Breaking News

ವಿಮಾನ ನಿಲ್ದಾಣ: ಕಲಬುರಗಿಯ ಜನರಿಗೆ ಎಎಐನಿಂದ ಸಿಹಿಸುದ್ದಿ

Spread the love

ಲಬುರಗಿ, ಮೇ 18: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಕಲಬುರಗಿ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ನಗರದ ಸೇಡಂ ರಸ್ತೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಇದ್ದು, 2022ರಲ್ಲಿ ಲೋಕಾರ್ಪಣೆಗೊಂಡಿದೆ.ವಿಮಾನ ನಿಲ್ದಾಣ: ಕಲಬುರಗಿಯ ಜನರಿಗೆ ಎಎಐನಿಂದ ಸಿಹಿಸುದ್ದಿ

ವಿಮಾನ ನಿಲ್ದಾಣಗಳ ಪ್ರಾಧಿಕಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸ್ಟಿಸ್ಟಮ್ (ಐಎಲ್‌ಎಸ್) ಬಳಕೆಗೆ ಚಾಲನೆ ನೀಡಿದೆ.

ಎಎಐ ಜಂಟಿ ಪ್ರಧಾನ ವ್ಯವಸ್ಥಾಪಕ (ಸಿಎನ್‌ಎಸ್) ಆರ್. ದಿವಾಕರ್ ಈ ಸೌಲಭ್ಯಕ್ಕೆ ಚಾಲನೆ ನೀಡಿದರು.ಸುಮಾರು 12.12 ಕೋಟಿ ರೂ. ವೆಚ್ಚ ಮಾಡಿ ಎಐಎ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಿದೆ.

ಇದರ ಮೂಲಕ ರಾತ್ರಿ ವಿಮಾನ ಲ್ಯಾಂಡ್ ಆಗಲು ಸಹಾಯಕವಾಗುವ ಜೊತೆಗೆ ಪ್ರತಿಕೂಲ ಹವಮಾನದಲ್ಲಿಯೂ ವಿಮಾನ ಸುಲಭವಾಗಿ ಭೂಸ್ಪರ್ಶ ಮಾಡಬಹುದಾಗಿದೆ.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ