Breaking News
Home / ರಾಜಕೀಯ / ಒಂದೆಡೆ ಮೃತದೇಹ ತುಂಬಿರುವ ಅಂಬುಲೆನ್ಸ್‍ಗಳ ಸಾಲಾದ್ರೆ ಮತ್ತೊಂದೆಡೆ ಸಾವನ್ನಪ್ಪಿದ ಸೋಂಕಿತರ ಕುಟುಂಬಸ್ಥರ ನರಳಾಟ

ಒಂದೆಡೆ ಮೃತದೇಹ ತುಂಬಿರುವ ಅಂಬುಲೆನ್ಸ್‍ಗಳ ಸಾಲಾದ್ರೆ ಮತ್ತೊಂದೆಡೆ ಸಾವನ್ನಪ್ಪಿದ ಸೋಂಕಿತರ ಕುಟುಂಬಸ್ಥರ ನರಳಾಟ

Spread the love

ಬೆಂಗಳೂರು: ಮೇಡಿ ಅಗ್ರಹಾರದ ಸ್ಥಿತಿ ನೋಡೋವಾಗಲೇ ದುಃಖದ ಕಟ್ಟೆಯೊಡೆಯುತ್ತೆ. ಒಂದೆಡೆ ಮೃತದೇಹ ತುಂಬಿರುವ ಅಂಬುಲೆನ್ಸ್‍ಗಳ ಸಾಲಾದ್ರೆ ಮತ್ತೊಂದೆಡೆ ಸಾವನ್ನಪ್ಪಿದ ಸೋಂಕಿತರ ಕುಟುಂಬಸ್ಥರ ನರಳಾಟ. ಮೇಡಿ ಅಗ್ರಹಾರದಲ್ಲಿರೋ ಚಿತಾಗಾರದಲ್ಲಿ ಕಣ್ಣೀರ ಕಥೆಗಳು. ಒಂದೊಂದು ದೃಶ್ಯಗಳು ಘನಘೋರ. ಇಲ್ಲಿನ ಸ್ಮಶಾನಕ್ಕೆ ಪ್ರತಿದಿನ ಸಾಲುಗಳಿರುತ್ತೆ.

ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಹಗಲಿರುಳು ಸುಟ್ಟರೂ, ಶವಗಳ ಸಂಖ್ಯೆ ಕಡಿಮೆ ಆಗ್ತಾನೆ ಇಲ್ಲ. ಶವ ಹೊತ್ತ ಅಂಬುಲೆನ್ಸ್ ಸಾಲು ಕರಗುತ್ತಲೇ ಇಲ್ಲ. ನಿನ್ನೆ ಕೂಡ ಅಂಬುಲೆನ್ಸ್‍ಗಳ ಸಾಲು ಕಂಡುಬಂತು. ಹತ್ತಿಪ್ಪತ್ತಕ್ಕೂ ಹೆಚ್ಚು ಅಂಬುಲೆನ್ಸ್‍ಗಳು ಮೃತದೇಹದೊಂದಿಗೆ ಸಾಲಾಗಿ ನಿಂತಿತ್ತು. ಮೇಡಿ ಅಗ್ರಹಾರದ ಬಳಿ ಕುಟುಂಬಸ್ಥರು ಕಣ್ಣೀರು ಹಾಕೋ ದೃಶ್ಯ ಸಾಮಾನ್ಯ ಆಗೋಗಿದೆ.

ಮೃತ ಸೋಂಕಿತನ ಸಂಬಂಧಿಯೊಬ್ಬರು ಅಳುತ್ತಾ, 36 ಆಸ್ಪತ್ರೆ ಸುತ್ತಿ ಬಂದೆ. ಎಲ್ಲೂ ಬೆಡ್ ಸಿಗಲಿಲ್ಲ. ನನ್ನ ಮಾವನ ಉಳಿಸಿಕೊಳ್ಳೋಕೆ ಆಗಲಿಲ್ಲ. ಈಗ ಸ್ಮಶಾನಕ್ಕೆ ಮೃತದೇಹ ತಂದಿದ್ದೀನಿ ಅಂದ್ರು. ಅಂಬುಲೆನ್ಸ್ ಡ್ರೈವರ್‍ರೊಬ್ಬರ ಮಾತು ಕರುಳು ಹಿಂಡುವಂತಿತ್ತು. ನಂಗೆ ದುಡ್ಡು ಬೇಡ, ಸಿಎಂ ಸಾಹೇಬ್ರೇ ಪ್ಲೀಸ್ ಬೆಡ್ ಕೊಡ್ಸಿ. ರೋಗಿಗಳಿಗಿಂತ ಮೃತದೇಹವನ್ನು ಸಾಗಿಸಿ ಸಾಕಾಗಿದೆ ಅಂತಾ ಮನವಿ ಮಾಡಿದ್ರು.

ಇದರ ನಡುವೆ ಯಲಹಂಕ ಮೇಡಿ ಚಿತಾಗಾರದ ಬಳಿ ಅಂಬುಲೆನ್ಸ್ ಡ್ರೈವರ್ ಪಿಪಿಇ ಕಿಟ್ ಹಾಕದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ರು. ಪಿಪಿಇ ಕಿಟ್ ಹಾಕಿಕೊಳ್ಳದಿದ್ರೆ ಊರೊಳಗೆ ಬಿಡಲ್ಲ ಅಂದ್ರು. ಮತ್ತೊಂದೆಡೆ ಅಂತ್ಯಸಂಸ್ಕಾರಕ್ಕೂ ಪ್ಯಾಕೇಜ್ ಅಂತಾ ವರದಿ ಮಾಡಿ ಚಿತಾಗಾರದ ಬಳಿ ಹಣ ಪಡೆಯೋದಕ್ಕೆ ಪಬ್ಲಿಕ್ ಟಿವಿ ಬ್ರೇಕ್ ಹಾಕಿತ್ತು. ಈಗ ಸ್ವತಃ ಜನರೇ ಇಲ್ಲಿ ಎಚ್ಚೆತ್ತಿದ್ದಾರೆ. ಹಣ ತೆಗೆದುಕೊಳ್ಳೋದಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಲ್ಲಿ ಅಂಬುಲೆನ್ಸ್‍ಗಳ ಸಾಲು ಕರಗುತ್ತಲೇ ಇಲ್ಲ. ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ನಿಲ್ಲುತ್ತಲೇ ಇಲ್ಲ. ಇದೆಲ್ಲವನ್ನು ನೋಡಿದ್ರೆ ಕರುಳು ಹಿಂಡಿದಂತೆ ಆಗುತ್ತೆ. ಜನರೇ ಕೊರೊನಾ ಅಂತಾ ಮೈಮರೆಯಬೇಡಿ, ಎಚ್ಚರವಾಗಿರಿ


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ