Home / ರಾಜಕೀಯ / ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

Spread the love

ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಮೊದಲ ದಿನ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. ಆದರೆ, ವಿಮರ್ಶಕರಿಂದ ಸಿನಿಮಾಗೆ ಮೆಚ್ಚುಗೆ ಬಂದಿಲ್ಲ. ಇದು ಸಲ್ಮಾನ್​ ಖಾನ್​ ಅವರನ್ನು ಅಪ್ಸೆಟ್​ ಮಾಡಿದೆ. ಹೀಗಾಗಿ, ಅವರು ದಕ್ಷಿಣ ಭಾರತದ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ.

2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ 3’ ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ, ರಾಧೆ ಸಿನಿಮಾ ಮೂಲಕ ಅವರಿಗೆ ಯಶಸ್ಸು ಗಳಿಸೋದು ಅನಿವಾರ್ಯವಾಗಿತ್ತು. ಆದರೆ, ಸಲ್ಲು ಲೆಕ್ಕಾಚಾರ ತಲೆಕೆಳಗಾಗಿದೆ. ರಾಧೆ ಸಿನಿಮಾ ಕೂಡ ವಿಮರ್ಶೆಯಲ್ಲಿ ಸೋತಿದೆ. ಇದು ಸಲ್ಲುಗೆ ಆತಂಕ ಸೃಷ್ಟಿಸಿದೆ.

ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ದೊಡ್ಡ ಸ್ಟಾರ್​ಡಮ್​ ಹೊಂದಿರುವ ನಟ. ಸತತವಾಗಿ ನಾಲ್ಕು ಸಿನಿಮಾ ಸೋತ ಹೊರತಾಗಿಯೂ ಅವರ ಚಿತ್ರಕ್ಕೆ ಬಂಡವಾಳ ಹೂಡೋಕೆ ನಿರ್ಮಾಪಕರು ಮುಂದೆ ಬರುತ್ತಾರೆ. ಇದು ದೊಡ್ಡ ವಿಚಾರವೇ ಅಲ್ಲ. ಆದರೆ, ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಸೋಲು ಕಂಡರೆ ಸ್ಟಾರ್​ಡಮ್​ ಹಾಗೂ ಅಭಿಮಾನಿ ಬಳಗ ಕಡಿಮೆ ಆಗಬಹುದು ಎನ್ನುವ ಭಯ ಸಲ್ಲು ಅವರದ್ದು. ಇದೇ ಕಾರಣಕ್ಕೆ ಅವರು ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ತೆಲುಗಿನ ಹಿಟ್​ ಚಿತ್ರವನ್ನು ಬಾಲಿವುಡ್​ಗೆ ರಿಮೇಕ್​ ಮಾಡೋಕೆ ಮುಂದಾಗಿದ್ದಾರೆ.

ಸಲ್ಮಾನ್​ ಖಾನ್​ ಟಾಲಿವುಡ್​ ಸಿನಿಮಾ ಮೊರೆ ಹೋಗಿದ್ದು ಇದೇ ಮೊದಲೇನಲ್ಲ. 2009ರಲ್ಲಿ ತೆರೆಗೆ ಬಂದಿದ್ದ ಕಿಕ್​ ಚಿತ್ರವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್​ ಮಾಡಿ ಯಶಸ್ಸು ಕಂಡಿದ್ದರು. ಇನ್ನು ತೆಲುಗಿನ ಅರ್ಜುನ್​ ರೆಡ್ಡಿ, ಟೆಂಪರ್​ ಚಿತ್ರಗಳು ಬಾಲಿವುಡ್​ಗೆ ರಿಮೇಕ್​ ಆಗಿ ಯಶಸ್ಸು ಗಳಿಸಿವೆ. ಹೀಗಾಗಿ, ಈ ವಿಚಾರದ ಮೇಲೆ ಸಲ್ಲು ಸಾಕಷ್ಟು ಆಸ್ತೆ ವಹಿಸಿದ್ದಾರೆ.

ಇದೇ ಕಾರಣಕ್ಕೆ ತೆಲುಗಿನ ಹಿಟ್​ ಚಿತ್ರವೊಂದನ್ನು ಗುರುತಿಸಿ ಅದನ್ನು ಹಿಂದಿಗೆ ರಿಮೇಕ್​ ಮಾಡುವ ಆಲೋಚನೆ ಸಲ್ಮಾನ್​ ಖಾನ್​ ಅವರದ್ದು. ವಿಶೇಷ ಎಂದರೆ, ಸಲ್ಮಾನ್​ ಖಾನ್​ ಅವರೇ ಸಿನಿಮಾ ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರು ಯಾವ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ.

ರಾಧೆ ಸಿನಿಮಾ ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಒಟಿಟಿ ಹಾಗೂ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್​ ಆಗಿತ್ತು. ಆದರೆ, ವಿಮರ್ಶೆಯಲ್ಲಿ ಸಿನಿಮಾ ಸೋತಿತ್ತು. ರಾಧೆ ಚಿತ್ರಕ್ಕೆ ಐಎಂಡಿಬಿ 10 ಅಂಕಕ್ಕೆ ಕೇವಲ 2.4 ರೇಟಿಂಗ್​ ನೀಡಿತ್ತು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ