Breaking News
Home / ರಾಜಕೀಯ / ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟ ಪ್ರಧಾನಿ ಮೋದಿ

ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟ ಪ್ರಧಾನಿ ಮೋದಿ

Spread the love

ನವದೆಹಲಿ: ಕರೊನಾ ವೈರಸ್​ ಬಿಕ್ಕಟ್ಟು ಹಿನ್ನೆಲೆಯಲ್ಲಿ 9 ರಾಜ್ಯಗಳ ಸಿಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟರು.

ಕರೊನಾ ನಿಯಂತ್ರಿಸಲು ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕು. ಕರೊನಾ ವಾರಿಯರ್ಸ್​ಗೆ ಸ್ಫೂರ್ತಿ ತುಂಬಿರಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಾರಿಯರ್ಸ್​ಗೆ ವಿಶ್ವಾಸ ಹೆಚ್ಚುತ್ತದೆ. ಕರೊನಾ ನಿಯಂತ್ರಿಸಲು ಯಾವುದೇ ಮಾರ್ಗವಿದ್ದರೂ ಅದನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ನಿಮ್ಮ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕೆಲಸವನ್ನು ಶ್ಲಾಘಿಸಿದರು.

ಇದೇ ವೇಳೆ ಕರೊನಾ ನಿಯಂತ್ರಿಸಲು ಮೂರು T ಸೂತ್ರಗಳ ಸಲಹೆ ನೀಡಿದ ಪ್ರಧಾನಿ ಮೋದಿ, ಟ್ರೇಸಿಂಗ್​, ಟೆಸ್ಟಿಂಗ್​ ಮತ್ತು ಟ್ರೀಟ್ಮೆಂಟ್​ ಮೂಲಕ ಕರೊನಾ ನಿಯಂತ್ರಿಸಬಹುದು ಎಂದರು.

ಪ್ರತಿಯೊಬ್ಬರ ಜೀವ ಉಳಿಸುವುದು ನಮ್ಮ ಕರ್ತವ್ಯ. ನಿಮ್ಮ ಜಿಲ್ಲೆಗಳಲ್ಲಿ ತೆಗೆದುಕೊಂಡ ಕ್ರಮ ಬೇರೆ ಜಿಲ್ಲೆಗಳಿಗೂ ಮಾದರಿ. ಹೀಗಾಗಿ ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳೇ ತೆಗೆದುಕೊಳ್ಳಬಹುದೆಂದು ಪ್ರಧಾನಿ ಮೋದಿ ಹೇಳಿದರು.

ಇತರೆ ಜಿಲ್ಲೆಗಳಲ್ಲೂ ಕರೊನಾ ನಿಯಂತ್ರಿಸಲು ಸಹಕರಿಸಿ, ಕರೊನಾ ತಡೆಗಟ್ಟಲು ಲಸಿಕೆಯೇ ಪ್ರಬಲ ಅಸ್ತ್ರವೆಂದರು. ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಫ್ರೀ ಹ್ಯಾಂಡ್​ ಕೊಟ್ಟರು. ಡಿಸಿಗಳೇ ಫೀಲ್ಡ್​ ಮಾರ್ಷಲ್​ಗಳು ಎಂದು ಹೊಗಳಿದರು.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ