Breaking News
Home / ರಾಜ್ಯ / ಬ್ಯಾಂಕ್ ಗ್ರಾಹಕರೇ ಗಮನಿಸಿ.! ಸಾಲು ಸಾಲು ರಜೆ ಸೇರಿ ಈ ತಿಂಗಳು ಬರೋಬ್ಬರಿ 15 ದಿನ ಬ್ಯಾಂಕ್ ಗಳು ಬಂದ್

ಬ್ಯಾಂಕ್ ಗ್ರಾಹಕರೇ ಗಮನಿಸಿ.! ಸಾಲು ಸಾಲು ರಜೆ ಸೇರಿ ಈ ತಿಂಗಳು ಬರೋಬ್ಬರಿ 15 ದಿನ ಬ್ಯಾಂಕ್ ಗಳು ಬಂದ್

Spread the love

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆ ಸೇರಿದಂತೆ ದೇಶಾದ್ಯಂತ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಏಪ್ರಿಲ್ ತಿಂಗಳಲ್ಲಿ 15 ದಿನ ರಜೆ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಜಾದಿನಗಳ ಕ್ಯಾಲೆಂಡರ್ ತಿಳಿಸಿದೆ. ಆದರೆ, ಈ ರಜೆಗಳು ಆಯಾ ಪ್ರದೇಶ ಮತ್ತು ರಾಜ್ಯಗಳಿಗೆ ಅನ್ವಯವಾಗುವಂತೆ ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿದೆ.

ರಜಾದಿನಗಳ ಪಟ್ಟಿ

ಏಪ್ರಿಲ್ 1 ಬ್ಯಾಂಕುಗಳು ವಾರ್ಷಿಕ ಖಾತೆ ಮುಚ್ಚಲು ಅನುವು ಮಾಡಿಕೊಡುವುದು

ಏಪ್ರಿಲ್ 2 ಗುಡ್ ಫ್ರೈಡೇ

ಏಪ್ರಿಲ್ 5 ಬಾಬು ಜಗಜೀವನ ರಾಮ್ ಜಯಂತಿ

ಏಪ್ರಿಲ್ 6 ತಮಿಳುನಾಡು ವಿಧಾನಸಭೆ ಸಾರ್ವತ್ರಿಕ ಚುನಾವಣೆ

ಏಪ್ರಿಲ್ 13 ಗುಡಿ ಪಾಡ್ವ, ಉಗಾದಿ ಉತ್ಸವ, ತೆಲುಗು ಹೊಸ ವರ್ಷದ ದಿನ

ಏಪ್ರಿಲ್ 14 ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಹಿಮಾಚಲ ದಿನ, ಬಂಗಾಳ ಹೊಸ ವರ್ಷದ ದಿನ

ಏಪ್ರಿಲ್ 16 ಬೋಹಾಗ್ ಬಿಹು

ಏಪ್ರಿಲ್ 21 ಏಪ್ರಿಲ್ ಶ್ರೀರಾಮನವಮಿ

ಏಪ್ರಿಲ್ 4, 11, 18, 25 ಭಾನುವಾರ

ಏಪ್ರಿಲ್ 10 ಮತ್ತು 24 ರಂದು 2 ಮತ್ತು 4 ನೇ ಶನಿವಾರ

ಹೀಗೆ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ನಗದು ಠೇವಣಿ, ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್, ಸಾಲ ಸೇರಿದಂತೆ ತಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ