Breaking News
Home / ಮೂಡಲಗಿ / ಜಿಯೋದಿಂದ ಎರಡು ಹೊಸ ಸಬ್‌ಸೀ ಕೇಬಲ್ ವ್ಯವಸ್ಥೆ ಯೋಜನೆ

ಜಿಯೋದಿಂದ ಎರಡು ಹೊಸ ಸಬ್‌ಸೀ ಕೇಬಲ್ ವ್ಯವಸ್ಥೆ ಯೋಜನೆ

Spread the love

ಮುಂಬೈ, : ಭಾರತದ ಮುಂಚೂಣಿ 4ಜಿ ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ಡಿಜಿಟಲ್ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (ಜಿಯೋ), ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಅತಿ ದೊಡ್ಡ ಅಂತಾರಾಷ್ಟ್ರೀಯ ಜಲಾಂತರ್ಗಾಮಿ (ಸಬ್‌ಮೆರಿನ್) ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ವಿವಿಧ ಪ್ರಮುಖ ಜಾಗತಿಕ ಪಾಲುದಾರರು ಮತ್ತು ವಿಶ್ವದರ್ಜೆಯ ಜಲಾಂತರ್ಗಾಮಿ ಕೇಬಲ್ ಪೂರೈಕೆದಾರ ಸಬ್‌ಕಾಮ್ ಸಹಯೋಗದೊಂದಿಗೆ ಜಿಯೋ ಪ್ರಸ್ತುತ ಪ್ರದೇಶದೆಲ್ಲೆಡೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಡೇಟಾ ಬೇಡಿಕೆಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಮುಂದಿನ ತಲೆಮಾರಿನ ಎರಡು ಕೇಬಲ್‌ ವ್ಯವಸ್ಥೆಗಳನ್ನು ಅಳವಡಿಸುತ್ತಿದೆ.
ಇಂಡಿಯಾ-ಏಷ್ಯಾ-ಎಕ್ಸ್‌ಪ್ರೆಸ್ (ಐಎಎಕ್ಸ್) ವ್ಯವಸ್ಥೆಯು, ಭಾರತವನ್ನು ಪೂರ್ವಾಭಿಮುಖವಾಗಿ ಸಿಂಗಪುರ ಹಾಗೂ ಅದರಾಚೆಗೂ ಸಂಪರ್ಕಿಸುತ್ತದೆ. ಇಂಡಿಯಾ-ಯುರೋಪ್-ಎಕ್ಸ್‌ಪ್ರೆಸ್ (ಐಇಎಕ್ಸ್) ವ್ಯವಸ್ಥೆಯು, ಪಶ್ಚಿಮಾಭಿಮುಖವಾಗಿ ಭಾರತವನ್ನು ಮಧ್ಯಪ್ರಾಚ್ಯ ಹಾಗೂ ಯುರೋಪ್ ಜತೆ ಸಂಪರ್ಕಿಸಲಿದೆ. ಈ ವ್ಯವಸ್ಥೆ ತಡೆರಹಿತ ಅಂತರ್ ಸಂಪರ್ಕ ಹೊಂದಿರಲಿದೆ. ಜತೆಗೆ ಸೇವೆಯನ್ನು ಜಾಗತಿಕವಾಗಿ ವಿಸ್ತರಿಸಲು ಜಗತ್ತಿನ ಪ್ರಮುಖ ಅಂತರ್ ವಿನಿಮಯ ಬಿಂದುಗಳು ಮತ್ತು ವಿಚಾರ ಕೇಂದ್ರಗಳನ್ನು ಸಂಪರ್ಕಿಸಲಿದೆ.

ಭಾರತದ ಒಳಗೆ-ಹೊರಗೆ ಮಾಹಿತಿ ಹಾಗೂ ಕ್ಲೌಡ್ ಸೇವೆಗಳಿಗೆ ಗ್ರಾಹಕ ಮತ್ತು ಉದ್ಯಮ ಬಳಕೆದಾರರ ಸಾಮರ್ಥ್ಯವನ್ನು ಐಎಎಕ್ಸ್ ಮತ್ತು ಐಇಎಕ್ಸ್ ವೃದ್ಧಿಸಲಿವೆ.
ಫೈಬರ್ ಆಪ್ಟಿಕ್ ಸಬ್‌ಮೆರಿನ್ ಟೆಲಿಕಮ್ಯುನಿಕೇಷನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನೆಟ್‌ವರ್ಕ್ ನಕ್ಷೆಯಲ್ಲಿ ಭಾರತವನ್ನು ಕೇಂದ್ರವನ್ನಾಗಿಸಿವೆ. 2016ರಲ್ಲಿ ಜಿಯೋ ಸೇವೆಗಳು ಆರಂಭವಾದಾಗಿನಿಂದ ಭಾರತಕ್ಕೆ ಹೆಚ್ಚಿದ ಪ್ರಾಮುಖ್ಯ, ಬೆರಗು ಮೂಡಿಸುವ ಬೆಳವಣಿಗೆ ಮತ್ತು ಡೇಟಾ ಬಳಕೆಯಲ್ಲಿನ ಬೃಹತ್ ಬದಲಾವಣೆಯನ್ನು ಇದು ಗುರುತಿಸಿದೆ.

ಈ ಅಧಿಕ ಸಾಮರ್ಥ್ಯದ ಮತ್ತು ಅಧಿಕ ವೇಗದ ವ್ಯವಸ್ಥೆಗಳು 16,000 ಕಿಮೀಗೂ ಅಧಿಕ ದೂರದವರೆಗೆ 200 ಟಿಬಿಪಿಎಸ್‌ಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಒದಗಿಸಲಿವೆ.
‘ಡಿಜಿಟಲ್ ಸೇವೆಗಳು ಮತ್ತು ಡೇಟಾ ಬಳಕೆಯಲ್ಲಿನ ಭಾರತದ ಸ್ಫೋಟಕ ಪ್ರಗತಿಯಲ್ಲಿ ಜಿಯೋ ಮುಂಚೂಣಿಯಲ್ಲಿದೆ. ವಿಡಿಯೋ ಸ್ಟ್ರೀಮಿಂಗ್, ರಿಮೋಟ್ ವರ್ಕ್‌ಫೋರ್ಸ್, 5ಜಿ, ಐಒಟಿ ಹಾಗೂ ಮುಂತಾದ ಬೇಡಿಕೆಗಳನ್ನು ಈಡೇರಿಸಲು, ತನ್ನ ಪ್ರಪ್ರಥಮ ಭಾರತ-ಕೇಂದ್ರಿತ ಐಎಎಕ್ಸ್ ಮತ್ತು ಐಇಎಕ್ಸ್ ಸಬ್‌ಸೀ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾಳತ್ವ ತೆಗೆದುಕೊಳ್ಳುತ್ತಿದೆ’ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್ ಹೇಳಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ