Breaking News
Home / ರಾಷ್ಟ್ರೀಯ / ತ್ರಿವರ್ಣ ಧ್ವಜ, ಭಾರತದ ನಕ್ಷೆ ಇರುವ ಕೇಕ್‌ ಕತ್ತರಿಸುವುದು ‘ಅವಮಾನವಲ್ಲ’ : ಮದ್ರಾಸ್ ಹೈಕೋರ್ಟ್

ತ್ರಿವರ್ಣ ಧ್ವಜ, ಭಾರತದ ನಕ್ಷೆ ಇರುವ ಕೇಕ್‌ ಕತ್ತರಿಸುವುದು ‘ಅವಮಾನವಲ್ಲ’ : ಮದ್ರಾಸ್ ಹೈಕೋರ್ಟ್

Spread the love

ಚನ್ನೈ: ತ್ರಿವರ್ಣ ಧ್ವಜ ಮತ್ತು ಅಶೋಕ ಚಕ್ರ ವಿನ್ಯಾಸವಿರುವ ಕೇಕ್ ಕತ್ತರಿಸುವುದರಿಂದ 1971ರ ರಾಷ್ಟ್ರೀಯ ಗೌರವ ಕಾಯಿದೆ 1971ರ ಅಡಿಯಲ್ಲಿ ‘ಅವಮಾನ’ ವಲ್ಲವೆಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರಿದ್ದ ನ್ಯಾಯಾಪೀಠ ತೀರ್ಪು ನೀಡಿದೆ.

ಈ ಮೂಲಕ ಅವರು 2013ರಲ್ಲಿ ಕೇಕ್ ಕತ್ತರಿಸುವ ಪ್ರಕರಣದ ಬಗ್ಗೆ ಕೊಯಮತ್ತೂರ್ ಮ್ಯಾಜಿಸ್ಟ್ರೇಟ್ ಅವರು ಆರಂಭಿಸಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಹಲವು ಮಹತ್ವದ ಮಾಹಿತಿಗಳನ್ನು ನ್ಯಾಯಾಪೀಠ ತಿಳಿಸಿದೆ. ಇದೇ ವೇಳೆ ನ್ಯಾಯಾಪೀಠ ಭಾರತದಂತಹ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಬಹಳ ಮಹತ್ವದ್ದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ದೇಶ ಭಕ್ತಿ ಎನ್ನುವುದು ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳುವುದರಿಂದ ನಿರೂಪಿಸಲು ಸಾಧ್ಯವಾಗುವುದಿಲ್ಲ, ದೇಶದಲ್ಲಿ ಉತ್ತಮ ಅಡಳಿತಕ್ಕಾಗಿ ಹೋರಾಡುವವನು ಕೂಡ ದೇಶ ಭಕ್ತನಾಗಿರುತ್ತಾನೆ. ರಾಷ್ಟ್ರೀಯ ಸಂಕೇತಗಳು ದೇಶಭಕ್ತಿಗೆ ಸಮಾನಾರ್ಥಕವಲ್ಲ ಅಂತ ನ್ಯಾಯಾಪೀಠ ಹೇಳಿತ್ತು. ಇದೇ ವೇಳೆ ನ್ಯಾಯಾಪೀಠ ರವೀಂದ್ರನಾಥ ಠಾಕೂರರ ಮಾತುಗಳನ್ನು ಹೇಳಿತ್ತು.

ಪ್ರಕರಣದ ಹಿನ್ನಲೆ: 2013ರಿಂದ ಕ್ರಿಸ್ ಮಸ್ ದಿನ , ಭಾರತದ ನಕ್ಷೆ ಮತ್ತು ಅಶೋಕ ಚಕ್ರ ಚಿಹ್ನೆಯ 6×5 ಅಡಿ ಕೇಕ್ ಕತ್ತರಿಸಿ, 2,500 ಕ್ಕೂ ಹೆಚ್ಚು ಅತಿಥಿಗಳು ಸೇವಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೊಯಮತ್ತೂರ್ ಜಿಲ್ಲಾಧಿಕಾರಿ, ಪೊಲೀಸ್ ಉಪ ಆಯುಕ್ತರು, ವಿವಿಧ ಧಾರ್ಮಿಕ ಮುಖಂಡರು, ಎನ್ ಜಿಒಗಳ ಸದಸ್ಯರು ಭಾಗವಹಿಸಿದ್ದರು.

ಇದೇ ವೇಳೆ ಘಟನೆ ಸಂಬಂಧ, ಡಿ.ಸೆಂಥಿಲ್ ಕುಮಾರ್ ಎಂಬುವವರು, ಕೇಕ್ ನ ವಿನ್ಯಾಸವು ಭಾರತದ ರಾಷ್ಟ್ರಧ್ವಜವನ್ನು ಪ್ರತಿ ನಿಧಿಸುತ್ತದೆ. ಇದಲ್ಲದೇ ಅದನ್ನು ಕತ್ತರಿಸುವ ಕ್ರಿಯೆಯು ಭಾರತೀಯ ರಾಷ್ಟ್ರಧ್ವಜಕ್ಕೆ ಅವಮಾನವಾಗಲಿದ್ದು, ಇದು 1971ರ ಸೆಕ್ಷನ್ 2ರ ಪ್ರಕಾರ ಅಪರಾಧವಾಗಿದೆ (ಸೆಕ್ಷನ್ 2 ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ 3 ವರ್ಷಜೈಲು ಅಥವಾ ದಂಡ ಅಥವಾ ಎರಡನ್ನೂ ದಂಡವಾಗಿ ವಿಧಿಸುತ್ತದೆ) ಎಂದು ದೂರನ್ನು ಸಲ್ಲಿಸಿದರು. ಹೈಕೋರ್ಟ್ ನಲ್ಲಿ ಇದಕ್ಕೆ ಸಂಬಂಧಪಟ್ಠಂತೆ ಅರ್ಜಿ ಮ್ಯಾಜಿಸ್ಟ್ಟ್ರಿಟ್‌ ನ್ಯಾಯಾಲಯದಲ್ಲಿ ತಮಿಳುನಾಡು ರಾಜ್ಯ ಸರ್ಕಾರವು ಕ್ರಿಮಿನಲ್ ಮೊಕದ್ದಮೆಗಳನ್ನು , ಯಾವುದೇ ಅಪರಾಧ ಮಾಡಿಲ್ಲ ಎಂದು ನ್ಯಾಯಪೀಠದ ಮುಂದೆ ವಾದಿಸಿತು. ಈ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಾಗ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಪಟ್ಟಂತೆ ಅನುಮತಿ ಯನ್ನು ಪಡೆಯಲಾಗಿಲ್ಲ ಅಂತ ಕೂಡ ರಾಜ್ಯ ಸರ್ಕಾರ ತಿಳಿಸಿತ್ತು. ಇದೇ ವೇಳೆ ಕೇಸ್‌ ಅನ್ನು ವಿಚಾರಣೆಗೆ ಕೈಗೆ ಎತ್ತಿಕೊಂಡ ಮದ್ರಾಸ್‌ ಹೈಕೋರ್ಟ್‌ ಘಟನೆಗೆ ಸಂಬಂಧ ಪಟ್ಟಂತೆ ಹೂಡಲಾಗಿದ್ದ, ಕ್ರಿಮಿನಲ್‌ ಕೇಸ್‌ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ

Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ