ್ಲಿ ಕೆಲವು ವಲಯಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ವಲಯಗಳಿಗೆ ಆದ್ಯತೆ ನೀಡುವ ಪ್ಯಾಕೇಜ್​ ಕೂಡ ಬರಲಿದೆ. ಆದರೆ ವಿಪಕ್ಷಗಳು ಕಳೆದ ಬಾರಿಯ ಪ್ಯಾಕೇಜ್​ ಫಲಾನುಭವಿಗಳ ಕೈ ತಲುಪಿಲ್ಲ ಎಂದು ಹೇಳ್ತಿದ್ದಾರೆ. ವಿಪಕ್ಷ ನಾಯಕರ ಈ ಆರೋಪ ಶುದ್ಧ ಸುಳ್ಳು. ನಮ್ಮ ಸರ್ಕಾರ ಜನರಿಗೆ ಸಹಾಯ ಧನವನ್ನು ನೀಡಿದೆ ಎಂದು ಹೇಳಿದರು.

ಇದೇ ವೇಳೆ ಲಾಕ್​ಡೌನ್​ ವಿಸ್ತರಣೆ ವಿಚಾರವಾಗಿಯೂ ಮಾತನಾಡಿದ ಅವರು, ಸಿಎಂ ಈಗಾಗಲೇ ತಿಳಿಸಿರುವಂತೆ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ 23ರಂದು ಚರ್ಚೆ ನಡೆಸುತ್ತೇವೆ.

ಲಾಕ್​ಡೌನ್​ ವಿಸ್ತರಣೆ ವಿಚಾರದಲ್ಲಿ ವಿಪಕ್ಷಗಳ ಸಲಹೆಯನ್ನೂ ಸ್ವೀಕರಿಸುತ್ತಿದ್ದೇವೆ. ಅಂದು ಪರಿಸ್ಥಿತಿಯನ್ನ ನೋಡಿಕೊಂಡು ರಾಜ್ಯಕ್ಕೆ ಲಾಕ್​ಡೌನ್​ ವಿಸ್ತರಣೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನ ತೀರ್ಮಾನಿಸ್ತೇವೆ ಎಂದು ತಿಳಿಸಿದರು.

ಜಾಗತಿಕ ಟೆಂಡರ್​ ಮೂಲಕ ಲಸಿಕೆ ಖರೀದಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅಶ್ವತ್ಥ ನಾರಾಯಣ್​, 18 ರಿಂದ 45 ವರ್ಷದ ಒಳಗಿನವರಿಗೆ ಲಸಿಕೆ ನೀಡಬೇಕು ಅಂದರೆ 6.5 ಕೋಟಿ ಡೋಸ್​ ಲಸಿಕೆಯ ಅವಶ್ಯಕತೆ ಇದೆ. ನಾವು ಈಗಾಗಲೇ 3.5 ಕೋಟಿ ಲಸಿಕೆಗೆ ಆರ್ಡರ್​ ನೀಡಿದ್ದೇವೆ. ಆದರೆ ಉಳಿದ ಲಸಿಕೆಗೆ ಏನಾದರೂ ವ್ಯವಸ್ಥೆ ಆಗಬೇಕು ಅಲ್ಲವಾ..? ಹೀಗಾಗಿ ಜಾಗತಿಕ ಟೆಂಡರ್​ ಕರೆಯಲು ನಿರ್ಧರಿಸಿದ್ದೇವೆ. ಯಾವುದಾದರೂ ದೇಶ ಲಸಿಕೆ ನೀಡಲು ಮುಂದಾದರೆ ಅದನ್ನ ನಾವು ಖರೀದಿ ಮಾಡ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ?

Spread the love ಬೆಳಗಾವಿ: ನಗರದ ಹೊರ ವಲಯದ ಕಣಬರ್ಗಿಯಲ್ಲಿ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ