Breaking News
Home / ಜಿಲ್ಲೆ / ಬೆಂಗಳೂರು / ಸುಖಾ ಸುಮ್ಮನೆ ಬೈಕ್​ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ: ಚಾಟಿ ಬೀಸಿದ್ದಾರೆ ಕಮಲ್​ ಪಂತ್​

ಸುಖಾ ಸುಮ್ಮನೆ ಬೈಕ್​ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ: ಚಾಟಿ ಬೀಸಿದ್ದಾರೆ ಕಮಲ್​ ಪಂತ್​

Spread the love

ಬೆಂಗಳೂರು: ಸುಖಾ ಸುಮ್ಮನೆ ಬೈಕ್​ಗಳನ್ನು ಎಳೆದೊಯ್ದು, ಯಾಕೆ ಎಂದು ಕೇಳಿದವರ ಮೇಲೆ ದರ್ಪ ತೋರುತ್ತಿದ್ದ ಟೋಯಿಂಗ್​ ಸಿಬ್ಬಂದಿಗೆ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಚಾಟಿ ಬೀಸಿದ್ದಾರೆ.

ಈ ಹಿಂದಿನ ಕಮಿಷನರ್​ ಭಾಸ್ಕರ್​ ರಾವ್ ಟೋಯಿಂಗ್​ ಸಮಸ್ಯೆಗೆ ಮುಕ್ತಿ ನೀಡುವ ಸಲವಾಗಿ ಟೋಯಿಂಗ್​ ಮಾಡುವ ಸಿಬ್ಬಂದಿ ಗಾಡಿ ಎಳೆದೊಯ್ಯುವಾಗ ಅನೌನ್ಸ್​ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಅದನ್ನ ಯಥಾಪ್ರಕಾರವಾಗಿ ಎರಡು ದಿನ ಫಾಲೋ ಮಾಡಿದ ಸಿಬ್ಬಂದಿ, ಮತ್ತೆ ತಮ್ಮ ಚಾಳಿ ಮುಂದುವರೆಸಿ ಬೇಕಾಬಿಟ್ಟಿ ಗಾಡಿಗಳನ್ನ ಎಳೆದೊಯ್ಯಲು ಆರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ಕಮಿಷನರ್ಪ್ರ ಟೋಯಿಂಗ್​ ಸಿಬ್ಬಂದಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಮೊನ್ನೆಯಷ್ಟೆ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಈ ಸಂಬಂಧ ವೀಡಿಯೋ ಒಂದನ್ನ ಸಾಮಾಜಿಕ ಜಾಲತಾನದಲ್ಲಿ ಹರಿಬಿಡಲಾಗಿತ್ತು. ಒಂದು ಕಡೆ ಬೇಕಾಬಿಟ್ಟಿ ಗಾಡಿ ಎಳೆದೊಯ್ತಿದ್ದ ಟೋಯಿಂಗ್​ ಸಿಬ್ಬಂದಿ ಮತ್ತೊಂದು ಕಡೆ ಇದೇ ಟೋಯಿಂಗ್​ ಸಿಬ್ಬಂದಿ ಯಾರದ್ದೋ ಬೈಕ್​ನ ಪಾರ್ಟ್ಸ್ ಕದ್ದಿದ್ದು ಎರಡೂ ಆ ವಿಡಿಯೋದಲ್ಲಿತ್ತು. ಇದನ್ನು ಕಂಡ ಜನಸಾಮಾನ್ಯರು ಬೆಂಗಳೂರು‌ ಪೊಲೀಸರಿಗೆ ಟ್ಯಾಗ್​ ಮಾಡಿ, ನೋಡಿ ಸ್ವಾಮಿ ನಿಮ್ಮದೇ ಸಿಬ್ಬಂದಿ ಏನ್​ ಮಾಡ್ತಿದ್ದಾರೆ ಅಂತ ಪ್ರಶ್ನೆ ಕೂಡ ಮಾಡಿದ್ದರು.

ಪ್ರತಿ 2ನೇ ಶನಿವಾರ ನಡೆಯುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಕಮಿಷನರ್​ ಕಮಲ್​ ಪಂತ್​ಗೆ ಜನರು ನೇರವಾಗಿ ಟೋಯಿಂಗ್​ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ದೌರ್ಜನ್ಯದ ಬಗ್ಗೆ ವಿಡಿಯೋ ಸಮೇತ ವಿವರಣೆ ನೀಡಿದ್ದಾರೆ. ಅದನ್ನ ಕಂಡು ಗರಂ ಆದ ಕಮಿಷನರ್​ ಕಾರ್ಯಕ್ರಮ ಮುಗಿಸಿದ ಕೂಡಲೇ ಟ್ರಾಫಿಕ್​‌ ಕಮಿಷನರ್​ ಜೊತೆ ಸಭೆ ‌ನಡೆಸಿ ವಾರ್ನ್​ ಮಾಡಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಕಡಿವಾಣ ಹಾಕೋಕೆ ಅಂತಾಲೆ ನೂತನ ಪ್ಲ್ಯಾನ್​ಗೆ ಮುಂದಾಗಿದ್ದಾರೆ.

ಟೋಯಿಂಗ್​ ಸಿಬ್ಬಂದಿ ಏನ್​ ಮಾಡ್ತಿದ್ದಾರೆ ಅಂತ ಗೊತ್ತಾಗ್ತಿದೆ. ಇದರ‌ ಬಗ್ಗೆ ಜನ ಸಾಮಾನ್ಯರೂ‌ ಕೂಡ ನಮಗೆ‌ ದೂರು ನೀಡಿದ್ದಾರೆ. ಸದ್ಯ ಈ ಕುರಿತು ಟ್ರಾಫಿಕ್​ ಕಮಿಷನರ್​ಗೆ ತಿಳಿಸಿದ್ದೇನೆ. ಇನ್ನು ಮುಂದೆ‌ ಟೋಯಿಂಗ್​ ಸಿಬ್ಬಂದಿ ಯೂನಿಫಾರ್ಮ್​ಗೆ ಕ್ಯಾಮೆರಾ ಹಾಗೂ ಡೆಡಿಕೇಟೆಡ್​ ಸೆಲ್​ ತೆರೆಯಲು‌ ನಿರ್ಧರಿಸಿದ್ದೇವೆ, ಆದಷ್ಟು ಬೇಗ ಇದಕ್ಕೆ ಬ್ರೇಕ್​ ಹಾಕುತ್ತೇವೆ.
-ಕಮಲ್​ ಪಂತ್​, ಕಮಿಷನರ್​, ಬೆಂಗಳೂರು

ಟೋಯಿಂಗ್​ ಸಿಬ್ಬಂದಿ ಮಾಡ್ತಿರುವ ದೌರ್ಜನ್ಯದ ಕುರಿತು ಸದ್ಯ ಕಮಿಷನರ್​ ಒಂದು ದಿಟ್ಟ ನಿರ್ಧಾರ ತಾಳಿದ್ದು ಯೂನಿಫಾರ್ಮ್​ ಜೊತೆ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ. ಆ ಮೂಲಕ ಅವರು ಮಾಡುತ್ತಿರುವ ಅನ್ಯಾಯಕ್ಕೆ ಬ್ರೇಕ್​ ಹಾಕಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಯಾವುದೇ ಜನಸಾಮಾನ್ಯರು ದೂರು ಕೊಡಬೇಕು ಅಂದ್ರೆ ಅದಕ್ಕೆ ಡೆಡಿಕೇಟೆಡ್​ ಸೆಲ್​ ತೆರೆದು ಟೋಯಿಂಗ್​ ಸೆಲ್​‌ ಅಂತ‌ ಮಾಡೋಕೆ‌ ನಿರ್ಧರಿಸಿದ್ದಾರೆ.

 


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ