Breaking News
Home / Uncategorized / ತಾಯಿನಾಡ ಜನರ ಸಂಕಷ್ಟಕ್ಕೆ ಮಿಡಿದ ಸಾಗರದಾಚೆ ಕನ್ನಡಿಗರು; ದುಬೈನಿಂದ ಕರ್ನಾಟಕಕ್ಕೆ ಹರಿದು ಬಂತು ಸಹಾಯ ಹಸ್ತ

ತಾಯಿನಾಡ ಜನರ ಸಂಕಷ್ಟಕ್ಕೆ ಮಿಡಿದ ಸಾಗರದಾಚೆ ಕನ್ನಡಿಗರು; ದುಬೈನಿಂದ ಕರ್ನಾಟಕಕ್ಕೆ ಹರಿದು ಬಂತು ಸಹಾಯ ಹಸ್ತ

Spread the love

ಬೆಂಗಳೂರು: ಕೊರೊನಾ ಎರಡನೇ ಅಲೆ ಭಾರತದಲ್ಲಿ ಬಹಳ ವೇಗದಲ್ಲಿ ಮತ್ತು ಬಹಳ ಅಪಾಯಕಾರಿಯಾಗಿ ಹರಡುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಕೊವಿಡ್ ಕಾರಣ ಸಾವು-ನೋವುಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಕರ್ನಾಟಕವನ್ನು ಲಾಕ್​ಡೌನ್ ಮಾಡಲಾಗಿದೆ. ಇದರಿಂದಾಗಿ ದಿನಗೂಲಿ ಜನರು ಮತ್ತು ನಿರ್ಗದಿಕರು ಸೇರಿ ಹಲವು ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಕೆಲವರಿಗೆ ಒಂದೊತ್ತಿನ ಊಟಕ್ಕೆ ಸಹ ಇಲ್ಲದ ಪರಿಸ್ಥಿತಿ ಇದ್ದು, ಇಂತಹರವರ ನೆರವಿಗೆ ಈಗ ದುಬೈನ ಕನ್ನಡಿಗರು ನಿಂತಿದ್ದಾರೆ.

ದುಬೈನಲ್ಲಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಕನ್ನಡಿಗರು ಎಂಬ ಕನ್ನಡ ಸಂಘವು ಕಳೆದ ಹಲವು ದಿನಗಳಿಂದ ಆಹಾರ ಪೊಟ್ಟಣಗಳು ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥದ ರೇಷನ್ ಕಿಟ್ ವಿತರಿಸುತ್ತಿದೆ. ಈಗಾಗಲೇ ಇವರು ಬೆಂಗಳೂರಿನ ಮತ್ತು ಮೈಸೂರಿನ ಹಲವು ಭಾಗಗಳಲ್ಲಿ ಊರಿನಲ್ಲಿರುವ ತಮ್ಮ ಸ್ನೇಹಿತರು ಮತ್ತು ಸಂಘ-ಸಂಸ್ಥೆಗಳ ಮೂಲಕ ಹಸಿದವರಿಗೆ ಊಟ ತಲುಪಿಸುತ್ತಿದ್ದಾರೆ.

ಹೆಮ್ಮೆಯ ಕನ್ನಡಿಗರು ತಂಡದ ಸದಸ್ಯರಾದ ಹಾದಿಯ ಮಂಡ್ಯ ಅವರ ಮಗನಾದ ಅಸಿಫ್ ಅವರ ಮುಂದಾಳತ್ವದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಹಾರ ಕಿಟ್ ವಿತರಣೆ ನಡೆಯಿತು. ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಶ್ರೀಮತಿ ಮಮತಾ, ಮೈಸೂರು ಸಂಚಾಲಕರಾದ ಸುದೀಪ್ ದಾವಣಗೆರೆ, ರಫೀಕಲಿ ಕೊಡಗು, ಕಾರ್ಯದರ್ಶಿ ಸೆಂತಿಲ್ ಬೆಂಗಳೂರು, ಸಮಿತಿ ಸದಸ್ಯರುಗಳಾದ ವಿಷ್ಣುಮೂರ್ತಿ ಮೈಸೂರು, ಶ್ರೀಮತಿ ಮಮತಾ ಶಾರ್ಜಾ, ಶ್ರೀಮತಿ ಪಲ್ಲವಿ ದಾವಣಗೆರೆ, ಶ್ರೀಮತಿ ಹಾದಿಯ ಮಂಡ್ಯ, ಡಾ. ಸವಿತಾ ಮೈಸೂರು, ಶ್ರೀಮತಿ ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ಹಾಗೂ ಉಪಸಮಿತಿ ಸದಸ್ಯರುಗಳ ಪರಿಶ್ರಮದಿಂದ ದುಬೈಯಲ್ಲಿರುವ ಕನ್ನಡಿಗ ದಾನಿಗಳ ಸಹಾಯದಿಂದ ಈ ಕಾರ್ಯ ಮಾಡಲು ಸಾಧ್ಯವಾಯಿತು.

ಕಳೆದ ವರ್ಷ ದುಬೈಯಲ್ಲಿ ಲಾಕ್​ಡೌನ್ ಸಮಯದಲ್ಲಿ 19ಲಕ್ಷ ರೂಪಾಯಿಗಳ ಆಹಾರ ಕಿಟ್ ವಿತರಿಸಿದ್ದಲ್ಲದೆ, ಸಂಕಷ್ಟದಲ್ಲಿದ್ದವರಿಗೆ ತಾಯಿನಾಡಿಗೆ ಮರಳಲು ಉಚಿತ ವಿಮಾನ ಟಿಕೆಟ್, ಉಚಿತ ಚಿಕಿತ್ಸೆ ಮುಂತಾದ ಕಾರ್ಯಗಳನ್ನು ಮಾಡಿದ್ದರು. ಅದನ್ನೆ ಮುಂದು ವರಿಸಿದ ಈ ತಂಡ ಈ ಬಾರಿ ಆಹಾರ ಕಿಟ್​ ನೀಡಿದೆ. ಇನ್ನು ಮುಂದೆ ತಾಯಿನಾಡಿಗೆ ದುಬೈಯಿಂದ ಆಕ್ಸಿಜನ್ ತಲುಪಿಸುವ ಪ್ರಯತ್ನದಲ್ಲಿದ್ದಾರೆ ಎನ್ನುವುದು ಸಂತೋಷದ ವಿಚಾರ.


Spread the love

About Laxminews 24x7

Check Also

ನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ!

Spread the loveನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ