Breaking News
Home / ಜಿಲ್ಲೆ / ಬೆಂಗಳೂರು / 5 ಬಾರಿ ನೋಟಿಸ್ ಕೊಟ್ರೂ ಉತ್ತರಿಸಿಲ್ಲ.. ಆ ಲೇಡಿ ಯಾವ CD ನೂ ಕೊಟ್ಟಿಲ್ಲ -SIT ಸ್ಪಷ್ಟನೆ

5 ಬಾರಿ ನೋಟಿಸ್ ಕೊಟ್ರೂ ಉತ್ತರಿಸಿಲ್ಲ.. ಆ ಲೇಡಿ ಯಾವ CD ನೂ ಕೊಟ್ಟಿಲ್ಲ -SIT ಸ್ಪಷ್ಟನೆ

Spread the love

ಬೆಂಗಳೂರು: ಮಾಜಿ ಸಚಿವರ ವಿಡಿಯೋ ವಿವಾದಕ್ಕೆ ಸಂಬಂಧಿಸಿದ ಯುವತಿಯಿಂದ ನಮಗೆ ಯಾವುದೇ ವಿಡಿಯೋ ಬಂದಿಲ್ಲ ಎಂದು ಎಸ್​ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ.

ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ಅವರು ನಾವು ಯುವತಿಗೆ 5 ಬಾರಿ ನೋಟೀಸ್​ ಕೊಟ್ಟಿದ್ದೇವೆ, ಆದರೆ ಆಕೆ ಯಾವುದೇ ಉತ್ತರ ನೀಡಿಲ್ಲ, ಯುವತಿ ವಿಡಿಯೋದಲ್ಲಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಆಕೆ ಹೇಳಿರುವ ಸಮಯದಲ್ಲಿ ಎಸ್​ಐಟಿ ರಚನೆಯೇ ಆಗಿರಲಿಲ್ಲ. ನಮಗೆ ಆ ಯುವತಿಯಿಂದ ಯಾವುದೇ ವಿಡಿಯೋ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಯುವತಿ.. ನಾನು12 ತಾರೀಕು ವಿಡಿಯೋ ಮಾಡಿ ಕಮೀಷನರ್​ಗೆ ಮತ್ತು ಎಸ್​ಐಟಿ ತಲುಪಿಸಿದ್ದೇನೆ. ಆದರೆ ಮಾರ್ಚ್​ 13ರಂದು ರಮೇಶ್​ ಜಾರಕಿಹೊಳಿ ಅವರಿಂದ ತರಾತುರಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿ ಅರ್ಧ ಗಂಟೆಗೆ ನನ್ನ ವಿಡಿಯೋ ಬಿಟ್ಟಿದ್ದಾರೆ. ನನಗೆ ಅರ್ಥ ಆಗ್ತಿಲ್ಲಾ ಎಸ್​ಐಟಿ ಅವರು ಯಾರ ಪರ ಇದ್ದಾರೆ ಅಂತಾ. ಅವರು ಯಾರನ್ನ ಸೇವ್​ ಮಾಡ್ತಿದ್ದಾರೆ ಅಂತಾ ಸಹ ಗೊತ್ತಾಗ್ತಿಲ್ಲಾ ಎಂದು ಎಸ್​ಐಟಿ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ