Breaking News

ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

Spread the love

ಗೋಕರ್ಣ: ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಪೂಜೆ ಮಾಡುತ್ತ ಬಂದಿರುವ ಕುಟುಂಬವೊಂದಕ್ಕೆ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸ್‌ ದೂರು ದಾಖಲಿಸಲಾಗಿದೆ.

ಮೇ 9ರಂದು ಬೆಳಗ್ಗೆ ರವಿ ಮಹಾದೇವ ಅಡಿ ಹಾಗೂ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದಾಗ 11 ಮಂದಿ ಅಡ್ಡಗಟ್ಟಿ ನಿಂದಿಸಿ ದರು.

Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

ನಿಮಗೆ ಪೂಜೆಯ ಯಾವುದೇ ಹಕ್ಕಿಲ್ಲ ಎಂದು ಹೇಳಿ ಗರ್ಭಗುಡಿಯಿಂದ ಹೊರಹಾಕಿ, ಮತ್ತೆ ದೇವಸ್ಥಾನದ ಕಡೆಗೆ ಬಾರದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕೃಷ್ಣ ಗಣಪತಿ ಜಂಬೆ, ಶ್ರೀಧರ ಬಾಲಕೃಷ್ಣ ಜಂಬೆ, ಗಣೇಶ ಪರಮೇಶ್ವರ ಜಂಬೆ, ಪರಮೇಶ್ವರ ಗಣೇಶ ಜಂಬೆ, ಗೋಪಾಲ ವಿನೋದ ಜಂಬೆ, ಸುಬ್ರಹ್ಮಣ್ಯ ವಿಶ್ವನಾಥ ಹೆಗಡೆ, ದತ್ತಾತ್ರೇಯ ನಾರಾಯಣ ಭಟ್‌, ಅಮೃತೇಶ ಶಿತಿಕಂಠ ಹಿರೇ, ಮಹಾಬಲೇಶ್ವರ ಬಾಲಕೃಷ್ಣ ಭಡ್ತಿ, ಪರಮೇಶ್ವರ ಸುಬ್ರಹ್ಮಣ್ಯ ಮಾರ್ಕಾಂಡೆ, ಕಾಮೇಶ್ವರ ಮಾಸ್ಕೇರಿ ವಿರುದ್ಧ ರವಿ ಮಹಾದೇವ ಅಡಿ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ